‘ಬೀಕನ್ಸ್’ ಆಳ್ವಾಸ್ ವಿದ್ಯಾರ್ಥಿಗಳು ಚಾಂಪಿಯನ್ಸ್

Spread the love

‘ಬೀಕನ್ಸ್’ ಆಳ್ವಾಸ್ ವಿದ್ಯಾರ್ಥಿಗಳು ಚಾಂಪಿಯನ್ಸ್

ವಿದ್ಯಾಗಿರಿ: ನಿಟ್ಟೆ ಸಮೂಹ ಸಂವಹನ ಸಂಸ್ಥೆಯ ವತಿಯಿಂದ ಇತ್ತಿಚೆಗೆ ನಡೆದ ಏಳನೇ ಆವೃತ್ತಿಯ ‘ಬೀಕನ್ಸ್’ ಮಾಧ್ಯಮೋತ್ಸವದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ಬೀಕನ್ಸ್‍ನಲ್ಲಿ ವಿದ್ಯಾರ್ಥಿಗಳಿಗಾಗಿ ರ್ಯಾಪ್ ಮಾಕ್ ಪ್ರೆಸ್, ಸ್ಟ್ರೀಟ್ ಪ್ಲೇ, ಮ್ಯಾಡ್‍ಆಡ್, ಫೆಸ್ ಪೈಂಟಿಂಗ್, ಕ್ರಿಯೇಟಿವ್‍ರೈಟಿಂಗ್, ಸ್ಟಾಪ್ ಮೋಶನ್ ಹೀಗೆ ಪ್ರೀ ಇವೆಟ್ಸ್‍ಗಳು ಸೇರಿದಂತೆ 17 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಟಿ.ವಿ ಕಮರ್ಷಿಯಲ್‍ಗೆ ಪ್ರಥಮ ಬಹುಮಾನದೊಂದಿಗೆ ನಗದು ಬಹುಮಾನ ರೂ 2500, ‘ಐಸ್‍ಕ್ರೀಮ್’ ಕಿರುಚಿತ್ರಕ್ಕೆ ಪ್ರಥಮ ಬಹುಮಾನದೊಂದಿಗೆ ನಗದು ಬಹುಮಾನ ರೂ 5000, ಕನ್ನಡ ಕ್ರಿಯೇಟಿವ್ ರೈಟಿಂಗ್‍ನಲ್ಲಿ ಶ್ರೀರಾಜ್. ಎಸ್. ಆಚಾರ್ಯ ಪ್ರಥಮ, ಮ್ಯಾಡ್ ಆ್ಯಡ್‍ನಲ್ಲಿ ಗೌರವ್‍ರೈ, ಸೌಮ್ಯ ಬನಾನ್, ನವೀನ್ ಕುಬೇರ್, ವಿದ್ಯಾರಣ್ಯ ರಾವ್, ಹೇಮಂತ್, ನಾಗಶ್ರೀ ತಂಡ ಪ್ರಥಮ, ಮೂವಿ ಸ್ಪೂಫ್‍ನಲ್ಲಿ ಆಕಾಶ್, ತೇಜು, ದಿಶಾ ಶೆಟ್ಟಿ, ಚರಣ್, ಆದಿತ್ಯ, ಕಾರ್ತಿಕ್ ಕಬೂರ್ ತಂಡ ಪ್ರಥಮ, ಡಿಜಿಟಲ್ ಪೋಸ್ಟರ್ ಮೇಕಿಂಗ್‍ನಲ್ಲಿ ಸಮೃದ್ಧಿ ಪ್ರಥಮ, ರ್ಯಾಪ್ ವಿಭಾಗದಲ್ಲಿ ದಿಂಪಾನ್ಶು ಪ್ರಥಮ ಹಾಗೂ ವೆಸ್ಟರ್ನ್ ಮ್ಯೂಸಿಕ್ ರೋಹಿತ್, ಜೇಸನ್, ಅರುಣ್‍ರಾಜ್, ದೀಪಾನ್ಶು, ಸಂಜನಾ, ಗ್ರೇಶಲ್, ವ್ಯೋನಾ, ಶ್ರೇಯಾ ಮತ್ತು ಮರೂಫ್ ತಂಡ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಆಳ್ವಾಸ್ ಕಾಲೇಜು ಸತತವಾಗಿ ಎರಡನೆ ವರ್ಷ ಸಮಗ್ರ ಚಾಂಪಿಯನ್ ಆಗಿ ಮೂಡಿ ಬಂದಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ ಮೋಹನ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪಾಚಾರ್ಯ ಡಾ ಕುರಿಯನ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಹಾಗೂ ಪದವಿ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್‍ಕುಮಾರ್ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.


Spread the love