Home Mangalorean News Kannada News ಭಾರತವನ್ನು ಕ್ರೀಡಾಕ್ಷೇತ್ರದಲ್ಲಿ ಜನಪ್ರಿಯಗೊಳಿ ಸಿ– ಮೇಯರ್ ಭಾಸ್ಕರ್ ಕೆ

ಭಾರತವನ್ನು ಕ್ರೀಡಾಕ್ಷೇತ್ರದಲ್ಲಿ ಜನಪ್ರಿಯಗೊಳಿ ಸಿ– ಮೇಯರ್ ಭಾಸ್ಕರ್ ಕೆ

Spread the love

ಭಾರತವನ್ನು ಕ್ರೀಡಾಕ್ಷೇತ್ರದಲ್ಲಿ ಜನಪ್ರಿಯಗೊಳಿ ಸಿ– ಮೇಯರ್ ಭಾಸ್ಕರ್ ಕೆ

ಮಂಗಳೂರು: ನೆಹರು ಯುವಕೇಂದ್ರ ಮಂಗಳೂರು, ಪಕ್ಕಲಡ್ಕ ಯುವಕ ಮಂಡಲ( ರಿ) ಇದರ ಸಂಯುಕ್ತ ಆಶ್ರಯಲ್ಲಿ ನಿನ್ನೆ ಪಕ್ಕಲಡ್ಕದಲ್ಲಿ ನಡೆದ ಅಂತರ್ ಯುವ ಮಂಡಲದ ಕ್ರೀಡಾಕೂಟವನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕೆ. ಭಾಸ್ಕರ್ ಅವರು ಉದ್ಘಾಟಿಸಿದರು.

ಅವರು ಯುವಜನರನ್ನು ಶಾರೀರಿಕವಾಗಿ ಸದೃಢಗೊಳಿಸುವುದು ಹಾಗೂ ಅವರ ಪ್ರತಿಭೆಯನ್ನು ಹೊರಹೊಮ್ಮಿಸಲು ಪ್ರೇರೇಪಿಸುವ ಹಾಗು ಯುವಜನರಲ್ಲಿ ಕ್ರೀಡಾಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದಲೇ ಭಾರತ ಸರಕಾರದ ಅನುದಾನದಲ್ಲಿ ನಡೆಯುವ ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ. ಈ ಕ್ರೀಡಾಕೂಟದಲ್ಲಿ ಯುವಜನರು ಜಾತಿ, ಧರ್ಮಗಳ ಅರಿವಿಲ್ಲದೆ ಸೌಹಾರ್ಧತೆಯಿಂದ ತೊಡಗಿಸಿಕೊಂಡು ಕ್ರೀಡಾ ಆಸಕ್ತಿ ಬೆಳೆಸುವುದು ಹಾಗು ಐಕ್ಯತೆಯಿಂದ ಬಾಳ್ವೆ ನಡೆಸಿ ಕ್ರೀಡಾಕ್ಷೇತ್ರದಲ್ಲಿ ಭಾರತವನ್ನು ಎತ್ತರಕ್ಕೆ ಬೆಳೆಸಲು ಸಹಕಾರಿಯಾಗಲಿ ಎಂದು ಹಾರೈಸಿದರು.

ಈ ವೇಳೆ ವೇದಿಕೆಯಲ್ಲಿ ನೆಹರು ಯುವಕೇಂದ್ರ ಇಲಾಖೆಯ ಸಮನ್ವಯ ಅಧಿಕಾರಿ ರಘುವೀರ್ ಎಸ್, ಪಕ್ಕಲಡ್ಕ ಯುವಕ ಮಂಡಲದ ಅದ್ಯಕ್ಷರಾದ ನಾಗೇಶ್ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಬಜಾಲ್, ಜನತಾ ವ್ಯಾಯಮ ಶಾಲೆಯ ಅದ್ಯಕ್ಷರಾದ ಸುರೇಶ್ ಬಜಾಲ್ ಯುವಕ ಮಂಡಲದ ಸಲಹಾ ಸಮಿತಿ ಸದಸ್ಯರಾದ ಪ್ರಭಾಕರ್ ಟೈಲರ್, ಜಯಂತ್ ಪಕ್ಕಲಡ್ಕ, ಲಕ್ಷ್ಮಣ್ ಕುಡ್ತಡ್ಕ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಹಾಗೂ ವಯಕ್ತಿಕ ವಿಭಾಗದಲ್ಲಿ ಹಲವು ಬಗೆಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕೊನೆಗೆ ಕ್ರೀಡೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ನಗರ ಅಭಿವೃದ್ಧಿ ಸ್ಥಾಯಿ ಸಮಿತಿ ಅದ್ಯಕ್ಷರು, ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ, ನೆಹರು ಯುವಕೇಂದ್ರ ಸಮನ್ವಯ ಅಧಿಕಾರಿ ರಘುವೀರ್ ಎಸ್, ರಿಫಾಯಿಯ್ಯ ದಪ್ಫ್ ಕಮಿಟಿ ಅದ್ಯಕ್ಷರಾದ ಜೈನುದ್ದೀನ್ ಪಕ್ಕಲಡ್ಕ, ಸಂತೋಷ್ ಬಜಾಲ್ , ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version