ಬೈಂದೂರು: ದನ ಕಳವಿಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Spread the love

ಬೈಂದೂರು: ದನ ಕಳವಿಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

ಕುಂದಾಪುರ: ಶಿರೂರು ಮಾರ್ಕೆಟ್ ಬಳಿ ಅಕ್ಟೋಬರ್ 5ರಂದು ಬೆಳಗಿನ ಜಾವ 3.45ರ ಸುಮಾರಿಗೆ ದನ ಕಳವಿಗೆ ಯತ್ನಿಸುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಧಾರವಾಡ ಜಿಲ್ಲೆಯ ಮೊಹಮ್ಮದ್ ಆಸೀಫ್ (24) ಹಾಗೂ ಅಬ್ದುಲ್ ರೆಹಮಾನ್ ಮುನ್ನ (29) ಎಂದು ಗುರುತಿಸಲಾಗಿದೆ.

ತಿಮ್ಮೇಶ ಬಿ.ಎನ್ ಪೊಲೀಸ್ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮಿದಾರರಿಂದ ಶಿರೂರು ಮಾರ್ಕೆಟ್ ಬಳಿ ಒಂದು ಟಾಟಾ ಟರ್ಬೋ ವಾಹನ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದಾಗಿ ಹಾಗೂ ಬಿಡಾಡಿ ದನಗಳನ್ನು ಕಳವು ಮಾಡಲು ಯತ್ನಿಸುತ್ತಿರುವುದಾಗಿ ಮಾಹಿತಿ ಬಂದಂತೆ ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 4:15 ಗಂಟೆಗೆ ಶಿರೂರು ಮಾರ್ಕೆಟ್ ತಲುಪಿದಾಗ ಅಲ್ಲಿ ಒಂದು ಟಾಟಾ ಟರ್ಬೋ ವಾಹನ ನಿಂತುಕೊಂಡಿದ್ದು, ಇಬ್ಬರು ವ್ಯಕ್ತಿಗಳು ಕೈಯಲ್ಲಿ ಹಗ್ಗವನ್ನು ಹಿಡಿದುಕೊಂಡು ರಸ್ತೆಯ ಬದಿಯಲ್ಲಿ ಮಲಗಿದ್ದ ದನಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದು, ದನಗಳು ಗಾಬರಿಯಿಂದ ಓಡುತ್ತಿರುವುದು ಕಂಡು ಇವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಆರೋಪಿತರನ್ನು ಹಿಡಿದು ವಿಚಾರಿಸಿದಾಗ ರಸ್ತೆಯ ಬದಿಯಲ್ಲಿ ಮಲಗುವ ಬಿಡಾಡಿ ದನಗಳನ್ನು ಕಳವು ಮಾಡುವ ಸಲುವಾಗಿ ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದವರನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಟಾಟಾ ಟರ್ಬೋ ವಾಹನ ನಂಬ್ರ KA-26-5606, ಹುರಿಹಗ್ಗ ಹಾಗೂ ಎರಡು ದೊಣ್ಣೆಗಳನ್ನು ಮತ್ತು ಹಿಂದೆ ದನ ಕಳವು ಮಾಡಿ ಮಾರಾಟದಿಂದ ಬಂದ ನಗದು ಹಣ 88,200/- ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love