Home Mangalorean News Kannada News ಮಂಗಳೂರಲ್ಲೂ ಅರಳಿದ ಕಮಲ ಸಚಿವ ರಮಾನಾಥ ರೈ ಸೇರಿ ಆರು ಹಾಲಿ ಶಾಸಕರಿಗೆ ಸೋಲು

ಮಂಗಳೂರಲ್ಲೂ ಅರಳಿದ ಕಮಲ ಸಚಿವ ರಮಾನಾಥ ರೈ ಸೇರಿ ಆರು ಹಾಲಿ ಶಾಸಕರಿಗೆ ಸೋಲು

Spread the love

ಮಂಗಳೂರಲ್ಲೂ ಅರಳಿದ ಕಮಲ ಸಚಿವ ರಮಾನಾಥ ರೈ ಸೇರಿ ಆರು ಹಾಲಿ ಶಾಸಕರಿಗೆ ಸೋಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಕ್ಷೇತ್ರದಲ್ಲಿ ಕಮಲ ಅರಳಿದ್ದು, ರೈ ಸೇರಿದಂತೆ ಆರು ಶಾಸಕರು ಸೋಲು ಅನುಭವಿಸಿದ್ದಾರೆ. ಮಂಗಳೂರು ಕ್ಷೇತ್ರದಿಂದ ಸಚಿವ ಯು.ಟಿ.ಖಾದರ್‌ ಗೆದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮಾನ ಉಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟರಲ್ಲಿ ಏಳು ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ ಒಂದು ಸ್ಥಾನ ಪಡೆದುಕೊಂಡರೆ, ಬಿಜೆಪಿ ಏಳು ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದೆ.

ಬಿಜೆಪಿಯ ಶಕ್ತಿ ಕೇಂದ್ರವೆಂದೇ ಗುರುತಿಸಲ್ಪಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಆರು ಮಂದಿ ಹೊಸಬರು ಶಾಸಕರಾಗಿದ್ದರೆ, ಸುಳ್ಯ ಕ್ಷೇತ್ರದಲ್ಲಿ ಆರನೇ ಬಾರಿ ಶಾಸಕ ಅಂಗಾರ ಪುನರಾಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಕ್ಷೇತ್ರಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯು ಗೆಲುವಿನ ನಗೆ ಬೀರಿದೆ. ಕಳೆದ ಬಾರಿ ಬಿಜೆಪಿಯಿಂದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದ ಸುಳ್ಯ ಕ್ಷೇತ್ರದ ಅಂಗಾರ ಆರನೇ ಬಾರಿ ಶಾಸಕರಾಗಿ ಮತ್ತೆ ಆಯ್ಕೆಯಾಗಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಿಂದ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕ್ಷೇತ್ರದಿಂದ ಭರತ್ ಶೆಟ್ಟಿ, ಮೂಡಬಿದ್ರೆಯಿಂದ ಉಮನಾಥ ಕೋಟ್ಯಾನ್, ಬಂಟ್ವಾಳದಿಂದ ರಾಜೇಶ್ ನಾಯಕ್, ಬೆಳ್ತಂಗಡಿಯಿಂದ ಹರೀಶ್ ಪೂಂಜಾ, ಪುತ್ತೂರಿನಿಂದ ಸಂಜೀವ ಮಠಂದೂರು ಆಯ್ಕೆಯಾಗಿದ್ದಾರೆ. ಆದರೆ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದೆ.

ಇನ್ನು ಕಾಂಗ್ರೆಸ್ ಎಂಟರಲ್ಲಿ ಒಂದು ಸ್ಥಾನ ಪಡೆದುಕೊಳ್ಳುವಲ್ಲಿ ಮಾತ್ರ ಸಫಲವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಯು.ಟಿ.ಖಾದರ್ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದಿದ್ದಾರೆ. ಉಳಿದಂತೆ ಸಚಿವ ರಮನಾಥ ರೈ, ಶಾಸಕರಾದ ಮೊಯ್ದಿನ್ ಬಾವ, ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಜೆ. ಆರ್.ಲೋಬೋ ಸೋಲು ಅನುಭವಿಸಿದ್ದಾರೆ.

ಈ ನಡುವೆ ಈ ಸೋಲಿಗೆ ಇವಿಎಂ ಮಷಿನ್‌ನ ದುರುಪಯೋಗ ಕಾರಣ ಎಂದು ಕಾಂಗ್ರೆಸ್ ಶಾಸಕರು ಆಪಾದಿಸಿದ್ದು, ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರನ್ನು ಸಹ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷಗಳು ಕ್ಷೇತ್ರವಾರು ಪಡೆದ ಮತಗಳ ವಿವರ…

ಕ್ಷೇತ್ರ-ಮಂಗಳೂರು
ಬಿಜೆಪಿ- 61024
ಕಾಂಗ್ರೆಸ್-80813
ಕಾಂಗ್ರೆಸ್ ಮುನ್ನಡೆ-19739

ಕ್ಷೇತ್ರ-ಮೂಡಬಿದ್ರೆ
ಬಿಜೆಪಿ-87027
ಕಾಂಗ್ರೆಸ್- 57374
ಬಿಜೆಪಿ ಮುನ್ನಡೆ-29653

ಕ್ಷೇತ್ರ-ಬೆಳ್ತಂಗಡಿ
ಬಿಜೆಪಿ- 98417
ಕಾಂಗ್ರೆಸ್-75443
ಬಿಜೆಪಿ ಮುನ್ನಡೆ-22974

ಕ್ಷೇತ್ರ-ಮಂಗಳೂರು ಉತ್ತರ
ಬಿಜೆಪಿ- 98648
ಕಾಂಗ್ರೆಸ್- 72000
ಬಿಜೆಪಿ ಮುನ್ನಡೆ-26648

ಕ್ಷೇತ್ರ-ಬಂಟ್ವಾಳ
ಬಿಜೆಪಿ- 97802
ಕಾಂಗ್ರೆಸ್-81831
ಬಿಜೆಪಿ ಮುನ್ನಡೆ-15971

ಕ್ಷೇತ್ರ-ಸುಳ್ಯ
ಬಿಜೆಪಿ-95205
ಕಾಂಗ್ರೆಸ್-69175
ಬಿಜೆಪಿ ಮುನ್ನಡೆ 26068

ಕ್ಷೇತ್ರ-ಪುತ್ತೂರು
ಬಿಜೆಪಿ-89145
ಕಾಂಗ್ರೆಸ್-70190
ಬಿಜೆಪಿ ಮುನ್ನಡೆ-18496

ಕ್ಷೇತ್ರ-ಮಂಗಳೂರು ದಕ್ಷಿಣ
ಬಿಜೆಪಿ-86545
ಕಾಂಗ್ರೆಸ್-70470
ಬಿಜೆಪಿ ಮುನ್ನಡೆ-16075


Spread the love
1 Comment
Inline Feedbacks
View all comments
6 years ago

Inni vaa vaara?
Sulya du yer gendyer?
Angara.

wpDiscuz
Exit mobile version