Home Mangalorean News Kannada News ಬಿಲ್ಲವ – ಮುಸ್ಲಿಮ್ ಸ್ನೇಹ ಸಮ್ಮಿಲನ ರದ್ದುಗೊಳಿಸಲು ಸ್ವಾಭಿಮಾನಿ ಬಿಲ್ಲವರ ಎಚ್ಚರಿಕೆ

ಬಿಲ್ಲವ – ಮುಸ್ಲಿಮ್ ಸ್ನೇಹ ಸಮ್ಮಿಲನ ರದ್ದುಗೊಳಿಸಲು ಸ್ವಾಭಿಮಾನಿ ಬಿಲ್ಲವರ ಎಚ್ಚರಿಕೆ

Spread the love

ಬಿಲ್ಲವ – ಮುಸ್ಲಿಮ್ ಸ್ನೇಹ ಸಮ್ಮಿಲನ ರದ್ದುಗೊಳಿಸಲು ಸ್ವಾಭಿಮಾನಿ ಬಿಲ್ಲವರ ಎಚ್ಚರಿಕೆ

ಉಡುಪಿ: ಅತ್ಯಂತ ಹಳೆಯ ಸಂಸ್ಕೃತಿಗಳನ್ನು ಒಳಗೊಂಡ ಸಮಾಜ ಬಿಲ್ಲವ ಸಮಾಜವಾಗಿದ್ದು ಕೋಟಿ ಚೆನ್ನಯ್ಯ ಕಾಂತಬಾರೆ, ಬೂದಬಾರೆ, ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೊಡಿಸಿಕೊಂಡು ಬಂದಿರುವ ಮುಗ್ಗದ ಸಮಾಜವನ್ನು ಒಡೆಯುವ ಷಡ್ಯಂತರ ಕೆಲವೊಂದು ಸ್ವಾರ್ಥ ಬಿಲ್ಲವ ನಾಯಕರ ಮೂಲಕ ಜನವರಿ 11 ರಂದು ಆಯೋಜಿಸಿರುವ ಬಿಲ್ಲವ –ಮುಸ್ಲಿಮ್ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಸ್ವಾಭೀಮಾನಿ ಬಿಲ್ಲವರು ವಿರೋಧಿಸುತ್ತೇವೆ ಎಂದು ಬಿಲ್ಲವ ಮುಖಂಡ ಅಚ್ಯುತ ಅಮೀನ್ ಹೇಳಿದರು.

ಅವರು ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಈ ಸಮಾವೇಶದ ಉದ್ದೇಶ ರೂಪುರೇಷೆಗಳು ದುರುದ್ದೇಶ ಮತ್ತು ಹಿಂದೂ ಸಮಾಜವನ್ನು ಒಡೆಯುವ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿ ಸ್ವಾಭಿಮಾನಿ ಬಿಲ್ಲವ ಸಮಾಜ ಅರಿತಿದೆ. ನಾವು ವೈಚಾರಿಕವಾಗಿ ಹಾಗೂ ಸಾಂಸ್ಕೃತಿವಾಗಿ ಎಲ್ಲೂ ಹೊಂದಾಣಿಕೆ ಆಗುತ್ತಿಲ್ಲ. ಮುಸ್ಲಿಮ್ ಸಮಾಜ ನಮ್ಮ ಸಮಾಜದ ಮೇಲೆ ಮಾಡಿರುವ ಹತ್ಯೆ, ಹೆಣ್ಣುಮಕ್ಕಳ ಅಪಹರಿಸಿ ಅರಬ್ ರಾಷ್ಟ್ರಗಳಿಗೆ ಮಾರಾಟ ಮಾಡಿರುವುದು, ಹಟ್ಟಿಯಲ್ಲಿನ ಗೋವುಗಳನ್ನು ಕದ್ದು ಕಸಾಯಿಖಾಣೆಗೆ ಸಾಗಿಸಿ ಕುಟುಂಬವನ್ನೇ ಅತಂತ್ರಗೊಳಿಸಿರುವುದನ್ನು ಬಿಲ್ಲವ ಸಮಾಜ ಮರೆಯಲು ಸಾಧ್ಯವಿಲ್ಲ.

ರಾಷ್ಟ್ರಭಕ್ತ ಬಿಲ್ಲವ ಸಮಾಜದ ಆಚಾರ ವಿಚಾರ ಯಾವ ಹಂತದಲ್ಲೂ ಹೊಂದಾಣಿಕೆ ಸಾಧ್ಯವಿಲ್ಲ. ಬಿಲ್ಲವರು ಜನಗಣ ಮನ, ವಂದೇಮಾತರಂ ಯಾವ ಅಂಜಿಕೆ ಇಲ್ಲದೆ ಹಾಡುವ ಸಮಾಜ ದೇಶ ನಮಗೆ ಮೊದಲು. ಬಿಲ್ಲವರು ಮುಕ್ಕೋಟಿ ದೇವರು ದೈವಾರಾಧಕರಾಗಿದ್ದು ಇವೆಲ್ಲಕ್ಕಿಂತ 70% ಬಿಲ್ಲವ ಸಮಾಜಕ್ಕೆ ಪೋರ ಅನ್ಯಾಯವಾಗಿರುವುದು ಇದೇ ಮುಸ್ಲಿಮ್ ಸಮಾಜದಿಂದ ಇದನ್ನು ಮರೆಯಲು ಸಾಧ್ಯವಿಲ್ಲ.

ಈ ಸಮಾಜದಿಂದ ಹತ್ಯೆಗೊಳಗಾದ ಕುಟುಂಬಕ್ಕೆ ಈ ಸ್ನೇಹ ಸಮ್ಮಿಲನದಿಂದ ಏನು ಸಂದೇಶ ಕೊಡಲು ಹೊರಟಿದೆ ಎಂದು ಪ್ರಶ್ನಿಸಿದ ಅವರು ಇಂತಹ ಡೋಂಗಿ ನಾಟಕ ಕಂಪೆನಿಯಲ್ಲಿ ನಟಿಸುವ ಕಪಟ ರಾಜಕಾರಣಿಗಳ ಮರ್ಮವನ್ನು ಬಿಲ್ಲವ ಸಮಾಜ ಅರಿತಿದ್ದು ಈಗಾಗಲೇ ಸ್ಪಷ್ಟ ಸಂದೇಶ ನೀಡಲಾಗಿದೆ. ಮಂತ್ರಿಗಳು, ಹಾಗೂ ಬಹಳಷ್ಟು ಸಮಾಜದ ಪ್ರಮುಖರು ಈಗಾಗಲೇ ಈ ಡೋಂಗಿ ಸಮ್ಮಿಲನದಲ್ಲಿ ಭಾಗವಹಿಸುವುದಿಲ್ಲ ಎಂದು ಸಂದೇಶ ನೀಡಿದ್ದಾರೆ.

ಇಂತಹ ಸಮಾಜದ ಸ್ವಾಸ್ಥ್ಯ ಹಾಳುಗೇಡವಹುವ ಕಾರ್ಯಕ್ರಮಗಳಗಿಎ ಶಾಂತಿಗೆ ಹೆಸರು ವಾಸಿಯಾಗಿರುವ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳು ಅನುಮತಿ ನೀಡದೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸ್ವಾಭಿಮಾನಿ ಬಿಲ್ಲವ ಸಮಾಜದ ಮನವಿ ಮಾಡಿದ್ದು ಜನವರಿ 9ರ ಒಳಗಾಗಿ ಕಾರ್ಯಕ್ರಮ ರದ್ದುಗೊಳಿಸುವುದು ಅಥವಾ ಬಿಲ್ಲವ ಶಬ್ದವನ್ನು ಕಾರ್ಯಕ್ರಮದಿಂದ ಕೈಬಿಡುವ ಸೂಕ್ತ ಕ್ರಮ ಕೈಗೊಳ್ಳಲ್ಲದಿದ್ದಲ್ಲಿ ಎಲ್ಲಾ ಸಮಾಜ ಬಾಂಧವರನ್ನು ಒಳಗೊಂಡು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಿರಣ್ ಕುಮಾರ್, ಸುನೀಲ್ ಕೆ ಆರ್, ರಾಮಚಂದ್ರ ಸನೀಲ್, ಮಹೇಶ್ ಪೂಜಾರಿ, ಬಿ ಪಿ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version