Home Mangalorean News Kannada News ಭಾರತದಲ್ಲಿ ಮತ್ತೆ ಪಬ್ ​ಜಿ ಹವಾ ಶುರು? ಚೀನಾದ ಟೆನ್ಸೆಂಟ್ ಕಂಪನಿಯಿಂದ ದೂರವಾದ ದಕ್ಷಿಣ ಕೊರಿಯಾ...

ಭಾರತದಲ್ಲಿ ಮತ್ತೆ ಪಬ್ ​ಜಿ ಹವಾ ಶುರು? ಚೀನಾದ ಟೆನ್ಸೆಂಟ್ ಕಂಪನಿಯಿಂದ ದೂರವಾದ ದಕ್ಷಿಣ ಕೊರಿಯಾ ಸಂಸ್ಥೆ

Spread the love

ಭಾರತದಲ್ಲಿ ಮತ್ತೆ ಪಬ್​ಜಿ ಹವಾ ಶುರು? ಚೀನಾದ ಟೆನ್ಸೆಂಟ್ ಕಂಪನಿಯಿಂದ ದೂರವಾದ ದಕ್ಷಿಣ ಕೊರಿಯಾ ಸಂಸ್ಥೆ

ನವದೆಹಲಿ: ಭಾರತದಲ್ಲಿ ಪಬ್​ಜಿ ನಿಷೇಧದ ನಂತರ, ದಕ್ಷಿಣ ಕೊರಿಯಾದ ಕಂಪನಿಯ ಘಟಕ ಪ್ಲೇಯರ್ ಅನ್ನೌನ್ಸ್ ಬ್ಯಾಟಲ್ ಗ್ರೌಂಡ್ಸ್ ಭಾರತದಲ್ಲಿ ಪಬ್​ಜಿ ಮೊಬೈಲ್ ಫ್ರ್ಯಾಂಚಾಯ್ಸಿಯನ್ನುಚೀನಾದ ಟೆನ್ಸೆಂಟ್ ಗೇಮ್ಸ್ ಗೆ ನಿಡದಿರಲು ತೀರ್ಮಾನಿಸಿದೆ. ಬದಲಿಗೆ ಪಬ್​ಜಿ ಕಾರ್ಪೊರೇಷನ್ ಈಗ ದೇಶದ ಎಲ್ಲಾ ಪಬ್ಲಿಶಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ

ಈ ಕ್ರಮವು ಜನಪ್ರಿಯ ಆಟ ಭಾರತದಲ್ಲಿ ಪುನಾರಂಭಗೊಳ್ಳಲು ಸಹಾಯ ಮಾಡಲಿದೆ.ಇದು ಬಳಕೆದಾರರ ನೆಲೆಯಲ್ಲಿ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲದೆ ಸರ್ಕಾರದ ಅಪ್ಲಿಕೇಶನ್ ನಿಷೇಧ ಉಪಕ್ರಮವು ಇಲ್ಲಿಯವರೆಗೆ ಚೀನಾದ ಕಂಪನಿಗಳನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ.

“ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಬ್‌ಜಿ ಕಾರ್ಪೊರೇಷನ್ ಇನ್ನು ಮುಂದೆ ಚೀನಾದ ಟೆನ್ಸೆಂಟ್ ಗೇಮ್ಸ್ ಗೆ ಭಾರತದಲ್ಲಿ ಫ್ರ್ಯಾಂಚಾಯ್ಸಿಯನ್ನು ನೀಡದಿರಲು ತೀರ್ಮಾನಿಸಿದೆ. ಬದಲಾಗಿ ಪಬ್‌ಜಿ ಕಾರ್ಪೊರೇಷನ್ ದೇಶದೊಳಗಿನ ಎಲ್ಲಾ ಪಬ್ಲಿಷಿಂಗ್ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ತನ್ನ ದಾರಿಯನ್ನು ಅನ್ವೇಷಿಸುತ್ತಿದ್ದಂತೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಸ್ವಂತವಾದ ಪಬ್‌ಜಿ ಆಟದ ಅನುಭವ ಒದಗಿಸಲಿದೆ. ಸ್ಥಳೀಯ ಮತ್ತು ಆರೋಗ್ಯಕರ ಆಟದ ವಾತಾವರಣವನ್ನು ಉಳಿಸಿಕೊಳ್ಳುವ ಮೂಲಕ ಅದನ್ನು ರೂಪಿಸಲು ಕಂಪನಿ ಬದ್ದವಾಗಿದೆ” ಪಬ್‌ಜಿ ಕಾರ್ಪೊರೇಷನ್ ಹೇಳಿಕೆ ವಿವರಿಸಿದೆ.

ಆಟಗಾರರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯು ಕಂಪನಿಗೆ ಮೊದಲ ಆದ್ಯತೆಯಾಗಿರುವುದರಿಂದ ಸರ್ಕಾರ ಕೈಗೊಂಡ ಕ್ರಮಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಣ್ಡಿದ್ದೇವೆ ಹಾಗೂಗೌರವಿಸುತ್ತದೆ ಎಂದು ಅದು ಹೇಳಿದೆ. “ಭಾರತೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸುವಾಗ ಗೇಮರ್ ಗಳಿಗಾಗಿ ಮತ್ತೊಮ್ಮೆ ವಾರ್ ಫೀಲ್ಡ್ ಗೆ ಇಳಿಯಲು ಅನುವು ಮಾಡಿಕೊಡುವ ಪರಿಹಾರವನ್ನು ಕಂಡುಹಿಡಿಯಲು ಭಾರತ ಸರ್ಕಾರದೊಂದಿಗೆ ಕೈಜೋಡಿಸಲು ನಾವು ಆಶಿಸುತ್ತಿದೆ” ಎಂದು ಕಾರ್ಪೋರೇಷನ್ ಹೇಳಿದೆ.

ಎರಡು ನೆರೆರಾಷ್ಟ್ರಗಳ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವುದರಿಂದ ಸೆಪ್ಟೆಂಬರ್ 2 ರಂದು, ಸೈಬರ್ ಸುರಕ್ಷತೆಯ ಬಗ್ಗೆ ಪಬ್‌ಜಿ ಮೊಬೈಲ್, ಪಬ್‌ಜಿ ಮೊಬೈಲ್ ಲೈಟ್ ಮತ್ತು ಇತರ 116 ಚೀನೀ ಮೂಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಭಾರತ ನಿರ್ಧರಿಸಿತು.


Spread the love

Exit mobile version