ಬೈಂದೂರು: ಅಕ್ರಮ ಎಮ್ಮೆ ಮಾಂಸ ಸಾಗಾಟ – 6 ಮಂದಿ ಬಂಧನ
ಕುಂದಾಪುರ: ಅಕ್ರಮವಾಗಿ ಎಮ್ಮೆ ಮಾಂಸವನ್ನು ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪದ ಮೇಲೆ ಬೈಂದೂರು ಪೊಲೀಸರು 6 ಮಂದಿಯನ್ನು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತರನ್ನು ಕಂಡ್ಲೂರು ನಿವಾಸಿಗಳಾದ ಮಹಮ್ಮದ್ ನದೀಮ್ (23), ಕೆ.ಎಮ್.ಫಹಾದ್ (19), ಚಾಹುಸ್ ಸಲ್ಮಾನ್ (18), ಅಬ್ದುಲ್ ರಿಯಾನ್ (18), ನಿಸಾರ್ ಅಹಮ್ಮದ್ (33) ಮತ್ತು ಮುಜಾಂಬಿಲ್ ಎಂದು ಗುರುತಿಸಲಾಗಿದೆ.
ಘಟನೆ ವಿವರ: ಏಪ್ರಿಲ್ 5 ರಂದು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ತಿಮ್ಮೇಶ ಬಿ.ಎನ್ ರವರಿಗೆ ರಾತ್ರಿ 09:30 ಗಂಟೆಯ ಸುಮಾರಿಗೆ ನಾವುಂದ ಕಡೆಯಿಂದ ಒಂದು ಪಿಕ್ಅಪ್ ವಾಹನದಲ್ಲಿ ಮೀನು ತುಂಬುವ ಬಾಕ್ಸನಲ್ಲಿ ದನದ ಮಾಂಸ ತುಂಬಿಸಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು ಇವರು ಸಿಬ್ಬಂದಿಯವರ ಸಹಾಯದಿಂದ ಶಿರೂರು ಚೆಕ್ಪೋಸ್ಟ ಬಳಿ ರಾತ್ರಿ 10:10 ಗಂಟೆಗೆ ಸದ್ರಿ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದು ವಾಹನದಲ್ಲಿ ಒಟ್ಟು 5 ಜನರಿದ್ದು ವಾಹನವು ಬೊಲೆರೋ ಕಂಪೆನಿಯ ಪಿಕ್ಅಪ್ ವಾಹನವಾಗಿದ್ದು ಅದರ ನಂಬ್ರ ಕೆಎ-20-ಡಿ-0841 ಆಗಿರುತ್ತದೆ.
ವಾಹನದ ಹಿಂಬಾಗದಲ್ಲಿ ಮೀನು ತುಂಬುವ 44 ಬಾಕ್ಸಗಳಿದ್ದು ಅದರಲ್ಲಿ 4 ಬಾಕ್ಸನಲ್ಲಿ ಮಾಂಸ ಇರುವುದು ಕಂಡು ಬಂದಿರುತ್ತದೆ. ವಾಹನದಲ್ಲಿದ್ದವರಲ್ಲಿ ಮಾಂಸದ ಬಗ್ಗೆ ವಿಚಾರಿಸಿದಾಗ ಅವರು ಅದು ಎಮ್ಮೆ ಮಾಂಸ ಎಂಬುದಾಗಿ ಹಾಗೂ ಅದನ್ನು ತಮಗೆ ಕಂಡ್ಲೂರಿನ ಮುಜಾಂಬಿಲ್ ಎಂಬುವವರು ನೀಡಿದ್ದು ಭಟ್ಕಳಕ್ಕೆ ನೀಡಿ ಬರಲು ಹೇಳಿರುವುದಾಗಿ ತಿಳಿಸಿರುತ್ತಾರೆ. ಅವರಲ್ಲಿ ಮಾಂಸ ಖರೀದಿಸಿದ ಬಗ್ಗೆ ಯಾವುದಾದರು ದಾಖಲೆ ಇದೆಯೇ ಎಂದು ವಿಚಾರಿಸಿದ್ದು ಯಾವುದೇ ದಾಖಲೆ ಇರುವುದಿಲ್ಲವಾಗಿ ತಿಳಿಸಿರುತ್ತಾರೆ.
ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಮಾಂಸವು ಸುಮಾರು 175 ಕೆ.ಜಿ ತೂಕವಿದ್ದು ಅದರ ಅಂದಾಜು ಮೌಲ್ಯ 26,250/- ರೂಪಾಯಿ ಆಗ ಬಹುದು ಹಾಗೂ ಬೊಲೆರೋ ಪಿಕ್ಅಪ್ ವಾಹನದ ಅಂದಾಜು ಮೌಲ್ಯ 4,00,000/- ರೂಪಾಯಿ ಆಗ ಬಹುದು ಆರೋಪಿತರು ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಜಾನುವಾರನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಜಾನುವಾರು ವಧೆ ಮಾಡಲು ಯಾವುದೇ ಪರವಾನಗಿ ಹೊಂದದೇ ಅಕ್ರಮವಾಗಿ ಜಾನುವಾರನ್ನು ಕಂಡ್ಲೂರಿನಲ್ಲಿ ವಧೆ ಮಾಡಿ ಮಾಂಸ ಮಾಡಿ ಮಾಂಸವನ್ನು ಬೊಲೆರೋ ಪಿಕ್ಅಪ್ ವಾಹನದಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ
ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.