ಬೆಂಗ್ರೆಯಲ್ಲಿ ಮಳೆಗೆ ಧರೆಗುರುಳಿದ ಮನೆಗೆ ಶಾಸಕ ಜೆ.ಆರ್.ಲೋಬೊ ಭೇಟಿ
ಮಂಗಳೂರು: ಬೆಂಗ್ರೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದು ಧರಾಶಾಹಿಯಾಗಿದ್ದು ಮನೆಯಿಲ್ಲದೆ ಕುಟುಂಬ ಕಂಗೆಡುತ್ತಿದ್ದಾಗ ಶಾಸಕ ಜೆ.ಆರ್.ಲೋಬೊ ಅವರು ಭೇಟಿ ನೀಡಿ ಮನೆಕಟ್ಟಿಸಿಕೊಡುವ ಭರವಸೆ ಕೊಟ್ಟರು.
ಜೋಹಾರ್ ಎಂಬವರಿಗೆ ಸೇರಿದ ಮನೆಯು ಮಳೆಯಿಂದಾಗಿ ಧರೆಗುರುಳಿದೆ. ಮನೆಮಂದಿಗೆ ಸಣ್ಣಪುಟ್ಟಗಾಯಗಳಾಗಿವೆ.
ಶಾಸಕ ಜೆ.ಆರ್.ಲೋಬೊ ಅವರು ಇಂದು ಬೆಳಿಗ್ಗೆ ಬೆಂಗ್ರೆಗೆ ಭೇಟಿ ನೀಡಿದ್ದರು. ಅವರು ಕಂದಾಯ ಇಲಾಖೆಯಿಂದ ಸಿಗಬೇಕಾದ ಪರಿಹಾರವನ್ನು ತಕ್ಷಣ ಕೊಡುವಂತೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಮತ್ಸಹಾಶ್ರಯ ಯೋಜನೆಯಿಂದ ಮನೆಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ನಗರಪಾಲಿಕೆಯಿಂದಲೂ ಸೂಕ್ತಪರಿಹಾರ ನೀಡುವಂತೆ ಕಾರ್ಪೊರೇಟರ್ ಗೆ ಸೂಚಿಸಿದರು.
ಶಾಸಕರು ಬೆಂಗ್ರೆಗೆ ಭೇಟಿ ನೀಡಿದ್ದಕ್ಕೆ ಸ್ಥಳೀಯರು ಕೃತಜ್ನೆತೆ ಸೂಚಿಸಿದರು.