ಬ್ರಹ್ಮಾವರ ಮಿನಿ ವಿಧಾನ ಸೌಧಕ್ಕೆ ರೂ. 10 ಕೋಟಿ ಮಂಜೂರಾಗಿದೆ – ರಘುಪತಿ ಭಟ್

Spread the love

ಬ್ರಹ್ಮಾವರ ಮಿನಿ ವಿಧಾನ ಸೌಧಕ್ಕೆ ರೂ. 10 ಕೋಟಿ ಮಂಜೂರಾಗಿದೆ – ರಘುಪತಿ ಭಟ್

ಉಡುಪಿ: ಬ್ರಹ್ಮಾವರದ ಮಿನಿವಿಧಾನಸೌಧಕ್ಕೆ ಈಗಾಗಲೇ 10 ಕೋಟಿ ರೂಪಾಯಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಬ್ರಹ್ಮಾವರದ ಮಿನಿವಿಧಾನಸೌಧಕ್ಕೆ ಈಗಾಗಲೇ 10 ಕೋಟಿ ರೂಪಾಯಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಬರುವ ಜನವರಿ 8ರಂದು ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ಅವರು ಉಡುಪಿಗೆ ಆಗಮಿಸಲಿದ್ದು, ಅಂದು ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಬ್ರಹ್ಮಾವರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಬ್ರಿ ತಾಲ್ಲೂಕು ಘೋಷಣೆ ಆಗುವ ಮೊದಲೇ ಬ್ರಹ್ಮಾವರ ತಾಲ್ಲೂಕು ಘೋಷಣೆಯಾಗಿದ್ದರೂ ಕೂಡ ಮಿನಿ ವಿಧಾನಸೌಧದ ಕನಸು ನನಸಾಗದೇ ಇರುವುದು ಪ್ರಸ್ತುತ ಶಾಸಕ ಕೆ. ರಘುಪತಿ ಭಟ್ ಅವರ ವೈಪಲ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದ್ದರು.


Spread the love