Home Mangalorean News Kannada News ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ ,ವ್ಯಕ್ತಿಗಳ ಬಂದನ

ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ ,ವ್ಯಕ್ತಿಗಳ ಬಂದನ

Spread the love

ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ . ವ್ಯಕ್ತಿಗಳ ಬಂದನ

ಮಂಗಳೂರು : ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತಗಳಾದ ಎಲ್ ಎಸ್ ಡಿ , ಎಂ.ಡಿ ಎಂ.ಎ ಮತ್ತು ಎಂ ಡಿ ಎಂ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡುತ್ತಿದ್ದ ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹ ದಳದ ತಂಡದವರು ಬೇದಿಸಿ ದಸ್ತಗರಿ ಮಾಡುವಲ್ಲಿ ಈಗಾಗಲೇ ಯಶಸ್ವಿಯಾಗಿರುತ್ತಾರೆ.

ಮಂಗಳೂರು ದಕ್ಷಿಣ ಉಪವಿಬಾಗದ ರೌಡಿ ನಿಗ್ರಹ ದಳದ ಸಹಾಯಕ ಪೊಲಿಸ್ ಆಯುಕ್ತರಿಗೆ ಈ ಮೊದಲು ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಈ ಮೊದಲು ನಿಖಿಲ್ ಕೆ ಬಿ , ಶ್ರವಣ ಪೂಜಾರಿ , ರೋಶನ್ ವೇಗಸ್ , ಬಾಶೀಂ ಬಶೀರ್ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಈ ಪ್ರಕರಣದಲ್ಲಿ ಇತರ ಆರೋಪಿಗಳಾಗಿದ್ದ ದಸ್ತಗಿರಿಗೆ ಬಾಕಿ ಇದ್ದ ಆರೋಪಿಗಳಾದ ಆಸ್ಟಿನ್ (29), ಅನೂಪ್ ಡಿ’ಆಲ್ಮೇಡಾ (26) ಎಂಬ ಆರೋಪಿಗಳನ್ನು ಸೋಮವಾರ ವಶಕ್ಕೆ ಪಡೆದುಕೊಂಡು ಬಂಧಿತರಿಂದ ಎಂ ಡಿ ಎಂ ಪೀಲ್ಸ್ -93, ಹುಂಡೈ ಇಯಾನ್ ಕಾರು-1, ಮೊಬೈಲ್ ಪೋನ್ಗಳು-3,ನಗದು ಹಣ – 30,850/- ಸ್ವಾದೀನಪಡಿಸಿಕೊಳ್ಳಲಾಗಿದೆ.

ಸ್ವಾದೀನ ಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ ರೂ 2,36,000/- ಆಗ ಬಹುದು. ಮೇಲ್ಕಂಡ ಆರೋಪಿಗಳಲ್ಲಿ ಕಾರ್ಲ್ ಎಂಬಾತನ ಮೇಲೆ 2014 ಮತ್ತು 2015 ಎನ್.ಸಿ.ಬಿ. ಬೆಂಗಳೂರು ಇಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ ಆರ್ ಸುರೇಶ್ ಐ,ಪಿ,ಎಸ್, ರವರ ನಿದರ್ೇಶನದಂತೆ , ಮಾನ್ಯರಾದ ಹನುಮಂತರಾಯ (ಐಪಿಎಸ್) ಡಿ.ಸಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ ) ಮತ್ತು ಉಮಾ ಪ್ರಶಾಂತ್ ಡಿಸಿಪಿ (ಅಪರಾದ ಮತ್ತು ಸಂಚಾರ ವಿಭಾಗ ) ರವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ ಸಿ ಪಿ ರಾಮರಾವ್ ರವರು ಉಳ್ಳಾಲ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಮತ್ತು ಸಿಬ್ಬಂದಿಯವರಾದ ಎಎಸ್ಐ ಸುಂದರ ಅಚಾರ್, ಹೆಚ್ ಸಿ ಗಳಾದ ಮೋಹನ್ ಕೆ ವಿ, ಗಿರೀಶ್ ಬೆಂಗ್ರ್ರೆ, ರವಿನಾಥ್, ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ ಯಂ, ರವಿಚಂದ್ರ ಪಡ್ರೆ , ದಾಮೋದರ, ರಾಜರಾಮ ಕೆ, ಮಹಮದ್ ಶರೀಪ್, ದಯಾನಂದ, ಸುದೀರ್ ಶೆಟ್ಟಿ, ಮಹೇಶ್ ಪಾಟಾಳಿ ಮತ್ತು ಮೊಹಮ್ಮದ್ ಇಕ್ಬಾಲ್ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.

 


Spread the love

Exit mobile version