ಬಿ.ಸಿ.ಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 “

Spread the love

ಬಿ.ಸಿ.ಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 “

ಅನಿವಾಸಿ ಕನ್ನಡಿಗ ಬ್ಯಾರೀ ಸಮುದಾಯದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ನಡೆಯುವ ಬಹು ಚರ್ಚಿತ ವಾರ್ಷಿಕ ಕ್ರೀಡಾ ಕೂಟ ” ಬಿ.ಸಿ.ಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್ 2018 ” ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆಯನ್ನು UAE ಯ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಯ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು.

UAE ಯ ವಿವಿಧ ಭಾಗಗಳಿಂದ ಆಗಮಿಸಿದ ಅನಿವಾಸಿ ಕನ್ನಡಿಗರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಈ ಸಮಾವೇಶದ ನೇತೃತ್ವವನ್ನು BCF ಪ್ರಧಾನ ಕಾರ್ಯದರ್ಶಿ ಡಾ ಕಾಪು ಮಹಮ್ಮದ್, BC F ಉಪಾಧ್ಯಕ್ಷರಾದ ಜ: ಎಂ, ಈ, ಮೂಳೂರು , ಜ: ಅಬ್ದುಲ್ ಲತೀಫ್ ಮುಲ್ಕಿ, BCF ಕ್ರೀಡಾ ಸಮಿತಿಯ ಚಯರ್ಮನ್ ಜ ಅಫೀಕ್ ಹುಸೈನ್, ಹಾಗೂ ಇತರ BC F ಪದಾಧಿಕಾರಿಗಳು, ಹಾಗೂ ಹಿತೈಷಿಗಳು ಭಾಗವಹಿಸಿದ್ದರು.

ನಿರಂತರವಾಗಿ ಸುಮಾರು 25 -30 ದಿನಗಳ ತನಕ ನಡೆಯುವ ಈ ಕ್ರೀಡಾ ಕೂಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಮೇತ ನೂರಾರು ಕ್ರೀಡಾ ಪಟುಗಳು ಪಾಲ್ಗೊಳ್ಳುತ್ತಿದ್ದು ತರಹೇವಾರು ಆಟೋಟ ಸ್ಪರ್ಧೆಗಳನ್ನುಏರ್ಪಡಿಸಲಾಗುವುದು, ಈ ಕ್ರೀಡಾ ಮೇಳದ ಸಮಾರೋಪ ಸಮಾರಂಭವು ದಿನಾಂಕ 02 / 02 /2018 ನೇ ಶುಕ್ರವಾರ ನೆರವೇರಲಿದ್ದು ಬಹು ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ವಾಲೀ ಬಾಲ್, ಫುಟ್ ಬಾಲ್, ಕ್ರಿಕೆಟ್, ಕೊಕೊ, ಟೆನಿಸ್, ಬಿಲಿಯರ್ಡ್ಸ್, ರನ್ನಿಂಗ್ ರೇಸ್, ರಿಲೇ, ಕಬಡ್ಡಿ, ಟಗ್ ಆಫ್ ವಾರ್, ,ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ವಿಶೇಷವಾದ ವಿವಿಧ ಆಟೋಟ ಸ್ಪರ್ಧೆಗಫಳನ್ನು ಏರ್ಪಡಿಸಲಾಗುವುದು.

ಮಹಿಳೆಯರಿಗೆ ವಿಶೇಷವಾಗಿ ಪಾಕ ಸ್ಪರ್ಧೆ, ಮೆಹಂದಿ ಡಿಸೈನ್ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುವುದು.
BCF ಅಧ್ಯಕ್ಷರಾದ ಡಾ B K ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತ ಅತಿಥಿಗಳಾಗಿ ಮಂತ್ರಿಗಳು, ಶಾಸಕರು , ಖ್ಯಾತ ಕ್ರೀಡಾ ಪಟುಗಳು, ರಾಜಕೀಯ, ಉದ್ದಿಮೆ, ಶಿಕ್ಷಣ, ಆರೋಗ್ಯ, ಹೀಗೆ ವಿವಿಧ ಕ್ಷೇತ್ರದ ನೇತಾರರು ಭಾಗವಹಿಸುವ ನಿರೀಕ್ಷೆ ಇದೆ.

ಬೆಳಿಗ್ಗೆ 8 .30 ರಿಂದ ರಾತ್ರಿ 8 ಗಂಟೆಯ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನ ಹಾಗೂ ಲಘು ಉಪಹಾರ , ಪಾನೀಯವನ್ನೂ ಉಚಿತವಾಗಿ ನೀಡಲಾಗುವುದು.
ಪಂದ್ಯಾಟದಲ್ಲಿ ಗೆದ್ದವರಿಗೆ ಸ್ಮರಣಿಕೆಯನ್ನು ಹಾಗೂ ಪ್ರೋತ್ಸಾಹ ಬಹುಮಾನವನ್ನೂ ನೀಡಿ ಗೌರವಿಸಲಾಗುವುದು.

ಕಾರ್ಯ ಕ್ರಮದಲ್ಲಿ ಭಾಗವಹಿಸಲು ಇಶ್ಚಿಸುವವರು, ಪಂದ್ಯಾಟಗಳಲ್ಲಿ ಪಾಲ್ಗೊಳ್ಲಲು ಬಯಸುವವರು ಈ ಕೆಳಗಿನ ಮೊಬೈಲ್ ನಂಬರಿಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.
050-5883943,
050-8417475,
055-2218351
050-5156284
For Cookery and Mehandi Competition, Ladies and Children games- 056-2721152,


Spread the love