Home Mangalorean News Kannada News ಬಿಲ್ಕಿಸ್ ಬಾನು ಪ್ರಕರಣ: ಸುಪ್ರೀಂ ಕೋರ್ಟ್ ತೀರ್ಪು ಮಹಿಳಾ ಸಮುದಾಯಕ್ಕೆ ಸಂದ ಜಯ – ವೆರೋನಿಕಾ...

ಬಿಲ್ಕಿಸ್ ಬಾನು ಪ್ರಕರಣ: ಸುಪ್ರೀಂ ಕೋರ್ಟ್ ತೀರ್ಪು ಮಹಿಳಾ ಸಮುದಾಯಕ್ಕೆ ಸಂದ ಜಯ – ವೆರೋನಿಕಾ ಕರ್ನೆಲಿಯೊ

Spread the love

ಬಿಲ್ಕಿಸ್ ಬಾನು ಪ್ರಕರಣ: ಸುಪ್ರೀಂ ಕೋರ್ಟ್ ತೀರ್ಪು ಮಹಿಳಾ ಸಮುದಾಯಕ್ಕೆ ಸಂದ ಜಯ – ವೆರೋನಿಕಾ ಕರ್ನೆಲಿಯೊ

ಉಡುಪಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ರದ್ದು ಪಡಿಸಿದ ಸುಪ್ರಿಂ ಕೋರ್ಟ್ ನ ತೀರ್ಪು ಇಡೀ ಮಹಿಳಾ ಸಮುದಾಯಕ್ಕೆ ಸಂದ ಜಯವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.

ದೇಶದ ಹಲವು ಮೂಲೆಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೊಂದ ಮಹಿಳೆಯರು ನ್ಯಾಯ ಸಿಗದೆ ಸಮಸ್ಯೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಅಂತಹ ಮಹಿಳೆಯರಿಗೆ ಅಶಾವಾದದಿಂದ ಬದುಕಲು ಪ್ರೇರೆಪಣೆ ನೀಡಿದಂತಾಗಿದೆ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಹಾರಾಷ್ಟ್ರ ನ್ಯಾಯಾಲಯ ಎಲ್ಲಾ ದೋಷಿಗಳಿಗೆ ಶಿಕ್ಷೆ ವಿಧಿಸಿದ್ದು, ಅವರನ್ನು ಬಿಡುಗಡೆ ಮಾಡುವ ಮೂಲಕ ಗುಜರಾತ್ ಸರ್ಕಾರ ತಪ್ಪು ನಿರ್ಧಾರಕ್ಕೆ ಕೈ ಹಾಕಿತ್ತು. ಇದರ ವಿರುದ್ದ ಮೇಲ್ಮನವಿ ಸಲ್ಲಿಸಿದ್ದರ ಪರಿಣಾಮ ದೋಷಿಗಳ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ಸ್ವಾಗತಾರ್ಹ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಗೋದ್ರೋತ್ತರ ಹತ್ಯಾಕಾಂಡದಲ್ಲಿ ಈ ಪ್ರಕರಣವೂ ಒಂದಾಗಿದ್ದು ಈ ಪ್ರಕರಣದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯ ಕುಟುಂಬದ 7 ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.

ಇಂತಹ ಹೇಯ ಕೃತ್ಯ ಎಸಗಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಅವಧಿಪೂರ್ವವಾಗಿ ಬಿಡುಗಡೆ ಮಾಡುವ ಮೂಲಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕುವ ಕೆಲಸ ಮಾಡಿತ್ತು. ಒಂದು ಕಡೆ ಬೇಟಿ ಬಚಾವೋ,ಬೇಟಿ ಪಡಾವೋ., ಎಂದು ನಾಟಕ ಮಾಡುವ ಬಿಜೆಪಿಗರು ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆಕೆ ಒಂದು ಹೆಣ್ಣು ಮಗಳು ಎಂಬುದನ್ನು ಮರೆತು ಅಪರಾಧಿಗಳ ಬಿಡುಗಡೆಯನ್ನು ಸಂಭ್ರಮಿಸಿದ್ದರು. ಸುಪ್ರೀಂ ಕೋರ್ಟ್ನ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನೂ ನಂಬಿಕೆ ಉಳಿಸಿಕೊಳ್ಳಬಹುದು ಎಂಬ ಭಾವನೆ ಮೂಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version