ಬೆಂಗಳೂರು – ಮುರುಡೇಶ್ವರ ಎಕ್ಸ್ ಪ್ರೆಸ್ ರೈಲಿನ ಸಮಯ ಬದಲಾವಣೆ ಪ್ರಸ್ತಾವಕ್ಕೆ ವಿರೋಧ

Spread the love

ಬೆಂಗಳೂರು – ಮುರುಡೇಶ್ವರ ಎಕ್ಸ್ ಪ್ರೆಸ್ ರೈಲಿನ ಸಮಯ ಬದಲಾವಣೆ ಪ್ರಸ್ತಾವಕ್ಕೆ ವಿರೋಧ

ಮಂಗಳೂರು: ಮುರುಡೇಶ್ವರ- ಬೆಂಗಳೂರು ಮಧ್ಯೆ ಮಂಗಳೂರು ಮೂಲಕ ಸಂಚರಿಸುತ್ತಿರುವ 16585/86 ಬೆಂಗಳೂರು ಮುರುಡೇಶ್ವರ ಎಕ್ಸ್ ಪ್ರೆಸ್ ರೈಲಿನ ಸಮಯ ಬದಲಾಯಿಸುವ ಪ್ರಸ್ತಾವಕ್ಕೆ ಮಂಗಳೂರಿನ ಯಾತ್ರಿ ಸಂಘದ ವರು ವಿರೋಧ ವ್ಯಕ್ತಪಡಿಸಿದ್ದಾರೆ.

ಮುರುಡೇಶ್ವರ ಸ್ಟೇಷನ್ನಲ್ಲಿ ನೀರು ತುಂಬಿಸುವುದು ಹಾಗೂ ಬೋಗಿ ನಿರ್ವಹಣೆ ಮಾಡುವುದಕ್ಕಾಗಿ ಮೂರು ಗಂಟೆಕಾಲ ಈ ರೈಲನ್ನು ನಿಲ್ಲಿಸುವಂತೆ ರೈಲ್ವೇ ಮಂಡಳಿಯು ರೈಲ್ವೇ ಇಲಾಖೆಗೆ ಸೂಚನೆ ನೀಡಿರುವುದರಿಂದ ಈ ಬದಲಾವಣೆಗೆ ಸಿದ್ಧತೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಈ ರೀತಿ ಮುರುಡೇಶ್ವರದಲ್ಲಿ ರೈಲನ್ನು ತಡೆ ಹಿಡಿದರೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗಿ ಬರುವುದಲ್ಲದೆ ರೈಲು ಮಂಗಳೂರು ಸೆಂಟ್ರಲ್ಗೆ ಬರದೇ ಮಂಗಳೂರು ಜಂಕ್ಷನ್ ಅಥವಾ ಪಡೀಲು ಮೂಲಕ ಹೋಗುವ ಸಾಧ್ಯತೆ ಇದೆ ಎನ್ನು ವುದು ಈ ಭಾಗದ ಪ್ರಯಾಣಿಕರ ಕಳವಳ.

ರೈಲಿನ ವೇಳಾಪಟ್ಟಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ನೈಋತ್ಯ ರೈಲ್ವೆ ಪ್ರಧಾನ ಮುಖ್ಯ ನಿರ್ವಹಣ ಪ್ರಬಂಧಕರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.


Spread the love