ಬಿಸಿಲ ಝಳ ಲೆಕ್ಕಿಸದೆ ಮಣಿಪಾಲದಲ್ಲಿ ಮದ್ಯಕ್ಕಾಗಿ ಸಾಲು ನಿಂತ
ವಿದ್ಯಾರ್ಥಿಗಳು !
ಉಡುಪಿ: ಸುಮಾರು ನಲವತ್ತು ದಿನಗಳಿಂದ ಮದ್ಯದ ರುಚಿಯಿಂದ ಹೊರಗಿದ್ದ ವಿದ್ಯಾರ್ಥಿಗಳು ಕೂಡ ಸೋಮವಾರ ಮದ್ಯಕ್ಕಾಗಿ ಸಾಲು ನಿಂತ ದೃಶ್ಯ ಉಡುಪಿ ಜಿಲ್ಲೆಯ ಮಣಪಾಲದಲ್ಲಿ ಕಂಡು ಬಂತು.
ರಾಜ್ಯ ಸರಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನಿಂತ ಹಿನ್ನಲೆಯಲ್ಲಿ ಬಿಸಿಲ ಝಳದಲ್ಲಿ ಕೊಡೆ ಹಿಡಿದುಕೊಂಡು ಸಾಲಲ್ಲಿ ಕೆಲವೊಂದು ವಿದ್ಯಾರ್ಥಿಗಳು ಮದ್ಯವನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.
ಒಂದುವರೆ ತಿಂಗಳ ಬಳಿಕ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದ ವಿದ್ಯಾರ್ಥಿಗಳು ಎಣ್ಣೆಯನ್ನು ಕಂಡು ಫುಲ್ ಖುಶ್ ಆಗಿದ್ದಾರೆ.
ಲಾಕ್ ಡೌನ್ ಮೊದಲು ಮಣಿಪಾಲದಲ್ಲಿ ನೈಟ್ ಲೈಫ್ ಎಂಜಾಯ್ ಮಾಡುತ್ತಿದ್ದ ವಿದ್ಯಾರ್ಥಿಗಳು ಲಾಕ್ ಡೌನ್ ನಂತರ ಈ ವಿದ್ಯಾರ್ಥಿಗಳು ಹಾಸ್ಟೆಲುಗಳು ಮತ್ತು ಪಿಜಿಗಳಲ್ಲಿ ಬಂಧಿಯಾಗಿದ್ದರು. ಊರಿಗೆ ಹೋಗಲಾಗದೆ ಇಲ್ಲೇ ಸಿಕ್ಕಿಬಿದ್ದಿರುವ ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇಷ್ಟು ದಿನ ಮದ್ಯ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದರು.
ಆದರೆ ಸೋಮವಾರ ಮತ್ತೆ ಮದ್ಯ ಮಾರಾಟ ಆರಂಭವಾಗುವ ಸುದ್ದಿ ತಿಳಿದ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ಸಾರ್ವಜನಿಕವಾಗಿ ಸಾಲು ನಿಂತು ಮಧ್ಯ ಖರೀದಿ ಮಾಡಿದರು. ಈ ನಡುವೆ ಒರ್ವ ವಿದೇಶಿ ಮಹಿಳೆ ಕೂಡ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು.
ಕೂಲಿಕಾರ್ಮಿಕರ ಸಾಲಿನಲ್ಲಿ ಕಂಡುಬಂದ ಸಾಮಾಜಿಕ ಅಂತರ ಈ ಪ್ರತಿಷ್ಠಿತ ವಿದ್ಯಾರ್ಥಿಗಳಲ್ಲಿ ಕಂಡುಬರಲಿಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ.