ಮಂಗಳೂರಿನಲ್ಲಿ ವೈದ್ಯ ರ ಮೇಲೆ ನಡೆದ ಹಲೆಯನ್ನು ಖಂಡಿಸಿ ಮೇ 22 ರಂದು ಪ್ರತಿಭಟನೆ
ಉಡುಪಿ: ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ವಿನಾಕಾರಣ ಹಲ್ಲುಗಳು ಹೆಚ್ಚು ತ್ತಿದೆ ಇತ್ತೀಚೆಗೆ ಕರ್ತವ್ಯ ನಿರತ ವೈದ್ಯ ರ ಮೇಲೆ ಹಲ್ಲೆ ನಡೆದಿರುವುದು ವೈದ್ಯ ತಮ್ಮ ಕರ್ತವ್ಯವನ್ನು ನಿರ್ಭಯವಾಗಿ ಮಾಡಲು ಕಷ್ಟ ವಾಗುತ್ತದೆ ಈ ಘಟನೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯು ಮೇ 22 ರಂದು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಯನ್ನು ಹಮ್ಮಿಕೊಂಡಿರುತ್ತದೆ.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಶಾಖೆಯು ಈ ಪ್ರತಿಭಟನೆ ಗೆ ಸಹಕಾರವನ್ನು ನೀಡುತ್ತಿದ್ದು. ಸಂಘದ ಎಲ್ಲಾ ವೈದ್ಯ ರು ಮೇ 22 ರಂದು ತಮ್ಮ ಹೊರರೋಗಿ ಸೇವೆ ಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗ ಬಾರದೆಂದು ತುರ್ತು ಚಿಕಿತ್ಸಾ ಸೇವೆ ಲಭ್ಯವಿರುತ್ತವೆ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಉಡುಪಿ ಕರಾವಳಿಯ ಹೆಚ್ಚಿನ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವೈದ್ಯರ ಮೇಲೆ ಹಲ್ಲೆ, ಅಪಹರಣ: ಅಜಿತ್‍ಕುಮಾರ್ ರೈ ಮಾಲಾಡಿ ಖಂಡನೆ
ಮಂಗಳೂರು: ಇತ್ತೀಚೆಗೆ ಯೇನಪೋಯ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿ ಅವರನ್ನು ಅಪಹರಿಸಿದ ಘಟನೆಯನ್ನು ಅಜಿತ್‍ಕುಮಾರ್ ರೈ ಮಾಲಾಡಿ ಖಂಡಿಸಿದ್ದಾರೆ.
ಜನ್ಮಕೊಟ್ಟ ತಂದೆ ತಾಯಿ ಗುರುಹಿರಿಯರು, ಅನ್ನ ಕೊಡುವ ರೈತ, ಜೀವದಾನ ನೀಡುವ ವೈದ್ಯರನ್ನು ದೇವರ ಸಮಾನವಾಗಿ ಕಾಣುವಂತಹ ಒಂದು ಉತ್ತಮ ಸಂಸ್ಕಾರಯುತ ದೇಶ ನಮ್ಮದು, ಆದರೆ ಮೊನ್ನೆ ಯೇನಪೋಯ ಆಸ್ಪತ್ರೆಯಲ್ಲಿ ನಡೆದ ಈ ವಿಷಾದನೀಯ ಘಟನೆಯು ನಮ್ಮ ಉತ್ತಮ ಸಂಸ್ಕಾರ, ಆಚಾರ ವಿಚಾರಕ್ಕೆ ವಿರುದ್ಧವಾಗಿದೆ ಹಾಗೂ ಅಮಾನವೀಯ ಅನಾಗರಿಕ ಘಟನೆಯಾಗಿದೆ. ಎಲ್ಲಾ ಪ್ರಜ್ಞಾವಂತ ನಾಗರಿಕರು ಇದನ್ನು ಖಂಡಿಸಬೇಕು ಹಾಗೂ ಎಲ್ಲಾ ಸಂಘಸಂಸ್ಥೆಗಳು, ಎಲ್ಲಾ ನಾಗರಿಕರು ಒಟ್ಟು ಸೇರಿ ಇದರ ವಿರುದ್ಧ ಧ್ವನಿ ಎತ್ತಬೇಕು, ಪ್ರತಿಭಟಿಸಬೇಕು. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಸಂಘಟಿತವಾಗಿ ನಾವು ಕೆಲಸ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಮಸ್ತ ನಾಗರಿಕರು ವೈದ್ಯರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಅವರು ವಿನಂತಿಸಿದ್ದಾರೆ.