ಬೈಕ್ ಏರಿ ಲಾಕ್ ಡೌನ್ ಪಾಲಿಸುವಂತೆ ಜನರಿಗೆ ಮನವಿ ಮಾಡಿದ ಶಾಸಕ ಖಾದರ್ ಮತ್ತು ವೇದವ್ಯಾಸ ಕಾಮತ್
ಮಂಗಳೂರು: ಶಾಸಕರಾದ ಯು.ಟಿ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರು ಬುಧವಾರ ದ್ವಿಚಕ್ರ ವಾಹನ ಏರಿ ನಗರದ ವಿವಿಧೆಡೆ ಭೇಟಿ ನೀಡಿ ಲಾಕ್ ಡೌನ್ ಜಾರಿಯ ವೇಳೆ ಜನರು ರಸ್ತೆಯಲ್ಲಿ ತಿರುಗಾಡದಂತೆ ಕೊರೋನಾ ವೈರಸ್ ಸೋಂಕಿನ ಕುರಿತು ಮಾಹಿತಿ ನಿಡುವ ವಿನೂತನ ಪ್ರಯತ್ನ ಮಾಡಿದರು.
ಇಬ್ಬರೂ ಶಾಸಕರು ಎರಡು ದ್ವಿಚಕ್ರ ವಾಹನಗಳಲ್ಲಿ ನಗರದ ವಿವಿಧೆಡಿ ಸುತ್ತಾಡಿದರು ಈ ವೇಳೆ ರಸ್ತೆಯ ಮೇಲೆ ಓಡಾಡುತ್ತಿದ್ದ ಜನರಿಗೆ ಕೊರೊನಾ ವೈರಸ್ ಸೋಂಕಿನ ಕುರಿತು ತಿಳಿ ಹೇಳುವ ಪ್ರಯತ್ನ ಮಾಡಿದರಲ್ಲದೆ ಅನಗತ್ಯವಾಗಿ ಓಡಾಡುತ್ತಿದ್ದ ಜನರಿಗೆ ಮನೆಗೆ ಮರಳುವಂತೆ ಸೂಚಿಸಿದರು.ಕೊರೋನಾ ವೈರಸ್ ಸೋಂಕು ತಡೆಗೆ ಸರ್ಕಾರದ ಆದೇಶ ಪಾಲಿಸಿ ಮನೆಯಲ್ಲೇ ಇರುವಂತೆ ಮನವಿ ಮಾಡಿದರು.
ಅಲ್ಲದೆ ದಾರಿಯಲ್ಲಿ ಸಿಕ್ಕ ಪೊಲೀಸರ ಕ್ಷೇಮ ವಿಚಾರಿಸಿದ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರು ಅನಗತ್ಯವಾಗಿ ರಸ್ತೆಗಿಳಿಯುವವರ ವಾಹನ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿದರು.
ಶಾಸಕರ ಸಿಟಿ ರೌಂಡ್ಸ್ ಸಮಯದಲ್ಲಿ ಬೆಂಗಾವಲಾಗಿ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು. ವಿವಿಧೆಡೆ ತಳ್ಳುಗಾಡಿಗಳಲ್ಲಿ ತರಕಾರಿ ವ್ಯಾಪಾರಕ್ಕೆ ಹೊರಟಿದ್ದವರನ್ನು ಭೇಟಿಯಾದ ಶಾಸಕು, ಸುರಕ್ಷತ ಕ್ರಮಗಳನ್ನು ಪಾಲಿಸುವಂತೆ ಸೂಚನೆ ನೀಡಿದರು.