ಮಂಗಳೂರಿನಲ್ಲಿ ಸಂಘಪರಿವಾರದ ಗೂಂಡಾಗಿರಿಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ : ಎಸ್ಡಿಪಿಐ ಆರೋಪ
ಮಂಗಳೂರು: ಮಂಗಳೂರಿನ ಕಮಿಷನರ್ ವ್ಯಾಪ್ತಿಯಲ್ಲಿ ಸಂಘಪರಿವಾರದ ಗೂಂಡಾಗಿರಿ ಮಿತಿಮೀರುತ್ತಿದೆ. ವಾರದ ಹಿಂದೆ ಜೋಕಟ್ಟೆಯ ಜಾನುವಾರು ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೌರ್ಯ ಮೆರೆದ ಘಟನೆ ಮಾಸುವ ಮುನ್ನವೇ ಕುದ್ರೋಳಿ ಕಸಾಯಿಖಾನೆ ಯಿಂದ ಅಧಿಕೃತ ದಾಖಲೆಯ ಮೂಲಕ ಇಂದು ಬೆಳಿಗ್ಗೆ 6:30ಕ್ಕೆ ಸರಿಯಾಗಿ ಕಂಕನಾಡಿ ಮಾರ್ಕೆಟ್ಗೆ ಮಾಂಸ ಸಾಗಾಟ ಮಾಡುತ್ತಿದ್ದಾಗ ಮಂಗಳೂರಿನ ಪಳ್ನೀರ್ನ ಐಲ್ಯಾಂಡ್ ಆಸ್ಪತ್ರೆಯ ಬಳಿ ಸಂಘಪರಿವಾರದ ಗೂಂಡಾಗಳು ಬೈಕ್ ಮತ್ತು ಕಾರುಗಳಲ್ಲಿ ಬಂದು ಟೆಂಪೋ ವನ್ನು ತಡೆದು ನಿಲ್ಲಿಸಿ ಚಾಲಕ ರಶೀದ್ನ ಮೇಲೆ ಹಲ್ಲೆ ನಡೆಸಿ ವಾಹನವನ್ನು ಹಾನಿಗೊಳಿಸಿ, ವಾಹನಕ್ಕೆ ಸೀಮೆಎಣ್ಣೆ ಸುರಿಸಿ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾಗ ಪರಿಸರದ ಜನರು ಜಮಾಯಿಸಿದ ಕಾರಣ ಗೂಂಡಾಗಳು ಪರಾರಿಯಾಗಿದ್ದಾರೆ. ಈ ಘಟನೆಯನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ.
ಈ ಎಲ್ಲಾ ಘಟನೆಯನ್ನು ನೋಡುವಾಗ ಮೊನ್ನೆ ಊರ್ವಸ್ಟೋರ್ ನಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಆರೋಪಿಗಳಿಗೆ ಲಘು ಸೆಕ್ಷನ್ ಹಾಕಿ ಕೂಡಲೇ ಜಾಮೀನಿನ ಮೂಲಕ ಬಿಡುಗಡೆ ಗೊಳಿಸಿದ್ದೇ ಈ ರೀತಿಯ ಘಟನೆ ಪುನರಾವರ್ತನೆ ಆಗಲು ಮತ್ತು ಸಂಘಪರಿವಾರದ ಗೂಂಡಾಗಳು ಬೆಳೆಯಲು ಕಾರಣವಾಗಿದೆ.
ಮಂಗಳೂರಿನ ಕಮಿಷನರ್ ವ್ಯಾಪ್ತಿಯ ಪೊಲೀಸರ ವೈಫಲ್ಯವೇ ಸಂಘಪರಿವಾರ ಗೂಂಡಾಗಿರಿಯ ಮೂಲಕ ಜಿಲ್ಲೆಯಲ್ಲಿ ಧ್ವೇಷವನ್ನು ಹರಡಿಸಿ, ಗಲಭೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದು.
ಆದ್ದರಿಂದ ಇಂತಹ ಘಟನೆಯನ್ನು ನೋಡಿ ಸುಮ್ಮನಿರಲು ಸಾದ್ಯವಿಲ್ಲ, ಕೂಡಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಜಿಲ್ಲೆಯ ಸ್ವಾಸ್ಯವನ್ನು ಕೆಡಿಸುವ ಗೂಂಡಾಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಸ್ಡಿಪಿಐ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅದ್ಯಕ್ಷರಾದ ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.