ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಪಾರಾದ ಸವಾರರು

Spread the love

ಬೈಕ್, ಕಾರು ನಡುವೆ ಭೀಕರ ಅಪಘಾತ, ಪವಾಡಸದೃಶವಾಗಿ ಪಾರಾದ ಸವಾರರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಂಬಳಬೆಟ್ಟು ಎಂಬಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರರು ಸಾವಿನಿಂದ ಪಾರಾಗಿದ್ದಾರೆ.

ಬೈಕ್ ಸವಾರ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದಾಗ ವೇಗವಾಗಿ ಬಂದ ಕಾರಿನ ಚಾಲಕ ಬೈಕ್​​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಆದರೂ ಪ್ರಯೋಜನವಾಗದೆ, ನಿಯಂತ್ರಣ ಕಳೆದುಕೊಂಡು ಕಾರು ಬೈಕ್​ಗೆ ಡಿಕ್ಕಿಯಾಗಿದೆ. ಮತ್ತೊಂದು ಭಾಗದಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್​​ಗೂ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಬಳಿಕ ಮಣ್ಣಿನ‌ ದಿಬ್ಬದ ಮೇಲೆ ಮಗುಚಿ ಬಿದ್ದಿದೆ. ಘಟನೆಯಲ್ಲಿ

ಕಾರು ಚಾಲಕ ಸನತ್ ಪವಾಡ ಸದೃಶವಾಗಿ ಪಾರಾಗಿದ್ದು, ಬೈಕ್ ಸವಾರ ಯತೀಶ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.


Spread the love