Home Mangalorean News Kannada News ಭ್ರಾಮರೀ ಯಕ್ಷಮಿತ್ರರಿಂದ ಯಕ್ಷವೈಭವ; ಸಾಮಾಜಿಕ ಜಾಲತಾಣದಿಂದ ಇಂತಹ ಯಕ್ಷಸೇವೆ ಶ್ಲಾಘನೀಯ – ವಿವೇಕ್ ರೈ

ಭ್ರಾಮರೀ ಯಕ್ಷಮಿತ್ರರಿಂದ ಯಕ್ಷವೈಭವ; ಸಾಮಾಜಿಕ ಜಾಲತಾಣದಿಂದ ಇಂತಹ ಯಕ್ಷಸೇವೆ ಶ್ಲಾಘನೀಯ – ವಿವೇಕ್ ರೈ

Spread the love

ಭ್ರಾಮರೀ ಯಕ್ಷಮಿತ್ರರಿಂದ ಯಕ್ಷವೈಭವ; ಸಾಮಾಜಿಕ ಜಾಲತಾಣದಿಂದ ಇಂತಹ ಯಕ್ಷಸೇವೆ ಶ್ಲಾಘನೀಯ – ವಿವೇಕ್ ರೈ

ಮಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕಲಾಸಕ್ತ‌ಮನಸ್ಸುಗಳನ್ನು ಜತೆಯಾಗಿಸಿಕೊಂಡು ಯಕ್ಷಸೇವೆ ಮಾಡುವುದು ಹಾಗೂ ಯಕ್ಷಗಾನದ ಎಲ್ಲಾ ಹಂತಗಳಲ್ಲಿ ಬೆಳೆದವರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ವಿಶ್ರಾಂತ ಕುಲಪತಿ ಡಾ| ಬಿ.ಎ.ವಿವೇಕ್ ರೈ ಅಭಿಪ್ರಾಯ ಪಟ್ಟರು.

ಮಂಗಳೂರು ಪುರಭವನದಲ್ಲಿ ಶನಿವಾರ ರಾತ್ರಿ ನಡೆದ ವಾಟ್ಸಪ್ ಬಳಗವಾದ ಭ್ರಾಮರೀ ಯಕ್ಷಮಿತ್ರರು(ರಿ.) ಮಂಗಳೂರು ಇದರ ಮೂರನೇ ವರ್ಷದ ಯಕ್ಷವೈಭವ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.

ಶಾಸಕ ವೇದವ್ಯಾಸ್ ಕಾಮತ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಯಕ್ಷಗಾನದ ವಿಷಯಕ್ಕಾಗಿಯೇ ಮೀಸಲಿಟ್ಟ ವಾಟ್ಸಪ್ ಬಳಗವಾಗಿ ಆರಂಭಗೊಂಡು ನೋಂದಾಯಿಸಲ್ಪಟ್ಟ ಬಳಗವಾಗಿ ಭ್ರಾಮರೀ ಗುರುತಿಸಿಕೊಂಡಿದೆ‌.ಯಕ್ಷಗಾನದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿ ನೀಡಿ ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶ ಸರ್ವರಿಗೂ ಮಾದರಿ ಎಂದರು.

ಖ್ಯಾತ ಹಿಮ್ಮೇಳ ಕಲಾವಿದ ಮೋಹನ ಶೆಟ್ಟಿಗಾರ್ ಮಿಜಾರ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿಯನ್ನು, ಪಟ್ಲ ಸತೀಶ್ ಶೆಟ್ಟಿಯವರಿಗೆ ಗೌರವ ಸನ್ಮಾನವನ್ನೂ,ಹಾಗೂ ನೇಪಥ್ಯ ಕಲಾವಿದರಾದ ಬಿ.ಐತಪ್ಪ ಟೈಲರ್ ,ರಘು ಶೆಟ್ಟಿ ‌ನಾಳ ಅವರನ್ನು ಸನ್ಮಾನಿಸಲಾಯಿತು.

ಮೇಯರ್ ಭಾಸ್ಕರ್ ಕೆ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್,ದಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಬ್ರಿಟಿಷ್ ಬಯಲೋಜಿಕಲ್ಸ್ ನ ವಲಯ ಪ್ರಬಂಧಕ ಸಿ.ಎಸ್ ಭಂಢಾರಿ,ಮನಾಪ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಉದ್ಯಮಿ ರಮೇಶ್ ಶೆಟ್ಟಿ ಕಾರ್ಕಳ,ಶಾರದಾ ಶಿಕ್ಷಣ ಸಮೂಹ ಸಂಸ್ಥೆ ಯ ಪ್ರೋ|ಎಂ.ಬಿ.ಪುರಾಣಿಕ್,ಮುಖ್ಯ ಅತಿಥಿಗಳಾಗಿದ್ದರು,ಬಳಗದ ಅದ್ಯಕ್ಷ ವಿನಯಕೃಷ್ಣ ಕುರ್ನಾಡು ಸ್ವಾಗತಿಸಿದರು, ದಿನೇಶ್ ಇರಾ ಕಾರ್ಯಕ್ರಮ ನಿರ್ವಹಿಸಿದರು.ನಂತರ ಪ್ರಸಿದ್ದ ಕಲಾವಿದರಿಂದ ಸತ್ಯಹರಿಶ್ಚಂದ್ರ, ಶೂರ್ಪನಖಾ ವಿವಾಹ,ಮಕರಾಕ್ಷ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು


Spread the love

Exit mobile version