ಭಟ್ಕಳ: ಭಟ್ಕಳ ಇಂಟರ್ ಫೂಟ್ಬಾಲ್ ಅಸೋಶಿಯೇಶನ್ (ಬಿಫಾ) ಆಶ್ರಯದಲ್ಲಿ ಎಪ್ರಿಲ್ 23ರಿಂದ 24ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮುಕ್ತ ಫೂಟ್ಬಾಲ್ ಪಂದ್ಯಾವಳಿಯು ನಡೆಯಲಿದೆ.
ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪ್ರಬಲ ತಂಡಗಳು ಕಣಕ್ಕಿಳಿಯಲಿವೆ. ಎಪ್ರಿಲ್ 23ರಂದು ಸಂಜೆ 4.30ಗಂಟೆಗೆ ಸಿಪಿಐ ಪ್ರಶಾಂತ ನಾಯಕ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಇನಾಯಿತುಲ್ಲಾ ಶಾಬಂದ್ರಿ, ಎಸಿಎಫ್ ನಂದೀಶ್, ಹುಬ್ಬಳ್ಳಿ ಕಾಲೇಜಿನ ದೈಹಿಕ ಶೀಕ್ಷಣ ನಿದರ್ೇಶಕ ಎಮ್.ಇಷರ್ಾದ್ ಮಕ್ಕುಬಾಯ್, ಬಿಎಮ್ವಾಯ್ಎಫ್ನ ಪ್ರಧಾನ ಕಾರ್ಯದಶರ್ಿ ಮೌಲಾನಾ ಇಫರ್ಾನ ನದ್ವಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಿಫಾ ಕಿಟ್ನ್ನು ಹಿಫಾಜುರ್ರೆಹೆಮಾನ್ ಬಮರ್ಾವರ್ ಅನಾವರಣಗೊಳಿಸಲಿದ್ದಾರೆ.
ಎಪ್ರಿಲ್ 26ರಂದು ನಡೆಯುವ ಸಾರೋಪ ಸಮಾರಂಭದಲ್ಲಿ ಶಾಸಕ ಮಂಕಾಳು ವೈದ್ಯ, ಭಟ್ಕಳ ಉಪವಿಭಾಗಾಧಿಕಾರಿ ಚಿದಾನಂದ ವಟಾರೆ, ಬಿಎಮ್ವಾಯ್ಎಫ್ ಅಧ್ಯಕ್ಷ ಇಮ್ತಿಯಾಜ್ ಉದ್ಯಾವರ, ಜಿಲ್ಲಾ ಯುವಜನ ಸೇವಾ ಕ್ರೀಡಾಧಿಕಾರಿ ಗಾಯತ್ರಿ, ಭಟ್ಕಳ ತಹಸೀಲ್ದಾರ ವಿ.ಎನ್.ಬಾಡ್ಕರ್ ಉಪಸ್ಥಿತರಿರಲಿದ್ದಾರೆ. ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘಟಕರು, ಬಿಫಾ ಕಳೆದ ಹಲವು ವರ್ಷಗಳಿಂದ ಮಕ್ಕಳು ಹಾಗೂ ಯುವಕರಿಗಾಗಿ ಫೂಟ್ಬಾಲ್ ತರಬೇತಿ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಪಂದ್ಯಾವಳಿಯನ್ನು ಬಿಫಾ ಆಶ್ರಯದಲ್ಲಿ ನಡೆಸಲಾಗುತ್ತಿದ್ದು, ರಾಷ್ಟ್ರಮಟ್ಟದ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಭಟ್ಕಳ ಕ್ರೀಡಾಭಿಮಾನಿಗಳು ಪಂದ್ಯಾವಳಿಯುದ್ಧಕ್ಕೂ ಹಾಜರಿದ್ದು, ಪ್ರೋತ್ಸಾಹಿಸುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಮಾವಿಯಾ ಮೋತಿಶಮ್, ಗನಿಮ್ ಮೋತಿಶಮ್, ಅಹೀಸ್ ಮೋತಿಶಮ್, ಮಾಶಲ್ಲಾ ಶಾನು, ಇಷ್ತಿಯಾಕ್ ಹಸನ್, ಇಸ್ಮೈಲ್ ಮುನೀಬ್ ಮುಸ್ಬಾ ಉಪಸ್ಥಿತರಿದ್ದರು.