ಬ್ರಹ್ಮಾವರ: ಮಂದಾರ್ತಿ 14ನೇ ವರ್ಶದ ಸಾಮೂಹಿಕ ವಿವಾಹ; 31 ಜೋಡಿಗಳು ಹಸೆಮಣೆಗೆ

Spread the love

ಬ್ರಹ್ಮಾವರ:ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬುಧವಾರ ದೇವಸ್ಥಾನದ ಎದುರಗಡೆ ಹಾಕಿದ ಸುಸಜ್ಜಿತ ಮಂಟಪದಲ್ಲಿ ನೂರಾರು ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯ ಶ್ರೀಪತಿ ಅಡಿಗ ಮತ್ತು ಎಂ.ಸದಾಶಿವ ಅಡಿಗರರ ಪೌರೋಹಿತ್ಯದ ನೇತೃತ್ವದಲ್ಲಿ ಈ 31 ಜೋಡಿಗಳು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

6bvr20

ದೇವಸ್ಥಾನದ ವತಿಯಿಂದ 30 ವಧುವಿಗೆ ಕರಿಮಣಿ ಹಾಗೂ ಧಾರೆ ಸೀರೆ, ಮತ್ತು ವರನಿಗೆ ಶರ್ವಾನಿಯನ್ನು ಉಚಿತವಾಗಿ ನೀಡಲಾಯಿತು. ಓರ್ವ ದಂಪತಿಯ ಖರ್ಚನ್ನು ದಾನಿ ಪ್ರಫುಲ್ಲ ರತ್ನಾಕರ ಶೆಟ್ಟಿ ಭರಿಸಿದರು. ಸರ್ಕಾರದ ಆದರ್ಶ ವಿವಾಹ ಯೋಜನೆಯಂತೆ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾದ ಈ ನೂತನ ದಂಪತಿಗಳಿಗೆ ಪ್ರೋತ್ಸಾಹಧನ ಪಡೆಯಲು ಅನುಕೂಲವಾಗುವಂತೆ ವಿವಾಹ ನೋಂದಣಿ ಮಾಡಿಕೊಳ್ಳಲಾಯಿತು. ಸಾಮೂಹಿಕ ವಿವಾಹದಲ್ಲಿ ಕುಂದಾಪುರ ತಾಲ್ಲೂಕಿನ 9ಜೋಡಿ, ಉಡುಪಿ ತಾಲ್ಲೂಕಿನ 11 ಜೋಡಿ, ಚಿಕ್ಕಮಗಳೂರಿನ 1, ತೀರ್ಥಹಳ್ಳಿಯ 4, ಹೊಸನಗರದ 2 ಮತ್ತು ಸೊರಬ, ಎನ್.ಆರ್.ಪುರ , ಕೊಪ್ಪದ ಮತ್ತು ಹುಕ್ಕೇರಿಯ ತಲಾ ಒಂದು ಜೋಡಿ ಈ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮದುವೆ ಕಾರ್ಯಕ್ರಮಕ್ಕೆ ವಧು ವರರ ಕಡೆಯಿಂದ ಆಗಮಿಸಿದ ಸಾವಿರಕ್ಕೂ ಮಿಕ್ಕಿದ ಜನರಿಗೆ ದೇವಸ್ಥಾನದ ವತಿಯಿಂದ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಚಾರುಲತಾ, ವ್ಯವಸ್ಥಾಪನಾ ಸಮಿತಿಯ ಶೇಡಿಕೊಡ್ಲು ವಿಠಲ ಶೆಟ್ಟಿ, ಕೆ.ಪಿ ಶೇಖರ್, ಗೋಪಾಲ್ ನಾಯಕ್, ಗಣೇಶ್ ಕುಂದರ್, ಮಾಲತಿ ಎಚ್.ಶೆಟ್ಟಿ, ರತ್ನ ಮರಕಾಲ್ತಿ ಹಾಗೂ ಅರ್ಚಕ ವರ್ಗ ಮತ್ತು ದೇವಸ್ಥಾನದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


Spread the love