ಬಿಲ್ಲವ ಸಮಾಜದ ಭವಿಷ್ಯದ ನಾಯಕ ಅಶೋಕ್ ಬೀಜಾಡಿ: ನರೇಂದ್ರ ಕುಮಾರ್ ಕೋಟ

Spread the love

ಬಿಲ್ಲವ ಸಮಾಜದ ಭವಿಷ್ಯದ ನಾಯಕ ಅಶೋಕ್ ಬೀಜಾಡಿ: ನರೇಂದ್ರ ಕುಮಾರ್ ಕೋಟ

  • ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 170ನೆಯ ಜನ್ಮದಿನಾಚರಣೆ ಅಂಗವಾಗಿ ಸಾಮೂಹಿಕ ಗುರುಪೂಜೆ

ಕುಂದಾಪುರ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಶಿರಿಯಾರದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 170ನೆಯ ಜನ್ಮದಿನಾಚರಣೆ ಅಂಗವಾಗಿ ಸಾಮೂಹಿಕ ಗುರುಪೂಜೆ ಸಮಾರಂಭವು ರವಿವಾರದಂದು ಶಿರಿಯಾರ ಕೊಳ್ಳೆಬೈಲು ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ನಡೆಯಿತು.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಮಾತನಾಡಿ, ಸಮಾಜದ ಬೆಳವಣಿಗೆ ಜನಾಂಗದ ಬೆಳವಣಿಗೆ ಜೊತೆ ಸಾಗಬೇಕು. ಯಾವುದೇ ಸಮುದಾಯ ಬೆಳೆಯಲು ಸಂಘಟನೆ ಅಗತ್ಯ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆದಾಯಕ. ಶ್ರೀ‌ ನಾರಾಯಣ ಗುರುಗಳ ಸಂದೇಶ ಇಲ್ಲಿ ಅನಾವರಣಗೊಂಡಿದೆ. ಗಟ್ಟಿ ನಾಯಕತ್ವ ಸಮಾಜವನ್ನು ಮುನ್ನಡೆಸುತ್ತದೆ. ಈ ನಿಟ್ಟಿನಲ್ಲಿ ಅಶೋಕ್ ಪೂಜಾರಿ ಬೀಜಾಡಿ ಮುಂದಾಳತ್ವದ ಬಿಲ್ಲವ ಸಂಘ ಸಮುದಾಯದ ಏಳಿಗೆಗೆ ಮುಂದಾಗಿದೆ. ಬಿಲ್ಲವ ಸಮಾಜದ ಭವಿಷ್ಯದ ನಾಯಕರಾಗಿ ಅಶೋಕ್ ಬೀಜಾಡಿ ಕಾಣುತ್ತಿದ್ದಾರೆ ಎಂದ ಅವರು, ಯುವ ಜನಾಂಗ ಸಂಘ ಕಟ್ಟುವ ಕೆಲಸದಲ್ಲಿ ಮುಂದಾಗಬೇಕು, ದುಶ್ಚಟಗಳಿಂದ ದೂರವಿರಬೇಕು ಎಂದರು.

ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಅಧ್ಯಕ್ಷ ತಿಮ್ಮ ಪೂಜಾರಿ ಮಾತನಾಡಿ, ಗ್ರಾಮಗ್ರಾಮಗಳಲ್ಲಿ ಸಂಘಟನೆಯನ್ನು ಅಶೋಕ್‌ ಬೀಜಾಡಿ ನೇತೃತ್ವದ ತಂಡ ಬೆಳೆಸುತ್ತಿದೆ. ನಾಯಕತ್ವದ ಮೂಲಕ ಸಂಘಟನೆ ಇನ್ನಷ್ಟು ಬಲಿಷ್ಟವಾಗಬೇಕು ಎಂದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ‌ ಮಾತನಾಡಿ, ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಕೇಂದ್ರ ಹಾಗೂ ರಾಜ್ಯ ಸರಕಾರದ ನೌಕರಿ ಪಡೆಯುವಲ್ಲಿ ಶ್ರಮವಹಿಸಬೇಕು. ಆಸಕ್ತಿಯುಳ್ಳವರು ರಾಜಕೀಯ ಕ್ಷೇತ್ರದಲ್ಲೂ ಬೆಳೆಯಬೇಕು. ಶ್ರೀ ನಾರಾಯಣ ಗುರುಗಳ ಆಶಯದಂತೆ ಶಿಕ್ಷಣದಿಂದ ಸಮಾಜ ಕಟ್ಟಲು ಸಾಧ್ಯವಿದೆ. ಎಲ್ಲಾ ಶೋಷಿತ ಸಮುದಾಯಗಳ ಏಳಿಗೆ ಶಿಕ್ಷಣದಿಂದ ಸಾಧ್ಯ ಎಂದರು.

ಭಜನಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಶಿರಿಯಾರದ ಗೌರವಾಧ್ಯಕ್ಷ ಬಾಬು ನಾಯ್ಕ ಬಡಾಕೇರಿ, ಉಪಾಧ್ಯಕ್ಷ ಸಂಜೀವ ಪೂಜಾರಿ ಕೊಡಿಯಾರಮನೆ ಉದ್ಘಾಟಿಸಿದರು. ಇದೇ ಸಂದರ್ಭ ಕೊಳ್ಕೆಬೈಲು ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ‌ಅರ್ಚಕ ಗಿರಿಯ ಪೂಜಾರಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಬಾಬು ನಾಯ್ಕ ಬಡಾಕೇರಿ,ಶೇಖರ್ ಸುವರ್ಣ ಜೆಡ್ಡಿನಮನೆ ಅವರನ್ನು ಸನ್ಮಾನಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಶಿರಿಯಾರದ ಅಧ್ಯಕ್ಷ ದಿನೇಶ್ ಪೂಜಾರಿ ಕುಂಬಾರಮಕ್ಕಿಜೆಡ್ಡು ಅಧ್ಯಕ್ಷತೆ ವಹಿಸಿದ್ದು ಕೋಶಾಧಿಕಾರಿ ಹೆರಿಯ ಪೂಜಾರಿ, ಬ್ರಹ್ಮಾವರ ಸಮುದಾಯ ಕೇಂದ್ರದ ಮುಖ್ಯದಂತ ಆರೋಗ್ಯಾಧಿಕಾರಿ ಡಾ. ಪ್ರದೀಪ್ ಪೂಜಾರಿ ಕೆ., ಯುವ ವೇದಿಕೆ ಅಧ್ಯಕ್ಷ ಶರತ್ ಪೂಜಾರಿ ಜೆಡ್ಡಿನಮನೆ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪೂಜಾರಿ ಭಟ್ರಮಕ್ಕಿ ಇದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಶಿರಿಯಾರದ ಮಾಜಿ ಅಧ್ಯಕ್ಷ ಭಾಸ್ಕರ ಪೂಜಾರಿ ಸಕಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಪಡುಮುಂಡು ನಿರೂಪಿಸಿ, ಈಶ್ವರ ಪೂಜಾರಿ‌ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments