ಭಟ್ಕಳ ಮಂಗಳೂರು ಕೆಎಸ್.ಆರ್.ಟಿ.ಸಿ. ವೋಲ್ವೋ ಬಸ್ಸಿಗೆ ಚಾಲನೆ

Spread the love

ಭಟ್ಕಳ ಮಂಗಳೂರು ಕೆಎಸ್.ಆರ್.ಟಿ.ಸಿ. ವೋಲ್ವೋ ಬಸ್ಸಿಗೆ ಚಾಲನೆ

ಭಟ್ಕಳ : ಭಟ್ಕಳದಿಂದ ಮಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಸೇವೆಗೆ ಭಾನುವಾರ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿಯವರು ಭಟ್ಕಳದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಅವರು ಕರಾವಳಿ ಭಾಗದಲ್ಲಿ ಬಹುದಿನ ಬೇಡಿಕೆ ಇದ್ದ ಕೆಎಸ್ಆರ್ಟಿಸಿ ಬಸ್ ಈಡೇರಿದೆ. ಇಂದು ಕೇವಲ 6 ಬಸ್ ಮಾತ್ರ ಚಾಲನೆ ನೀಡಿದ್ದೇವೆ. ಇದು ಸರ್ಕಾರದ ಸಂಸ್ಥೆ ನಿಮ್ಮ ಸಂಸ್ಥೆ ಎಂದು ಭಾವಿಸಬೇಕು. ಈ ಭಾಗಕ್ಕೆ ಡಿಪೋಗಳನ್ನ ಮಾಡೊದಕ್ಕೆ, ಬಸ್ ನಿಲ್ದಾಣ ಮಾಡುವುದರ ಮೂಲಕ ಹೆಚ್ಚು ಬಸ್ನ್ನು ಈ ಭಾಗಕ್ಕೆ ನೀಡುವುದಕ್ಕೆ ತಿರ್ಮಾನ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಮಂಗಳೂರು-ಭಟ್ಕಳ ಮಾರ್ಗದ ಪ್ರಮುಖ ಸ್ಥಳಗಳ ಪ್ರಯಾಣದರ ಮಂಗಳೂರು-ಭಟ್ಕಳ ರೂ.225, ಮಂಗಳೂರು-ಕುಂದಾಪುರ ರೂ.160, ಉಡುಪಿ-ಕುಂದಾಪುರ ರೂ. 65, ಮಣಿಪಾಲ-ಕುಂದಾಪುರ ರೂ. 65, ಕುಂದಾಪುರ-ಬೈಂದೂರು ರೂ. 45. ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕರಾರಸಾಸಂ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

ವೋಲ್ವೊ ಬಸ್ಸಿನ ಸಮಯ
ಬೆಳಿಗ್ಗೆ 6.45ಕ್ಕೆ ಮಂಗಳೂರಿನಿಂದ ಹೊರಟು 9.54ಕ್ಕೆ ಭಟ್ಕಳ ತಲುಪಲಿದೆ. ಇದೇ ರೀತಿ ಬೆಳಿಗ್ಗೆ 7.15, 7.45, 10, 10.30, 11 ಅಪರಾಹ್ನ 2.45, 3.15, 3.45 ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ.

ಭಟ್ಕಳ- ಮಂಗಳೂರು : ಬೆಳಿಗ್ಗೆ 6ಕ್ಕೆ ಭಟ್ಕಳದಿಂದ ಹೊರಡಲಿದ್ದು, ಇದೇ ರೀತಿ ಬೆಳಿಗ್ಗೆ 6.30, 7, 10.45, 11.15, 11.45, ಅಪರಾಹ್ನ 2, 2.30, 3 ಕ್ಕೆ ಹೊರಡಲಿದೆ. ಸುರತ್ಕಲ್, ಮೂಲ್ಕಿ, ಉಡುಪಿ, ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಬೈಂದೂರುಗಳಲ್ಲಿ ನಿಲುಗಡೆ ಇದೆ. ಇದಲ್ಲದೆ ಈಗಾಗಲೇ ಇರುವ ಮಂಗಳೂರು-ಮಣಿಪಾಲದ ವೋಲ್ವೊ ಬಸ್ಸುಗಳು ಎಂದಿನಂತೆ ಒಡಾಡಲಿವೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೆಡಿಪಿ ಸದಸ್ಯರಾದ ಎಸ್.ರಾಜು ಪೂಜಾರಿ, ತ್ರಾಸಿ ತಾ.ಪಂ.ಸದಸ್ಯರಾದ ರಾಜು ದೇವಾಡಿಗ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಮದನ್ ಕುಮಾರ್, ಕಂಬದಕೋಣೆ ಜಿ.ಪಂ ಸದಸ್ಯೆ ಶ್ರೀಮತಿ ಗೌರಿ ದೇವಾಡಿ, ಗ್ರಾಮೀಣ ಕಾಂಗ್ರೆಸ್ನ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ನಾಕಟ್ಟೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾದ ನಾಗರಾಜ್ ಗಾಣಿಗ, ಕೆ.ಎಸ್.ಆರ್.ಟಿ.ಸಿ ಜಿಲ್ಲಾಧಿಕಾರಿ ವಿವೇಕಾನಂದ ಶೆಣೈ, ಯಡ್ತರೆ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಕಲಾವತಿ ನಾಗರಾಜ ಗಾಣಿಗ, ತಾ.ಪಂ. ಸದಸ್ಯೆ ಶ್ರೀಮತಿ ಪ್ರಮೀಳಾ ದೇವಾಡಿಗ ಮೊದಲಾದವರು ಭಾಗವಹಿಸಿದ್ದರು.


Spread the love