ಮಂಗಳೂರಿನಲ್ಲಿ ಮತ್ಸೋದ್ಯಮ ಬೆಳೆಸಲು ವಿಪುಲ ಅವಕಾಶವಿದೆ – ಉಮಾನಾಥ ಕೋಟ್ಯಾನ್

Spread the love

ಮಂಗಳೂರಿನಲ್ಲಿ ಮತ್ಸೋದ್ಯಮ ಬೆಳೆಸಲು ವಿಪುಲ ಅವಕಾಶವಿದೆ – ಉಮಾನಾಥ ಕೋಟ್ಯಾನ್

ಕಡಲತಡಿ ಮಂಗಳೂರಿನಲ್ಲಿ ಮತ್ಸ್ಯೋದ್ಯಮಕ್ಕೆ ಪ್ರಸಿದ್ಧಿಯಾಗಿದ್ದು, ಇಲ್ಲಿ ಮತ್ಸೋದ್ಯಮ ಬೆಳೆಸಲು ಮತ್ತಷ್ಟು ವಿಪುಲ ಅವಕಾಶವಿದೆ. ಮುಖ್ಯವಾಗಿ ಪಿಲಿಕುಳದಲ್ಲಿ ನಡೆದಂತಹ ಮತ್ಸ್ಯೋತ್ಸವ ಮಾದರಿ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆದಾಗ ಹೊರ ರಾಜ್ಯ, ಜಿಲ್ಲೆಯ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೀನುಗಾರಿಕೆ ಇಲಾಖೆ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ಇವುಗಳ ಆಶ್ರಯದಲ್ಲಿ ಪಿಲಿಕುಳದಲ್ಲಿ ನಡೆದ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ ಮಾತನಾಡಿ, ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಪಿಲಿಕುಳದಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಮಾತನಾಡಿ, ಕರಾವಳಿ ಮೀನುಗಾರಿಕೆಗೆ ವಿಫುಲ ಅವಕಾಶವಿದೆ. ಆರೋಗ್ಯಕ್ಕೆ ಉತ್ತಮವಾದ ಮತ್ಸ್ಯಹಾರಕ್ಕೆ ವಿಶೇಷ ಪೆÇ್ರೀತ್ಸಾಹ ನೀಡಬೇಕೆಂಬುವುದನ್ನು ಸರಕಾರಕ್ಕೆ ಈಗಾಗಲೇ ಒತ್ತಾಯ ಮಾಡಲಾಗಿದೆ. ಸಮುದ್ರ ಮೀನುಗಾರಿಕೆಯಂತೆಯೇ ಒಳನಾಡ ಮೀನುಗಾರಿಕೆಗೆ ಪೆÇ್ರೀತ್ಸಾಹ ನೀಡುವ ಕೆಲಸವಾಗಬೇಕು. ಪಿಲಿಕುಳ ಮುಂದಿನ ದಿನಗಳಲ್ಲಿ ನಿಗಮವಾಗಿ ಮಾರ್ಪಾಡಾಗಲಿದ್ದು, ಇಲ್ಲೂ ಇಂತಹ ಕಾರ್ಯಕ್ರಮ ಹೆಚ್ಚು ನಡೆಯಬೇಕು ಎಂದರು.

ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಮಾತನಾಡಿ, ವರ್ಷಂಪ್ರತಿ ಪಿಲಿಕುಳದಲ್ಲಿ ಮತ್ಸ್ಯೋತ್ಸವ ನಡೆಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊಳದಲ್ಲಿ ಹಿಡಿದ ಮೀನುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.

ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಒಳನಾಡು ಮೀನು ಸಾಗಾಣಿಕೆ ತಜ್ಞ ಡಾ.ಎಂ.ಎಸ್. ನಝೀರ್, ಕೆಎಫ್‍ಡಿಸಿ ನಿರ್ದೇಶಕ ಎಂಎಲ್ ದೊಡ್ಮನಿ, ದಕ್ಷಿಣ ಕನ್ನಡ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಹೇಶ್ ಕುಮಾರ್, ಸಹಾಯಕ ನಿರ್ದೇಶಕಿ ಸುಶ್ಮಿತಾರಾವ್, ಮೀನು ಮರಿ ಉತ್ಪಾದಕ ಖಲೀಮುಲ್ಲಾ ಖಾನ್ ಉಪಸ್ಥಿತರಿದ್ದರು.


Spread the love