ಬ್ರಹ್ಮಾವರ : ಕೊಳ್ಕೆಬೈಲು ಗರಡಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಾಂತ್ರಿಕ ಭತ್ತ ಬೇಸಾಯ ಪದ್ಧತಿಯ ಬಗ್ಗೆ ಪಾತ್ರಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮವು ಹತ್ತಿರದ ಪ್ರಸಾದ್ ಶೆಟ್ಟಿ ಅವರ ಗದ್ದೆಯಲ್ಲಿ ಸೋಮವಾರದಂದು ಜರುಗಿತು.
ವಿದ್ಯಾಪೋಷಕ್ ಸಮಿತಿ ಸಾಯ್ಬರಕಟ್ಟೆ ಮತ್ತು ಸೌತ್ ಫೊಟೊಗ್ರಾಪರ್ಸ್ ಎಸೋಶಿಯೇಶನ್ ಬ್ರಹ್ಮಾವರ ವಲಯದ ಜಂಟಿ ಆಶ್ರಯದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕೋಟ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಂಕರ್ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾಪೋಷಕ್ ಸಮಿತಿಯ ಪ್ರಸಾದ್ ಶೆಟ್ಟಿ, ರಂಗನಾಥ ಅಡಿಗ, ಸೌತ್ ಫೊಟೊಗ್ರಾಪರ್ಸ್ ಎಸೋಶಿಯೇಶನ್ ಬ್ರಹ್ಮಾವರ ವಲಯದ ಅಧ್ಯಕ್ಷ ರಾಮಪ್ರಕಾಶ್, ಕೊಳ್ಕೆಬೈಲು ಗರಡಿ ಹಿರಿಯ ಪ್ರಾಥಮಿಕ ಶಾಲಾಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಬಾಬು ಶೆಟ್ಟಿ, ಶಾಲಾ ಶಿಕ್ಷಕ ಸುರೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ಧರು.