ಭಜನೆ, ಯಕ್ಷಗಾನಕ್ಕೆ ಪೊಲೀಸ್ ಅಡ್ಡಿ; ಮೆಚ್ಚುಗೆಗೆಪಾತ್ರವಾಯಿತು ಶಾಸಕರ ನಡೆ

Spread the love

ಭಜನೆ, ಯಕ್ಷಗಾನಕ್ಕೆ ಪೊಲೀಸ್ ಅಡ್ಡಿ; ಮೆಚ್ಚುಗೆಗೆಪಾತ್ರವಾಯಿತು ಶಾಸಕರ ನಡೆ

ಮಂಗಳೂರು: ಶಿವರಾತ್ರಿ‌ ಪ್ರಯುಕ್ತ ಮಂಗಳೂರಿನ ಕಾವೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಯಕ್ಷಗಾನ ಮತ್ತು ಅಹೋರಾತ್ರಿ ಭಜನೆಗೆ ಪೊಲೀಸರು ಅಡ್ಡಿ ಉಂಟು ಮಾಡುವ ಮೂಲಕ‌ ಭಕ್ತಾದಿಗಳ ಆಕ್ರೋಶಕ್ಕೆ ಕಾರಣರಾದರು.

ಪ್ರತಿವರ್ಷದಂತೆ ಈ ಬಾರಿಯೂ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಸಾಯಂಕಾಲ 6ರಿಂದ ಬೆಳಗ್ಗೆ 6ರ ವರೆಗೆ ಭಜನೆ ಹಮ್ಮಿಕೊಳ್ಳಲಾಗಿತ್ತು.

ಅಲ್ಲದೆ ಕೊಲ್ಲಂಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನವನ್ನೂ ಏರ್ಪಡಿಸಲಾಗಿತ್ತು. ಎರಡೂ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿರುವ ವೇಳೆ ರಾತ್ರಿ ಆಗಮಿಸಿದ ಕಾವೂರು ಪೊಲೀಸರು ಎರಡನ್ನೂ ನಿಲ್ಲಿಸುವಂತೆ ಸೂಚಿಸಿದರು. ಆದರೆ ಸಂಘಟಕರು ಇದು ಪ್ರತಿ ವರ್ಷ ಆಗುವ ಆಚರಣೆ ಎಂದು ಉತ್ತರಿಸಿದರು.

ಆಗ ಪೊಲೀಸರೇ ತೆರಳಿ ಮೈಕ್ ನಿಲ್ಲಿಸಿದ್ದು ಅಲ್ಲಿದ್ದವರ ಆಕ್ರೋಶಕ್ಕೆ ಕಾರಣವಾಯಿತು. ಪಣಂಬೂರು ಎಸಿಪಿ ಸ್ಥಳಕ್ಕೆ ಆಗಮಿಸಿ, ಯಕ್ಷಗಾನವನ್ನು ಡಿಜೆಗೆ ಹೋಲಿಸಿ, ರಾತ್ರಿ ಶಬ್ದಮಾಲಿನ್ಯ ಮಾಡುವಂತಿಲ್ಲ ಎಂದದ್ದು ಭಕ್ತರಿಗೆ ನೋವುಂಟು ಮಾಡಿತು.

ಸ್ಥಳಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಆಗಮಿಸಿ ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್ ರವರು ಕೂಡ ಪೋಲಿಸರ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಹಾಗೂ ಮುಂದಿನ ಕ್ರಮದ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.ತದ ನಂತರ ಯಕ್ಷಗಾನ ಸಂಪೂರ್ಣ ಮುಗಿಯುವವರೆಗೂ ಸ್ಥಳದಲ್ಲಿ ಉಪಸ್ಥಿತರಿದ್ದು ಜನರಲ್ಲಿ ವಿಶ್ವಾಸ ಮೂಢಿಸಿದ ಶಾಸಕರಿಬ್ಬರ ಈ ನಡೆ ಜನರ ಮೆಚ್ಚುಗೆಗೆ ಪಾತ್ರವಾಯಿತು.


Spread the love