Home Mangalorean News Kannada News ಮಂಡ್ಯ ವ್ಯಕ್ತಿಗೆ ಕೋರೊನಾ ಸೋಂಕು – ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್

ಮಂಡ್ಯ ವ್ಯಕ್ತಿಗೆ ಕೋರೊನಾ ಸೋಂಕು – ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್

Spread the love

Updates – ಮಂಡ್ಯ ವ್ಯಕ್ತಿಗೆ ಕೋರೊನಾ ಸೋಂಕು – ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್

ಉಡುಪಿ: ಜಿಲ್ಲಾಡಳಿತದ ಸತತ ಪ್ರಯತ್ನದ ಫಲವಾಗಿ ಮುಂಬಯಿನಿಂದ ಖರ್ಜೂರ ಸಾಗಾಟದ ವಾಹನದಲ್ಲಿ ಬಂದಿದ್ದ ಮಂಡ್ಯ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ವೊಂದರಲ್ಲಿ ಸ್ನಾನ ಮಾಡಿದ್ದು ಮಾತ್ರವಲ್ಲದೇ ಹಲವು ಗಂಟೆಗಳ ಕಾಲ ಪೆಟ್ರೋಲ್ ಪಂಪ್ ಆವರಣದಲ್ಲಿ ತಂಗಿದ್ದು ದೃಢವಾಗಿದೆ.

ಆದ್ದರಿಂದ ಸೋಮವಾರ ಮಧ್ಯರಾತ್ರಿಯೇ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸರು ಸೇರಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿ ಟಿವಿ ಫೂಟೆಜ್ ಪರಿಶೀಲಿಸಿದ್ದು, ತೆಕ್ಕಟ್ಟೆ ಪೆಟ್ರೋಲ್ ಪಂಪ್ ನ 7 ಮಂದಿಯನ್ನು ಮತ್ತು ಲಾರಿ ಸಾಗಾಟದ ವೇಳೆ ತಪಾಸಣೆ ಮತ್ತು ಅವರ ಜೊತೆಗಿದ್ದ ಸಾಸ್ತಾನ ಟೋಲ್ ಸಂಬಂದಪಟ್ಟ ಆರು ಮಂದಿಯನ್ನು ಕ್ವಾರೆಂಟೈನ್ಗೆ ಕಳಿಸಲಾಗಿದೆ.

ಸೋಮವಾರ ರಾತ್ರಿಯೇ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಹಾಗೂ ಕೋಟ ಪಿಎಸ್ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿಗಳು ತಡರಾತ್ರಿಯವರೆಗೂ ತೆಕ್ಕಟ್ಟೆಯಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಾತ್ರಿಯೇ ಹಲವರನ್ನು ಕ್ವಾರೆಂಟೈನ್ ಮಾಡಲು ಕಳುಹಿಸಲಾಗಿದೆ.

ಭಯ ಬೇಡ : ತ್ರಾಸಿ ಪೆಟ್ರೋಲ್ ಬಂಕ್ ಸೀಲ್‍ ಡೌನ್ ಆಗಿಲ್ಲ

ಮಂಡ್ಯ ಮೂಲದ ಕೊರೋನಾ ಸೋಂಕಿತ ವ್ಯಕ್ತಿ ತ್ರಾಸಿ ಪೆಟ್ರೋಲ್ ಬಂಕ್ ಪ್ರವೇಶಿಸಿಲ್ಲ. ಸಿಸಿಟಿವಿ ಪರಿಶೀಲನೆ ನಡೆಸಿದ ಗಂಗೊಳ್ಳಿ ಪೊಲೀಸರು.

ಕುಂದಾಪುರ: ಕೊರೋನಾ ಸೋಕಿತ ಮಂಡ್ಯ ಮೂಲದ ವ್ಯಕ್ತಿಯೋರ್ವ ಇಲ್ಲಿಗೆ ಸಮೀಪದ ತ್ರಾಸಿ ಪೆಟ್ರೋಲ್ ಬಂಕ್‍ನಲ್ಲಿ ಸ್ನಾನ ಮಾಡಿ ವಿಶ್ರಾಂತಿ ಪಡೆದು ಹೋಗಿದ್ದರಿಂದಾಗಿ ಪೆಟ್ರೋಲ್ ಬಂಕ್ ಅನ್ನು ಸೀಲ್‍ಡೌನ್ ಮಾಡಲಾಗಿದೆ ಎನ್ನುವ ಸುಳ್ಳು ವದಂತಿಯಿಂದಾದಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ತ್ರಾಸಿ ಪೆಟ್ರೋಲ್ ಬಂಕ್‍ನಲ್ಲಿ ಸೋಂಕಿತ ವ್ಯಕ್ತಿ ಪ್ರಯಾಣಿಸಿದ್ದ ಲಾರಿ ಪ್ರವೇಶವಾಗಿಲ್ಲ. ತ್ರಾಸಿಯ ಆಸುಪಾಸಿನ ಜನರು ಆತಂಕಪಡುವ ಅಗತ್ಯವಿಲ್ಲ. ಲಾರಿ ನೇರವಾಗಿ ರಾ.ಹೆದ್ದಾರಿಯಲ್ಲಿ ಸಾಗಿದ್ದು, ಈ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯಾವಳಿಗಳಲ್ಲಿ ದಾಖಲಾಗಿವೆ ಎಂದು ಗಂಗೊಳ್ಳಿ ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 20ರಂದು ಮಂಡ್ಯದಿಂದ ಖರ್ಜೂರ ಕ್ಯಾಂಟರ್‍ನಲ್ಲಿ ಪ್ರಯಾಣ ಬೆಳೆಸಿದ್ದ ಕೊರೋನಾ ಸೋಂಕಿತ ಮಂಡ್ಯ ಮೂಲದ ವ್ಯಕ್ತಿಯೋರ್ವ 21ರ ಸಂಜೆ ಕುಂದಾಪರದ ಪೆಟ್ರೋಲ್ ಬಂಕ್‍ವೊಂದರಲ್ಲಿ ಸ್ನಾನ ಮಾಡಿ ಬಳಿಕ ಉಟ ತಯಾರಿಸಿ ಊಟ ಮಾಡಿಕೊಂಡು ಮಧ್ಯರಾತ್ರಿ ಪ್ರಯಾಣ ಮುಂದುವರೆಸಿದ್ದಾನೆ.

ಈ ಬಗ್ಗೆ ಮಾಹಿತಿ ಕಲೆಹಾಕಿದ ಗಂಗೊಳ್ಳಿ ಪೊಲಿಸರು ತ್ರಾಸಿ ಪೆಟ್ರೋಲ್ ಬಂಕ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಏಪ್ರಿಲ್ 21ರ ಸಂಜೆ 5.19ಕ್ಕೆ ಕ್ಯಾಂಟರ್ ತ್ರಾಸಿ ಪೆಟ್ರೋಲ್ ಬಂಕ್ ಮುಂದಿನ ರಾ.ಹೆದ್ದಾರಿಯಲ್ಲಿ ಹಾದು ಹೋಗಿದ್ದು, 6.10ಕ್ಕೆ ತಲ್ಲೂರು ಪ್ರವಾಸಿ ಬಳಿಯಲ್ಲಿನ ಪೆಟ್ರೋಲ್ ಬಂಕ್ ಎದುರು ಪಾಸಾಗಿದ್ದು, ಬೆಳಿಗ್ಗೆ 3 ಗಂಟೆ ಸುಮಾರಿಗೆ ಸಾಸ್ತಾನ ಟೋಲ್ ಪಾಸ್ ಆದ ಬಗ್ಗೆ ಮಾಹಿತಿಯನ್ನು ಪೊಲೀಸರು ಕೆಲಹಾಕಿದ್ದಾರೆ.

ತ್ರಾಸಿ ಬೀಚ್ ಹಾದು ಸುಮಾರು ಅರ್ಧ ಗಂಟೆಗೂ ಅಧಿಕ ದೂರದಲ್ಲಿನ ರಾ.ಹೆದ್ದಾರಿಯ ಎಡಬದಿಯ ಪೆಟ್ರೋಲ್ ಬಂಕ್ವೊಂದರಲ್ಲಿ 800ಲೀ ಡಿಸೇಲ್ ಹಾಕಿ ಅಲ್ಲಿಯೇ ಕ್ಯಾಂಟರ್ ನಿಲ್ಲಿಸಿ ಸ್ನಾನ ಮಾಡಿ, ಊಟ ತಯಾರಿಸಿ ಊಟ ಮಾಡಿದ ಬಳಿಕ ಸ್ವಲ್ಪ ಹೊತ್ತು ನಿದ್ದೆ ಮಾಡಿ ರಾತ್ರಿ 2 ಗಂಟೆ ಸುಮಾರಿಗೆ ಅಲ್ಲಿಂದ ಹೊರಟಿರುವುದಾಗಿ ಚಾಲಕ ಪೊಲೀಸರಿಗೆ ವಿವರಿಸಿದ್ದಾನೆ.


Spread the love

Exit mobile version