ಭಟ್ಕಳ: ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಬಾಕಿ ಉಳಿದ ವಿಷಯದ ಪರೀಕ್ಷೆಗೆ ಕುಳಿತುಕೊಳ್ಳಲು ಹಾಲ್ ಟಿಕೇಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಯೊರ್ವ ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಪ್ರಾಂಶುಪಾಲರ ಕೊಠಡಿಗೆ ಬಂದು ಪ್ರಾಂಶುಪಾಲರಿಗೆ ಹಲ್ಲೆ ನಡೆಸಿಸಿ ಅವಾಚ್ಯಾವಾಗಿ ಬೈದು ಜೀವ ಬೆದರಿಕೆ ಹಾಕಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಲಾಗಿದೆ.
ಪ್ರಾಂಶುಪಾಲ ಅಸ್ಫಾಕ್ ಅಹಮದ್ ಎನ್ನುವವರೇ ವಿದ್ಯಾರ್ಥಿಯಿಂದ ಹಲ್ಲಗೊಳದವರಾಗಿದ್ದಾರೆ. ಇವರು ನಗರ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ ಈ ಹಿಂದೆ ವಿದಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿ ಹೆಬಳೆಯ ಜಗದೀಶ ವಾಸು ಮೊಗೇರ ಎಂಬಾತ ಶನಿವಾರ ಬೆಳಿಗ್ಗೆ ತನ್ನ ಬಾಕಿ ಉಳಿದ ವಿಷಯ ಬ್ಯುಸಿನೆಸ್ ಕಮ್ಯುನಿಕೇಶನ್ ಸ್ಕಿಲ್ಸ್ ವಿಷಯದ ಪರೀಕ್ಷೆಗೆ ಹಾಜರಾಗು ಪ್ರವೇಶಪತ್ರವನ್ನು ನೀಡಲಿಲ್ಲ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದು ಇನ್ನೋರ್ವ ವಿದ್ಯಾರ್ಥಿ ಹನುಮಾನ ನಗರದ ಅಭಿಷೇಕ ತಿಮ್ಮಪ್ಪ ಎನ್ನುವವನೊಂದಿಗೆ ಅಕ್ರಮವಾಗಿ ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿ ಕೈಯಿಂದ ಹೊಡೆದು ನನಗೆ ಹಲ್ಲೆ ಮಾಡದ್ದಲ್ಲದೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ ತಾನು ತಂದಿದ್ದ ಬೈಕಿನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ನಗರ ಠಾಣೆಯ ಪಿಎಸ್ಐ ಜಾನ್ಸನ್ ಡಿ’ಸೋಜಾ ತನಿಖೆ ನಡೆಸುತ್ತಿದ್ದಾರೆ.
ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರ ಮೇಲೆ ಏಕಾಎಕಿ ಬಂದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಕ್ರಮವನ್ನು ಕಾಲೇಜಿನ ಸಿಡಿಸಿ ಸದಸ್ಯ ಎಂ ಆರ್ ನಾಯ್ಕ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.