ಬೆಳ್ತಂಗಡಿ ಜ್ಯುವೆಲ್ಲರಿ ದರೋಡೆ ಪ್ರಕರಣಳ ಆರು ತಿಂಗಳ ಬಳಿಕ ಭೇದಿಸಿದ ಪೊಲೀಸರು
ಮಂಗಳೂರು: ಬೆಳ್ತಂಗಡಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರು ಆರೋಪಿಗಳನ್ನು ಆರು ತಿಂಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ತುಮಕೂರಿನ ಮಂಜುನಾಥ @ ಮಂಜ @ ಕೋಳಿ ಮಂಜ 49 ವರ್ಷ, ಹಾಗೂ ಮಹಂತೇಶ್ 21 ವರ್ಷ ಎಂದು ಗುರುತಿಸಲಾಗಿದೆ.
ಜೂನ್ 10 ರಂದು ರಾತ್ರಿ ಬೆಳ್ತಂಗಡಿ ತಾಲೂಕು, ಉಜಿರೆ ಪೇಟೆಯಲ್ಲಿರುವ “ದಮಾಸ್” ಗೋಲ್ಡ್ ಜ್ಯುವೆಲ್ಲರಿ ಅಂಗಡಿಯಲ್ಲಿ ಶಟರ್ ಮುರಿದು ಕಳವಿಗೆ ಯತ್ನಿಸಿದ ಪ್ರಕರಣವನ್ನು ಭೇದಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಇವರ ನಿರ್ಧೇಶನದಂತೆ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪ-ವಿಭಾಗ ಮತ್ತು ಮಾನ್ಯ ಪೊಲೀಸ್ ವೃತ್ತ ನಿರೀಕ್ಷಕರು ಬೆಳ್ತಂಗಡಿರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕರಾದ ರವಿ ಬಿ ಎಸ್ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಬಗ್ಗೆ ತಂಡವನ್ನು ರಚಿಸಿ ಆರೋಪಿಗಳ ಪತ್ತೆ ಬಗ್ಗೆ ವಿಶೇಷ ಮಾಹಿತಿ ಸಂಗ್ರಹಿಸಿ ತುಮಕೂರು ಜಿಲ್ಲೆ ಮಧುಗಿರಿ ಎಂಬಲ್ಲಿಂದ ವಶಕ್ಕೆ ಪಡೆದು 12.12.2016 ರಂದು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.
ಈ ಪತ್ತೆಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್‌ಐ ರವಿ ಬಿಎಸ್ ನೇತೃತ್ವದಲ್ಲಿ ಎಎಸ್‌ಐ ಕರುಣಾಕರ, ಮಂಗಳೂರು ಬೆರಳುಮುದ್ರೆ ಘಟಕದ ತಜ್ಞರಾದ ಸತಿಶ್ ಬಿ ಎನ್ ಮತ್ತು ಸಿಬ್ಬಂದಿಗಳು ಹಾಗೂ ಹೆಚ್‌ಸಿ, ಕನಕರಾಜ್, ಹೆಚ್‌ಸಿ ,ಧರ್ಮಪಾಲ, ಪಿಸಿ ಶಿವರಾಮ ರೈ, ಪಿಸಿ ನಾಗರಾಜ್, ಪಿಸಿ ಕೃಷ್ಣ, ಎಎನ್‌ಎಫ್ ಸಿಬ್ಬಂದಿಗಳಾದ ಪಿಸಿ ಯತೀಂದ್ರ, ಪಿಸಿ ಹರೀಶ್, ಪಿಸಿ ಸತೀಶ್ ರವರು ಮತ್ತು ಚಾಲಕ ಹರೀಶ್ ರವರು ಭಾಗವಹಿಸಿರುತ್ತಾರೆ.