ಬೋರುಗುಡ್ಡೆ ದನಕಳವು ಆರೋಪಿಯ ಬಂಧನ
ಮಂಗಳೂರು: ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನವನ್ನು ಹಾಗೂ ಬೋರುಗುಡ್ಡೆ ಧ್ವಜಸ್ಥಂಭದ ಬಳಿ ಮಲಗಿದ್ದ ದನವನ್ನು ಕಳವು ಮಾಡಿದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ತೋಡಾರು ನಿವಾಸಿ ಮೊಹಮ್ಮದ್ ಆರೀಫ್ ಅಲಿಯಾಸ್ ಪುಚ್ಚೇರಿ ಆರೀಫ್ ಎಂದು ಗುರುತಿಸಲಾಗಿದೆ.
ಬಂಧಿತನು ಜನವರಿ 27ರಂದು ತೆಂಕೆಎಡಪದವು ನಿವಾಸಿ ಅಣ್ಣು ನಾಯ್ಕ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನವನ್ನು ಮತ್ತು ಬೋರುಗುಡ್ಡೆ ಧ್ವಜಸ್ತಂಭದ ಬಳಿ ಮಲಗಿದ್ದ ದನವನ್ನು ಕೆಂಪು ಸ್ವಿಫ್ಟ್ ಕಾರಿನಲ್ಲಿ ಕಳವು ಮಾಡಿದ ಬಗ್ಗೆ ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅದರಂತೆ ಜುಲೈ 31ರಂದು ಆರೋಪಿಯನ್ನು ಬಡಗಪದವು ಎಂಬಲ್ಲಿ ಬಂಧಿಸಲಾಗಿದೆ.
ಬಂಧಿತನ ಮೇಲೆ ಬಜಪೆ, ಸುರತ್ಕಲ್, ಕಾವೂರು, ಮೂಡಬಿದ್ರೆ, ಪುತ್ತೂರು, ಗ್ರಾಮಾಂತರ, ಕೊಡಗು ಜಿಲ್ಲೆಯ ಸೋಮವಾರ ಪೇಟೆ, ಶನಿವಾರ ಸಂತೆ, ಕುಶಾಲನಗರ, ಉತ್ತರಕನ್ನಡ ಜಿಲ್ಲೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಗೋಕಳವು ಸಾಗಾಣಿಕೆ ಪೋಲಿಸರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡಚಣೆ, ಕೊಲೆಯತ್ನ ಇತ್ಯಾದಿ ಸುಮಾರು 19 ಪ್ರಕರಣ ದಾಖಲಾಗಿದ್ದು, 2 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ವಾರಂಟ್ ಹೊರಡಿಸಲಾಗಿದೆ.