ಬೋಂದೆಲ್ ಸಂತ ಲಾರೆನ್ಸರ ವಾರ್ಷಿಕ ಹಬ್ಬ ವಿಜೃಂಭಣೆಯಿಂದ ನೆರವೇರಿತು
ಬೋಂದೆಲ್ ಸಂತ ಲಾರೆನ್ಸರ ನಾಮದ ಹಬ್ಬವು ಆಗಸ್ಟ್ 10 ರಂದು ನೆರವೇರಿತು. 10.30 ಗಂಟೆಯ ಪ್ರಧಾನ ಬಲಿಪೂಜೆಯ ನೇತೃತ್ವವನ್ನು ಮಂಗಳೂರಿನ ಧರ್ಮಾಧ್ಯಕ್ಷರಾದ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸಿದ್ದರು.
ಜೆಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ. ರೊನಾಲ್ಡ್ ಸೆರಾವೊ ಪ್ರವಚನ ನೀಡಿ, ಕ್ರಿಸ್ತನಿಗಾಗಿ ಪ್ರಾಣ ನೀಡಿದ ಸಂತ ಲಾರೆನ್ಸರ ಪ್ರೇರಣೆ ಪಡೆಯುವಂತೆ ಕರೆ ನೀಡಿದರು. ಚರ್ಚಿನ ಧರ್ಮಗುರು ವಂ. ಆಂಡ್ರ್ಯೂ ಲಿಯೊ ಡಿಸೋಜ ಧನ್ಯವಾದವನ್ನಿತ್ತರು.
ಹಬ್ಬದ ಯಶಸ್ಸಿಗೆ ದೇಣಿಗೆ ನೀಡಿದವರನ್ನು ಮತ್ತು ದುಡಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ದಶ ದಿನಗಳಲ್ಲಿ ಈ ಉತ್ಸವದ ಸಮಾರೋಪ ಇಂದು ಸಂಜೆ 6.00 ಗಂಟೆಯ ಬಲಿಪೂಜೆಯೊಂದಿಗೆ ನೆರವೇರಲಿದ್ದು ನಿಯೋಜಿತ ಧರ್ಮಾಧ್ಯಕ್ಷ ಅ. ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಲಿರುವರು.