Home Mangalorean News Kannada News ಬೆಂಗಳೂರು ಲಾಕ್ಡೌನ್ ಮಾರ್ಗಸೂಚಿ ಪ್ರಕಟ – ಏನಿರುತ್ತೆ? ಏನಿರಲ್ಲ? ಮಾಹಿತಿ ಇಲ್ಲಿದೆ

ಬೆಂಗಳೂರು ಲಾಕ್ಡೌನ್ ಮಾರ್ಗಸೂಚಿ ಪ್ರಕಟ – ಏನಿರುತ್ತೆ? ಏನಿರಲ್ಲ? ಮಾಹಿತಿ ಇಲ್ಲಿದೆ

Spread the love

ಬೆಂಗಳೂರು ಲಾಕ್ಡೌನ್ ಮಾರ್ಗಸೂಚಿ ಪ್ರಕಟ – ಏನಿರುತ್ತೆ? ಏನಿರಲ್ಲ? ಮಾಹಿತಿ ಇಲ್ಲಿದೆ

ಬೆಂಗಳೂರು: ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ಲಾಕ್ ಆಗಲಿದೆ. ಸಿಲಿಕಾನ್ ಸಿಟಿ ಲಾಕ್ಡೌನ್ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದು ಭಾಗಗಳಲ್ಲಿ ಕೆಲವು ವಿನಾಯ್ತಿಗಳನ್ನು ಸರ್ಕಾರ ನೀಡಿದೆ.

ಏನಿರುತ್ತೆ?

  • ಈಗಾಗಲೇ ಬುಕ್ ಮಾಡಿರುವ ವಿಮಾನ ಮತ್ತು ರೈಲು ಸೇವೆ ಇರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಟಿಕೆಟ್ ತೋರಿಸಿ ಮನೆ ಸೇರಿಕೊಳ್ಳಬಹುದು.
  •  ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆಟೋ, ಕ್ಯಾಬ್ ಬಳಕೆಗೆ ಅವಕಾಶ
  • ಲಾಕ್ಡೌನ್ ಆದೇಶಕ್ಕೂ ಮುನ್ನ ನಿಗದಿಯಾಗದ ಪರೀಕ್ಷೆಗಳು ನಡೆಯಲಿವೆ.
  • ಕೃಷಿ ಮಳಿಗೆಗಳು ತೆರೆಯಲು ಅವಕಾಶ
  • ಸರಕು ಸಾಗಾಟದ ವಾಹನಗಳಿಗೆ ಅನುಮತಿ
  • ಆರೋಗ್ಯ ಸೇವೆಗಳು
  • ಔಷಧಿ, ತರಕಾರಿ, ಹಣ್ಣು, ದಿನ ಪತ್ರಿಕೆ, ಆನ್ಲೈನ್ ಫುಡ್, ಮಾಂಸದಂಗಡಿ
  • ಮದ್ಯದಂಗಡಿಗಳು ಓಪನ್ ಪಾರ್ಸೆಲ್ಗೆ ಮಾತ್ರ ಅವಕಾಶ (ಬೆಳಗ್ಗೆ 10 ರಿಂದ ಸಂಜೆ 5ರವೆರೆಗೆ)
  • ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು
  • ಬ್ಯಾಂಕ್ ಮತ್ತು ಎಟಿಎಂ

ಏನಿರಲ್ಲ?

  • ಹೊಸ ವಿಮಾನ ಸಂಚಾರ, ರೈಲು ಸೇವೆ ಇರಲ್ಲ. ಮೆಟ್ರೋ ರೈಲು ಸೇವೆ, ಆಟೋ, ಖಾಸಗಿ ವಾಹನ, ಸಾರಿಗೆ ಬಸ್ ಬಂದ್ ಆಗಿರಲಿದೆ.
  • ಶಾಲಾ- ಕಾಲೇಜುಗಳು ಬಂದ್.
  • ಹೋಟೆಲ್, ಬಾರ್, ರೆಸ್ಟೋರೆಂಟ್ ಇರಲ್ಲ (ಪಾರ್ಸೆಲ್ ಗೆ ಮಾತ್ರ ಅವಕಾಶ)
  • ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಜಿಮ್ ಸೆಂಟರ್, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಕೇಂದ್ರಗಳು, ಸಭಾ ಭವನ
  • ರಾಜಕೀಯ, ಧಾರ್ಮಿಕ, ಮದುವೆ, ಸಮಾರಂಭಗಳಿಗೆ ಅವಕಾಶವಿಲ್ಲ
  • ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.

Spread the love

Exit mobile version