Home Mangalorean News Kannada News ಬೆಂಗಳೂರು: ಸಿಎಂಸಿದ್ದರಾಮಯ್ಯರಿಂದ ವಾರ್ತಾಭಾರತಿ 13ನೆ ವಾರ್ಷಿಕವಿಶೇಷ ಸಂಚಿಕೆ ಬಿಡುಗಡೆ

ಬೆಂಗಳೂರು: ಸಿಎಂಸಿದ್ದರಾಮಯ್ಯರಿಂದ ವಾರ್ತಾಭಾರತಿ 13ನೆ ವಾರ್ಷಿಕವಿಶೇಷ ಸಂಚಿಕೆ ಬಿಡುಗಡೆ

Spread the love

ಬೆಂಗಳೂರು: ವಾರ್ತಾಭಾರತಿ ಪತ್ರಿಕೆಯ 13ನೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಿಡುಗಡೆಗೊಳಿಸಿದ್ದು, ಪ್ರಥಮ ಪ್ರತಿಯನ್ನು ಪತ್ರಿಕೆಯ ಓದುಗರ ಪರವಾಗಿ ರಮೇಶ್ ಕೆ.ಸಿ. ಮತ್ತು ಮಂಗಳಾ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮೂಲಭೂತ ಸೌಲಭ್ಯ, ವಾರ್ತಾ ಮತ್ತು ಹಜ್ ಖಾತೆ ಸಚಿವ ಆರ್. ರೋಶನ್ ಬೇಗ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ, ಡಾ.ಎಲ್. ಹನುಮಂತಯ್ಯ ಶುಭಕೋರಿದರು.

1-Vartha-Bharathi-Bangalore

ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಬಿ.ಎ. ಮೊಯ್ದಿನ್, ಎಸ್ತರ್ ಅನಂತಮೂರ್ತಿ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಬ್ಯಾರೀಸ್ ಗ್ರೂಪ್‍ನ ಅಧ್ಯಕ, ಸೈಯ್ಯದ್ ಮುಹಮ್ಮದ್ ಬ್ಯಾರಿ, ಮಾಧ್ಯಮ ಕಮ್ಯುನಿಕೇಶನ್ ಲಿಮಿಟೆಡ್‍ನ ನಿರ್ದೇಶಕ ಎಚ್.ಎಂ. ಅಫೆÇ್ರೀರhÉï ಅಸ್ಸಾದಿ, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಡಿ.ಪಿ. ಮುರಳೀಧರ್, ಮಾಹಿತಿ ಇಲಾಖೆಯ ಜಂಟಿ ನಿರ್ದೇಶಕ ಬೃಂಗೇಶ್, ಮಾಹಿತಿ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀ ನಾರಾಯಣ್, ವಾರ್ತಾಭಾರತಿ ಪತ್ರಿಕೆಯ ಪ್ರದಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಬೆಂಗಳೂರು ಬ್ಯೂರೋ ಮುಖ್ಯಸ್ಥ ಬಸವರಾಜ್, ಹಿರಿಯ ವರದಿಗಾರ ಪ್ರಕಾಶ ಸಿ. ಉಪಸ್ಥಿತರಿದ್ದರು.

ವಾರ್ತಾಭಾರತಿ ವಿಶೇಷ ಸಂಚಿಕೆಯು ವಿಶೇಷ ಸಂದರ್ಶನಗಳು, ಲೇಖನಗಳು ಮತ್ತು ಅಂತಾರಾಷ್ಟ್ರೀಯ, ರಾಷ್ಟ್ರೀಯ ಖ್ಯಾತಿಯ ಬರಹಗಳು, ಸಚಿತ್ರ ವರದಿಗಳನ್ನು ಒಳಗೊಂಡಿದೆ.

ವಿದೇಶಗಳಲ್ಲಿ ಕನ್ನಡದ ಕಂಪು: ಸಿದ್ಧರಾಮಯ್ಯ

`ವಾರ್ತಾಭಾರತಿ ಪತ್ರಿಕೆಯು ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ಕನ್ನಡಿಗರನ್ನು ತಲುಪುತ್ತಿರುವುದು ಮಾತ್ರವಲ್ಲದೆ, ಕನ್ನಡದÀ ಕಂಪು ಹಾಗೂ ಸಂಸ್ಕøತಿಯ ವಿಶೇಷತೆಯನ್ನು ಹರಡುವ ಕಾರ್ಯ ನಡೆಸುತ್ತಿದೆ. ಪತ್ರಿಕೆಯ 13ನೆ ವಿಶೇಷಾಂಕ ಬಿಡುಗಡೆಯ ಈ ಶುಭ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆಯ ಬಳಗಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.”
– ಸಿದ್ಧರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ.

ಅತ್ಯುತ್ತಮ ಸಾಧನೆ

`ಅಲ್ಪಸಂಖ್ಯಾತರು ಕಟ್ಟುನಿಟ್ಟಿನ ತತ್ವಗಳು, ಉz್ದÉೀಶ ಭರಿತ ಹಾಗೂ ಅತ್ಯುನ್ನತ ಗುಣಮಟ್ಟದಿಂದ ಕೂಡಿದ ಕನ್ನಡ ದಿನಪತ್ರಿಕೆಯೊಂದನ್ನು ಅಲ್ಪಸಂಖ್ಯಾತರಿಂದಲೂ ನಿರ್ವಹಿಸಲು ಸಾಧ್ಯ ಎಂಬುದನ್ನು ವಾರ್ತಾಭಾರತಿ ಪತ್ರಿಕೆ ಸಾಬೀತುಪಡಿಸಿದೆ. ಇದು ಅತ್ಯುತ್ತಮ ಸಾಧನೆಯಾಗಿದೆ. ವಾರ್ತಾಭಾರತಿ ಬಳವನ್ನು ಈ ಸಂದರ್ಭದಲ್ಲಿ ನಾನು ಅಭಿನಂದಿಸುತ್ತೇನೆ ಮತ್ತು ಉಜ್ವಲ ಭವಿಷ್ಯವನ್ನು ಆಶಿಸುತ್ತೇನೆ.”
– ರೋಶನ್ ಬೇಗ್, ಮೂಲಭೂತ ಸೌಲಭ್ಯ, ವಾರ್ತಾ ಮತ್ತು ಹಜ್ ಖಾತೆ ಸಚಿವ.


Spread the love

Exit mobile version