Home Mangalorean News Kannada News ಭಾಷಾವಾರು ಪ್ರಾಂತ್ಯದಿಂದ ಕಾಸರಗೋಡಿಗರಿಗೆ ಅನ್ಯಾಯ

ಭಾಷಾವಾರು ಪ್ರಾಂತ್ಯದಿಂದ ಕಾಸರಗೋಡಿಗರಿಗೆ ಅನ್ಯಾಯ

Spread the love

ಭಾಷಾವಾರು ಪ್ರಾಂತ್ಯದಿಂದ ಕಾಸರಗೋಡಿಗರಿಗೆ ಅನ್ಯಾಯ

ಮಂಗಳೂರುಃ ಭಾಷೆಯ ಆಧಾರದಲ್ಲಿ ರಾಜ್ಯಗಳ ರಚನೆ ಮಾಡಿರುವುದರಿಂದ ಗಡಿ ಪ್ರದೇಶದಲ್ಲಿ ಇರುವ ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕಾಸರಗೋಡು ಅಶೋಕ್ ಕುಮಾರ್ ಅವರು ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ನವೆಂಬರ್ 5 ಮಂಗಳವಾರ ನಗರದ ಪುರಭವನದಲ್ಲಿ ಆಯೋಜಿಸಿದ ಗಡಿನಾಡು ಸಂಸ್ಕೃತಿ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾಸರಗೋಡು ಕನ್ನಡನಾಡಿನ ಅವಿಭಾಜ್ಯ ಅಂಗವಾಗಬೇಕಾಗಿತ್ತು. ಹಾಗಾಗಲಿಲ್ಲ. ನಾವು ಕಾಸರಗೋಡಿಗಾಗಿ ರಾಜಕೀಯ ಹೋರಾಟ ಮಾಡಿ ಎರಡೆರಡು ಬಾರಿ ಕನ್ನಡ ಹೋರಾಟ ಸಮಿತಿ ಶಾಸಕರನ್ನು ಆಯ್ಕೆ ಮಾಡಿದ್ದೇವೆ. ಹೋರಾಟದಲ್ಲಿ ಬಲಿದಾನ ಕೂಡ ಆಯಿತು. ಈಗೀಗ ಕಾಸರಗಡಿನ ಕನ್ನಡಿಗರ ಹೋರಾಟದ ಕಿಚ್ಚು ಕಡಿಮೆಯಾಗಿದೆ ಎಂದವರು ಹೇಳಿದರು.

ಮಹಿಳೆಯರ ನೇತೃತ್ವದಲ್ಲೇ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಉತ್ತಮ ಕೆಲಸ ಮಾಡುತ್ತಿದೆ ಎಂದು ಗಡಿನಾಡು ಸಂಸ್ಕೃತಿ ಉತ್ಸವ ಉದ್ಘಾಟನೆಯನ್ನು ನೆರವೇರಿಸಿದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಡಿಎಂಒ ಡಾ. ರಾಜೇಶ್ವರಿ ದೇವಿ ಹಿರಿಯ ಪ್ರಸೂತಿ ತಜ್ಞೆ, ಡಾ.ಬಿ.ಪೂರ್ಣಿಣಾ ಆರ್ ಭಟ್ ಮತ್ತು ರಂಗಭೂಮಿ ಕಲಾವಿದ ದಿನೇಶ್ ಅತ್ತಾವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕಯುಕ್ತದ ದ.ಕ.ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮನ್ನಿಪ್ಪಾಡಿ, ಕಾರ್ಯದರ್ಶಿ ಕಲಾವತಿ ಉಪಸ್ಥಿತರಿದ್ದರು.


Spread the love

Exit mobile version