Home Mangalorean News Kannada News ಬೆಳ್ತಂಗಡಿ; ವೃದ್ದ ತಾಯಿಗೆ ಅಮಾನುಷವಾಗಿ ಹಲ್ಲೆ – ತಂದೆ ಮತ್ತು ಮಗನ ಬಂಧನ

ಬೆಳ್ತಂಗಡಿ; ವೃದ್ದ ತಾಯಿಗೆ ಅಮಾನುಷವಾಗಿ ಹಲ್ಲೆ – ತಂದೆ ಮತ್ತು ಮಗನ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ಬೆಳ್ತಂಗಡಿ; ವೃದ್ದ ತಾಯಿಗೆ ಅಮಾನುಷವಾಗಿ ಹಲ್ಲೆ – ತಂದೆ ಮತ್ತು ಮಗನ ಬಂಧನ

ಬೆಳ್ತಂಗಡಿ: ಅನಾರೋಗ್ಯ ಪೀಡಿತ ವೃದ್ದೆ ತಾಯಿಯ ಮೇಲೆ ಮಗ ಮತ್ತು ಮೊಮ್ಮಗ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ವೃದ್ದೆಯ ಮಗ ಮತ್ತು ಮೊಮ್ಮಗನ ವಿರುದ್ದ ಬೆಳ್ತಂಗಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸವಣಾಲು ಎಂಬಲ್ಲಿ ಅನಾರೋಗ್ಯ ಪೀಡಿತ ವಯೋವೃದ್ದ ಮಹಿಳೆಯೋರ್ವರನ್ನು ಆಕೆಯ ಮಗ ಹಾಗೂ ಮೊಮ್ಮಗ ಹಿಂಸಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಘಟಣೆಯ ಬಗ್ಗೆ ತನಿಖೆ ನಡೆಸಲಾಗಿ 70 ವರ್ಷದ ವೃದ್ದ ಮಹಿಳೆ ಬೆಳ್ತಂಗಡಿ ಯ ಸವಣಾಲು ಹಲಸಿನಕಟ್ಟೆ ನಿವಾಸಿಯಾಗಿದ್ದು, ಆರೋಪಿಗಳಾದ ಸದರಿ ವೃದ್ದೆಯ ಮಗ ಶ್ರೀನಿವಾಸ ಶೆಟ್ಟಿ ಮತ್ತು ಮೊಮ್ಮಗ ಪ್ರದೀಪ್ ಶೆಟ್ಟಿ ಎಂಬವರುಗಳು ಮನೆಯಲ್ಲಿ ಅಮಾನೀಯವಾಗಿ ಹಿಂಸಿಸಿರುವುದಾಗಿದೆ.

ಈ ಬಗ್ಗೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಕಲಂ:323, 504 IPC & 24 senior citizen act 2007ರಂತೆ ಪ್ರಕರಣ ದಾಖಲಿಸಿದ್ದಾರೆ.

YouTube player


Spread the love

Exit mobile version