ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರಕ್ತದಾನ ಶಿಬಿರ
ಮಂಗಳೂರು: ರಕ್ತದಾನ ಅನ್ನೋದು ಒಂದು ಜೀವ ಉಳಿಸುವ ಮಹತ್ಕಾರ್ಯ ಅನ್ನೋದು ನಮಗೆಲ್ಲರಿಗೂ ಗೊತ್ತಿರೋ ವಿಚಾರ. ಮನುಷ್ಯನ ಇಂದಿನ ತರಾತುರಿಯ ಜೀವನದಲ್ಲಿ ಎಷ್ಟೋ ಅಪಘಾತ ಸಂದರ್ಭ, ಗರ್ಭಿಣಿಯರಿಗೆ ಅತ್ಯಗತ್ಯವಾಗಿರುತ್ತದೆ. ಹಲವು ಸಂಘಸಂಸ್ಥೆಗಳು ಈ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುತ್ತಿವೆ. ಅದರಂತೆ ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಕಾಲೇಜಿನ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಕಾರ್ಮೆಲಿತ್ ಗೋವಿಯಸ್ ರಕ್ತದಾನ ಮಾಡುವುದರಿಂದ ಕ್ಯಾನ್ಸರ್ ಮತ್ತಿತರ ರೋಗಗಳು ಬರದಂತೆ ಕಾಪಾಡಬಹುದು. ಇಂದಿನ ಜನರ ಜಂಜಾಟದಲ್ಲಿ ರಕ್ತ ಎನ್ನುವುದು ಮುಖ್ಯವಾದದ್ದು, ಇದನ್ನು ಹಳೆ ವಿದ್ಯಾರ್ಥಿ ಸಂಘ ನಡೆಸಿರುವುದು ಒಂದು ಉತ್ತಮ ಕೆಲಸ. ರಕ್ತ ಬೇಕು ಎನ್ನುವ ಸಂದೇಶಗಳು ದಿನನಿತ್ಯ ಬರುತ್ತಿರುತ್ತವೆ ಇದರಿಂದ ದಿನಕ್ಕೆ ಎಷ್ಟು ರಕ್ತ ಬೇಕಾಗುತ್ತದೆ ಎಂಬುವುದನ್ನು ಅಂದಾಜಿಸಬಹುದು. ರಕ್ತದಾನ ಅನ್ನೋದು ಮತ್ತೊಬ್ಬ ವ್ಯಕ್ತಿಗೆ ಜೀವದಾನ ನೀಡಿದಂತೆ. ಕಲಿತ ಶಾಲೆಗೆ ಈ ರೀತಿಯ ಸಹಕಾರ ನೀಡುವುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಒಂದು ಉತ್ತಮ ಕೆಲಸ ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಹಳೆ ವಿದ್ಯಾರ್ಥಿಗಳು ಸೇರಿ 65ಕ್ಕಿಂತ ಹೆಚ್ಚು ಜನರು ತಮ್ಮ ದಿನನಿತ್ಯದ ಜಂಜಾಟದಲ್ಲಿಯೂ ತಮ್ಮ ಹಳೆ ಶಾಲೆಗೆ ಬಂದು ರಕ್ತದಾನ ಮಾಡಿದರು. ವಿಶೇಷ ಅಂದರೆ ಕಳೆದ 10 ವರ್ಷಗಳಿಂದ ಈ ಕಾರ್ಯವನ್ನು ಹಳೆ ವಿದ್ಯಾರ್ಥಿ ಸಂಘ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
“ನಾವು ಕಲಿತ ಶಾಲೆಯಲ್ಲಿ ರಕ್ತದಾನ ನಡೆಸುವುದು ಒಂದು ಪುಣ್ಯದ ಕೆಲಸ ಮಾಡುತ್ತಿದ್ದೇವೆ ಎಂದು ಅನಿಸುತ್ತದೆ. ಜೊತೆಗೆ ಹಳೆ ಸ್ನೇಹಿತರು, ಗುರುಗಳನ್ನು ಭೇಟಿಯಾಗುವ ಅವಕಾಶ ದೊರಕಿದೆ. ಒಂದು ಉತ್ತಮ ಕೆಲಸದ ಮೂಲಕ ಇತರರಿಗೆ ಸಹಾಯಹಸ್ತ ಚಾಚುತ್ತಿದ್ದೇವೆ ಎಂಬ ಪರೋಪಕಾರಿ ಮನಸು ಇದೆ. ಪ್ರತೀ ವರ್ಷವೂ ನಾನು ಇಲ್ಲಿ ಬಂದು ರಕ್ತದಾನ ಮಾಡುತ್ತಿದ್ದೇನೆ” ಎಂದು ಮೋಹಿತ್ ಹಳೆ ವಿದ್ಯಾರ್ಥಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರದ ಕೆ.ಎಂ.ಸಿ ಆಸ್ಪತ್ರೆಯ ವೈದ್ಯೆ ಡಾ. ಪ್ರಣೀತ, ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ಕಾರ್ಮೆಲಿತ ವಿ,ಎಸ್, ಖ್ಯಾತ ವಕೀಲ ಸತೀಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸಲಹೆಗಾರ ಡಾ. ವಾಸಪ್ಪ ಗೌಡ ಉಪಸ್ಥಿರಿದ್ದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು.