ಬೇರೆ ಪಕ್ಷದಲ್ಲಿ ಮೂಲೆಗುಂಪಾಗಿ ತುಕ್ಕು ಹಿಡಿದ ನಾಯಕರು ಬಿಜೆಪಿ ಸೇರುತ್ತಿದ್ದಾರೆ: ಮಧು ಬಂಗಾರಪ್ಪ

Spread the love

ಬೇರೆ ಪಕ್ಷದಲ್ಲಿ ಮೂಲೆಗುಂಪಾಗಿ ತುಕ್ಕು ಹಿಡಿದ ನಾಯಕರು ಬಿಜೆಪಿ ಸೇರುತ್ತಿದ್ದಾರೆ: ಮಧು ಬಂಗಾರಪ್ಪ

ಮಂಗಳೂರು: ಎಲ್ಲಾ ಕಡೆ ಸೋತವರು ಇಂದು ಬಿಜೆಪಿಗೆ ಸೇರುತ್ತಿದ್ದಾರೆ, ಒಂದರ್ಥದಲ್ಲಿ ಒಂದು ಪಕ್ಷದಲ್ಲಿ ಮೂಲೆಗುಂಪಾಗಿ ತುಕ್ಕು ಹಿಡಿದ ನಾಯಕರು ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಇನ್ನೋರ್ವ ನಾಯಕ ಜೆ ಡಿ ನಾಯ್ಕ ಇವರೆಲ್ಲರೂ ಚುನಾವಣೆಯಲ್ಲಿ ಸೋತವರು ಇಂತಹವರು ಮಾತ್ರ ಮತ್ತೊಂದು ಪಕ್ಷದ ಬಾಗಿಲು ಬಡಿಯುತ್ತಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಲು ಸ್ವತಂತ್ರರು ಆದರೆ ಯಾವ ನೈತಿಕತೆ ಅವರಲ್ಲಿದೆ ಎನ್ನುವುದು ಅವರು ಉತ್ತರಿಸಬೇಕಾಗಿದೆ ಎಂದರು. ಯಡ್ಯೂರಪ್ಪ ಕೂಡ ಬಿಜೆಪಿ ಪಕ್ಷವನ್ನು ಬಿಟ್ಟು ತನ್ನದೇ ಸ್ವಂತ ಕೆಜಿಪಿ ಪಕ್ಷವನ್ನು ಕಟ್ಟಿದವರು. ಟಿಪ್ಪು ಸುಲ್ತಾನ್ ಟೋಪಿಯನ್ನು ಧರಿಸಿ ಬಿಜೆಪಿಯನ್ನು ಹಿಗ್ಗಾಮುಗ್ಗ ಬೈದವರಿಗೆ ಜನರನ್ನು ಉತ್ತರಿಸುವ ನೈತಿಕತೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದರು.

ತಾವು ಕಾಂಗ್ರೆಸ್ ಸೇರುತ್ತಿರುವ ಉಹಾಪೋಹದ ಬಗ್ಗೆ ಮಾತನಾಡಿದ ಅವರು ತಾನು ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ನನ್ನನ್ನ ಅವರ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಆದರೆ ನಾನು ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಮಾತ್ರ ತನ್ನ ಕಾರ್ಯಕರ್ತರಿಗೆ ನಾಯಕರನ್ನಾಗಿ ಮಾಡುತ್ತದೆ ನನ್ನ ಪಕ್ಷ ನನಗೆ ಎಲ್ಲಾ ರೀತಿಯಲ್ಲಿ ಒರ್ವ ಯಶಸ್ವಿ ನಾಯಕನಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ ಎಂದರು.

ಮುಂದುವರೆಸಿ ಮಾತನಾಡಿದ ಅವರು ಯಡ್ಯೂರಪ್ಪನವರಿಗೆ ಸಿಬಿಐನ ಎಲ್ಲಾ ಮಾಹಿತಿಗಳು ಸಿಗುತ್ತವೆ ಅಂರೆ ಅವರೇನು ಸಿಬಿಐನ ನಿರ್ದೇಶಕರೇ ಎಂದು ಪ್ರಶ್ನಿಸಿದರು. ಯಡ್ಯೂರಪ್ಪ ರಾಜ್ಯದಲ್ಲಿ ಕೋಮುವಾದವನ್ನು ಹುಟ್ಟು ಹಾಕುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಯಡ್ಯೂರಪ್ಪನವರು ರಾಜ್ಯವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭ್ರಷ್ಟಾಚಾರ ಮತ್ತು ಧರ್ಮದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಒಂದು ವೇಳೆ ಅದನ್ನೇ ಮುಂದುವರೆಸಿದರೆ ರಾಜ್ಯದ ಜನ ಅವರಿಗೆ ಸರಿಯಾದ ಪಾಠವನ್ನು ಕಲಿಸಲಿದ್ದಾರೆ. ತನ್ನದೇ ಹಲವು ಭ್ರಷ್ಟಾಚಾರದ ಕೇಸುಗಳು ನ್ಯಾಯಾಲಯದಲ್ಲಿ ಇರುವಾಗ ಇತರರ ಭ್ರಷ್ಠಾಚಾರದ ಕುರಿತು ಮಾತನಾಡುವ ನೈತಿಕತೆ ಅವರಿಗೆ ಎಲ್ಲಿದೆ. ತನ್ನ ಆರೋಪಗಳನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಜನರನ್ನು ದಿಕ್ಕುತಪ್ಪಿಸುವ  ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮುಳುಗುತ್ತಿರುವ ಹಡಗಾಗಿದ್ದು ಅದರ ಕುರಿತು ಮಾತನಾಡಲಾರೆ ಎಂದರು.

ಮುಂದಿನ ಚುನಾವಣೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉತ್ತಮ ಸಾಧನೆಯನ್ನು ಮಾಡಲಿದೆ ಯಾಕೆಂದರೆ ದಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಬುನಾದಿಯಿದೆ. ಸದ್ಯದಲ್ಲಿಯೇ ಉತ್ತಮವಾದ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಿದ್ದು, ಉಡುಪಿ ಮತ್ತು ದಕ ಜಿಲ್ಲೆಯ ಜನರು ನನ್ನ ತಂದೆ ಬಂಗಾರಪ್ಪನವರಿಗೆ ಚುನಾವಣೆಯ ಸಂದರ್ಭದಲ್ಲಿ ಉತ್ತಮ ಬೆಂಬಲವನ್ನು ನೀಡಿದ್ದರು ಎಂದರು.

ಈ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದರು, ಬಿಜೆಪಿ ಮತ್ತು ಸಂಘಪರಿವಾರದವರು ಜಿಲ್ಲೆಯಲ್ಲಿ ಬಂದ್ ಕರೆ ನೀಡಿದರು ಇದೆನ್ನೆಲ್ಲಾ ಗಮನಿಸುವಾಗ ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆಯೋ ಅಥವಾ ಕಾಂಗ್ರೆಸ್ ಆಡಳಿತವಿದೆಯೋ ಎನ್ನುವ ಸಂಶಯ ಮೂಡುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಚುನಾವಣೆ ಹತ್ತಿರ ಬರುವಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗುತ್ತಾರೆ. ಧರ್ಮವನ್ನು ಮಧ್ಯಕ್ಕೆ ತಂದು ಜನರಲ್ಲಿ ಭಯದ ವಾತಾವರಣವನ್ನು ಸ್ರಷ್ಟಿ  ಮಾಡುತ್ತಿದ್ದಾರೆ. ಬಿಜೆಪಿ ಪಕ್ಷವು ಬಿಲ್ಲವ ಯುವಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಅಮರನಾಥ ಶೆಟ್ಟಿ, ಹೈದರ್ ಪರ್ತಿಪಾಡಿ, ಅಕ್ಷಿತ್ ಸುವರ್ಣ, ವಸಂತ್ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
7 years ago

Sibling Rivalry makes him talk like a broken record. JDS winning in DK? Keep on dreaming saar.