Home Mangalorean News Kannada News ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವಸತಿಗೃಹಗಳ ಕಟ್ಟಡ ನಿರ್ಮಾಣ ಪ್ರಮೋದ್ ಮಧ್ವರಾಜ್

ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವಸತಿಗೃಹಗಳ ಕಟ್ಟಡ ನಿರ್ಮಾಣ ಪ್ರಮೋದ್ ಮಧ್ವರಾಜ್

Spread the love

ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವಸತಿಗೃಹಗಳ ಕಟ್ಟಡ ನಿರ್ಮಾಣ ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಶಿಫಾರಸಿನ ಮೇರೆಗೆ ಬ್ರಹ್ಮಾವರದಲ್ಲಿ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿಗಳ ವಸತಿಗೃಹಗಳ ನಿರ್ಮಾಣಕ್ಕೆ 2016-17ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿ.ಐ.ಪಿ. (ಪ್ರಾಜೆಕ್ಟ್ ಇಂಪ್ಲಿಮೆಂಟೇಶನ್ ಪ್ಲಾನ್)ಯಲ್ಲಿ ಅನುಮೋದನೆಗೊಂಡು ರೂ.936.00 ಲಕ್ಷದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ಹಾಗೂ ತಾಂತ್ರಿಕ ಮಂಜೂರಾತಿ ದೊರಕಿರುತ್ತದೆ.

ಈ ಕಟ್ಟಡದಲ್ಲಿ ನೆಲಮಹಡಿ ಹಾಗೂ ಮೊದಲನೇ ಮಹಡಿಗಳಿದ್ದು ನೆಲಮಹಡಿಯಲ್ಲಿ 862 ಚ.ಮೀ. ಹಾಗೂ ಮೊದಲನೇ ಮಹಡಿಯಲ್ಲಿ 847 ಚ.ಮೀ. ವಿಸ್ತೀರ್ಣವಿದೆ. ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ಹೊರರೋಗಿ ವಿಭಾಗ ಹಾಗೂ 30 ಹಾಸಿಗೆಗಳ ಒಳರೋಗಿ ವಿಭಾಗಗಳಿದ್ದು ವೈದ್ಯರುಗಳ ಕನ್ಸಲ್ಟಿಂಗ್ ಕೊಠಡಿ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಲ್ಯಾಬೊರೇಟರಿ, ಎಕ್ಸ್ –ರೇ ಕೊಠಡಿ, ದಂತ ಚಿಕಿತ್ಸಾ ಘಟಕ, ಆಯುಷ್ ಚಿಕಿತ್ಸಾ ಘಟಕ, ಪ್ರಸೂತಿ ಹಾಗೂ ಹೆರಿಗೆ ಘಟಕಗಳಿವೆ. ಈ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ದಿನಾಂಕ: 18.02.2017ರಂದು ಅಂತಿಮ ದಿನಾಂಕವಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love

Exit mobile version