ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ವೈದ್ಯಕೀಯ ವಿಭಾಗದಲ್ಲಿ ಪ್ರಿಯಾ, ಇಂಜಿನಿಯರಿಂಗ್ ವಿಭಾಗದಲ್ಲಿ ಸ್ವಾಗತ್ ಪ್ರಥಮ ಶ್ರೇಯಾಂಕ ಗಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ವೈದ್ಯಕೀಯ ವಿಭಾಗದಲ್ಲಿ ಪ್ರಿಯಾ ನರ್ವಾಲ್(ಪ್ರಥಮ), ಎಲ್.ಮಾನಸ(ದ್ವಿತೀಯ), ಟಿ.ಪಲ್ಲವಿ(ತೃತೀಯ) ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಇಂಜಿನಿಯರಿಂಗ್ ವಿಭಾಗದಲ್ಲಿ ಸ್ವಾಗತ್ ಎಸ್. ಯಾದವಾಡ್(ಪ್ರಥಮ), ಕೊಮ್ಮೊರು ಅಲೇಕ್ಯಾ ರೆಡ್ಡಿ (ದ್ವಿತೀಯ), ಎಂ.ಕಾರ್ತಿಕ್(ತೃತೀಯ) ಕ್ರಮವಾಗಿ ಮೊದಲ ಮೂರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರಾಜ್ಯದಲ್ಲಿನ 343 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 1,57,592 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 1,53,501 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7 ವಿವಿದ ವಿಷಯಗಳಲ್ಲಿ ಅರ್ಹತಾ ಪಟ್ಟಿಯನ್ನು ಸಿದ್ದಪಡಿಸಿದ್ದು, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ 19,275 ಅಭ್ಯರ್ಥಿಗಳು, ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ಗೆ 85,407, ಇಂಜಿನಿಯರಿಂಗ್ 1,12,423, ಆರ್ಕಿಟೆಕ್ಟರ್ 1394 ಅಭ್ಯರ್ಥಿಗಳಿಗೆ ಶ್ರೇಯಾಂಕ ನೀಡಲಾಗಿದೆ.
ಉಳಿದಂತೆ ಕೃಷಿ 82,161, ಪಶುಸಂಗೋಪನೆ 85,577, ಬಿ.ಫಾಮ್ರ್ ಹಾಗೂ ಡಿ.ಫಾಮ್ರ್ ಕೋಸ್ಗೆ 1,16,133 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.