ಬೈಂದೂರು: ಅಕ್ರಮ ಜಾನುವಾರು ಸಾಗಾಟ – ಇಬ್ಬರ ಬಂಧನ
ಬೈಂದೂರು: ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಬೈಂದೂರು ಪೊಲೀಸರು ಇಬ್ಬರನ್ನು ಭಾನುವಾರ ಬಂಧಿಸಿದ್ದಾರೆ.
ಬಂಧಿತರನ್ನು ಭಟ್ಕಳ ತಾಲೂಕು ಸರ್ಪನಕಟ್ಟೆ ನಿವಾಸಿ ಮಂಜುನಾಥ ನಾಯ್ಕ (65) ಮತ್ತು ಬಿಜೂರು ನಿವಾಸಿ ರತ್ನಾಕರ ಪೂಜಾರಿ(20) ಎಂದು ಗುರುತಿಸಲಾಗಿದೆ.
ಭಾನುವಾರ ಬೈಂದೂರು ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ ಬಿ ಎನ್ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಟೆಗೆ ಬೊಲೇರೋ ಪಿಕ್ ಅಫ್ ವಾಹನದಲ್ಲಿ ಕೋಣಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಕಂಬದಕೋಣೆ ಕಡೆಯಿಂದ ಭಟ್ಕಳ ಕಡೆಗೆ ತುಂಬಿಸಿಕೊಂಡು ಹೋಗುತ್ತಿರುವುದಾಗಿ ಬಂದ ಮಾಹಿತಿಯಂತೆ ಯಡ್ತರೆ ಜಂಕ್ಷನ್ ಬಳಿ ಉಪ್ಪುಂದ ಕಡೆಯಿಂದ ಒಂದು ಮಹೀಂದ್ರಾ ಪಿಕ್ ಅಪ್ ವಾಹನ ಬರುತ್ತಿದ್ದು ಅದನ್ನು ನಿಲ್ಲಿಸಿ ಪರಿಶೀಲಿಸಿದಾಗ ಅದರ ಹಿಂಬದಿಯಲ್ಲಿ ಪರಿಶೀಲಿಸಿದಾಗ 2 ಕಪ್ಪು ಬಣ್ಣದ ಕೋಣಗಳನ್ನು ಯಾವುದೇ ಮೇವು, ಬಾಯಾರಿಕೆ ನೀಡದೇ, ಹಿಂಸಾತ್ಮಕ ರೀತಿಯಲ್ಲಿ ಉಸಿರುಗಟ್ಟುವ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿದ್ದು ಬಂಧಿತ ವ್ಯಕ್ತಿಗಳಲ್ಲಿ ಕ್ರಯ ಚೀಟಿ ಹಾಗೂ ಸಾಗಾಟ ಮಾಡಲು ಅನುಮತಿ ಪತ್ರ ವಿಚಾರಿಸಿದಲ್ಲಿ ಮಂಜುನಾಥ ನಾಯ್ಕ ಎಂಬುವವರು ತಾನು ಕೋಣಗಳನ್ನು ಮಾಚ ಪೂಜಾರಿ ಸಾಲಿಮನೆ ಹೇರಂಜಾಲುರವರಿಂದ ಖರೀದಿಸಿಕೊಂಡು ಮನೆಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದು, ಯಾವುದೇ ದಾಖಲಾತಿ ಇಲ್ಲವಾಗಿ ತಿಳಿಸಿರುತ್ತಾರೆ.
ಮಹೀಂದ್ರಾ ಪಿಕ್ಅಪ್ ವಾಹನದಲ್ಲಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಮೇವು, ಬಾಯಾರಿಕೆ ನೀಡದೇ, ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಕೋಣಗಳ ಮೌಲ್ಯ 55,000/- ರೂಪಾಯಿ ಆಗಿದ್ದು ಮಹೀಂದ್ರ ಪಿಕ್ ಅಪ್ ನ ಮೌಲ್ಯ 4,00,000/- ರೂಪಾಯಿ ಆಗಿರುತ್ತದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.