ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಮಂಗಳವಾರ ಮಧ್ಯಾಹ್ನ 2014-2015ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಚಿಕ್ಕೋಡಿ 2ನೇ ಹಾಗೂ ಉತ್ತರ ಕನ್ನಡ 3ನೇ ಸ್ಥಾನ ಪಡೆದಿದೆ. ಗದಗ ಜಿಲ್ಲೆಗೆ ಕೊನೆ ಸ್ಥಾನ ಸಿಕ್ಕಿದೆ. 36 ಶಾಲೆಗಳ ಶೂನ್ಯ ಸಂಪಾದನೆ ಮಾಡಿವೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 8,56,366 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8,37,433 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟಾರೆ ನೋಂದಾಯಿತ ವಿದ್ಯಾರ್ಥಿಗಳಲ್ಲಿ 4.52 ಲಕ್ಷ ಬಾಲಕರು ಹಾಗೂ 4.03 ಬಾಲಕಿಯರಿದ್ದಾರೆ. ಅಲ್ಲದೆ, 16,337 ಖಾಸಗಿ ಮತ್ತು 32,607 ಪುನರಾವರ್ತಿತ ವಿದ್ಯಾರ್ಥಿಗಳೂ ಸೇರಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಸಿನ್ ಫಲಿತಾಂಶವನ್ನು ಪ್ರಕಟಿಸಿದರು. ಈ ಬಾರಿ ಶೇಕಡ 81.82ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.86.23 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 77.85 ಬಾಲಕರು ಉತ್ತೀರ್ಣರಾಗಿದ್ದಾರೆ.
ಪ್ರಥಮ ಭಾಷೆಯಲ್ಲಿ 1796 ವಿದ್ಯಾರ್ಥಿಗಳು ಪೂರ್ಣ ಅಂಕಗಳಿಸಿದರೆ, ಗಣಿತದಲ್ಲಿ 1434 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 308 ವಿದ್ಯಾರ್ಥಿಗಳು ಪೂರ್ಣ ಅಂಕಗಳಿಸಿದ್ದಾರೆ.
ಜೂನ್ 15ರಿಂದ 22ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಮೇ 21ಕ್ಕೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಉತ್ತರ ಪತ್ರಿಕೆ ಫೋಟೋ ಪ್ರತಿ ಸಲ್ಲಿಸಲು ಮೇ 22 ಕೊನೆ ದಿನಾಂಕವಾಗಿದೆ.
ಮೇ 13ರಂದು ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು 8 ಲಕ್ಷದ 37 ಸಾವಿರ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಾರೆ.
ಪಂಚಾಯತ್ ಚುನಾವಣೆಗೆ ನೀತಿ ಸಂಹಿತೆ ಜಾರಿ ಆಗಿದ್ದ ಕಾರಣ ಈ ಬಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವ ಕಿಮ್ಮನೆ ರತ್ನಾಕರ್ ಫಲಿತಾಂಶ ಪ್ರಕಟಿಸಲಿಲ್ಲ. ಬದಲಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಸಿನ್ ಫಲಿತಾಂಶವನ್ನು ಪ್ರಕಟಿಸಿದರು.
ಟಾಪ್-5 ಸಾಧಕರು
1. ವಿಶ್ವಜಿತ್ ಪ್ರಕಾಶ್ ಹೆಗಡೆ- 623 ಅಂಕ, ಶಿರಸಿ ಲಯನ್ಸ್ ಇಂಗ್ಲಿಷ್ ಹೈಸ್ಕೂಲ್, ಉತ್ತರ ಕನ್ನಡ.
2. ದಿಶಾ ಹೆಗಡೆ- 622 ಅಂಕ, ಶಾಂತಿ ಸದನ ಹೈಸ್ಕೂಲ್, ಧಾರಾವಾಡ.
3. ಸಂಹಿತಾ ಎಂ. ರಾವ್- 622 ಅಂಕ, ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಹೈಸ್ಕೂಲ್, ರಾಜಾಜಿನಗರ, ಬೆಂಗಳೂರು ಉತ್ತರ.
4. ಸ್ವಾತಿ ಕೆ. – 622 ಅಂಕ, ಇಂದ್ರಪ್ರಸ್ಥ ವಿದ್ಯಾಲಯ ಹೈಸ್ಕೂಲ್, ಉಪ್ಪಿನಂಗಡಿ, ಮಂಗಳೂರು.
5. ರಿತುಪರ್ಣ ಭಾನಾಜಿರಾವ್- 622 ಅಂಕ, ಕೆಎಲ್ಎಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಬೆಳಗಾವಿ.
* ಜಿಲ್ಲೆಗಳ ಶೇಕಡವಾರು ಫಲಿತಾಂಶ
1. ಉಡುಪಿ 93.37
2. ಚಿಕ್ಕೋಡಿ- 93.32
3. ಉತ್ತರ ಕನ್ನಡ- 92.87
4. ಶಿರಸಿ- 91.52
5. ಬೆಂಗಳೂರು ಗ್ರಾಮಾಂತರ- 91.10
6. ಮಂಡ್ಯ- 89.78
7. ರಾಮನಗರ- 89.62
8. ಮಂಗಳೂರು- 89.35
9. ಕೋಲಾರ- 89.20
10. ಮೈಸೂರು- 89.13
11. ಚಾಮರಾಜನಗರ- 89.04
12. ತುಮಕೂರು- 88.96
13. ಮಧುಗಿರಿ- 88.12
14. ಬೆಳಗಾವಿ- 87.39
15. ಹಾಸನ- 87.21
16. ದಾವಣಗೆರೆ- 87.15
17. ರಾಯಚೂರು- 87.03
18. ಕೊಡಗು- 86.90
19. ಚಿತ್ರದುರ್ಗ- 85.95
20. ಶಿವಮೊಗ್ಗ- 85.71
21. ಹಾವೇರಿ- 85.59
22. ಯಾದಗಿರಿ- 85.06
23. ಬೆಂಗಳೂರು ಉತ್ತರ- 84.90
24. ಬಳ್ಳಾರಿ- 84.70
25. ಧಾರವಾಡ- 84.54
26. ಚಿಕ್ಕಮಗಳೂರು- 83.91
27. ಚಿಕ್ಕಬಳ್ಳಾಪುರ- 82.58
28. ಬೀದರ್- 80.24
29. ಬೆಂಗಳೂರು ದಕ್ಷಿಣ- 78.50
30. ಬಾಗಲಕೋಟೆ- 77.20
31. ವಿಜಯಪುರ- 75.70
32. ಕಲಬುರಗಿ- 74.97
33. ಕೊಪ್ಪಳ- 71.91
34. ಗದಗ- 66.74
ಎಸ್ಸೆಸ್ಸೆಲ್ಸಿ ಫಲಿತಾಂಶ ಪಡೆಯಬಹುದಾದ ವೆಬ್‌ಸೈಟ್‌ಗಳು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಲ್ಲಿದೆ
www.kseeb.kar.nic.in ; www.indiaresults.com ; www.ResultsOut.com www.vidyavision.com ಅಥವಾ KAR10 ಎಂದು ಟೈಪ್ ಮಾಡಿ, ಸ್ಪೇಸ್ ಕೊಟ್ಟು 567675 ಅಥವಾ KAR ಎಂದು ಟೈಪ್ ಮಾಡಿ, ಸ್ಪೇಸ್ ಕೊಟ್ಟು ನೋಂದಣಿ ಸಂಖ್ಯೆ ಟೈಪ್ ಮಾಡಿ 56263ಗೆ ಕಳುಹಿಸಬಹುದು. ಮೊ: 98115 54192, 98736 98968.