ಮಂಗಳೂರಿನ ಕೊರೋನಾ ಸೋಂಕಿನ ಮೂಲ ಮುಚ್ಚಿ ಹಾಕಲು ಬಿ.ಜೆ.ಪಿ ಯತ್ನ – ಪಿ.ವಿ.ಮೋಹನ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಯಿಂದ ಇದೀಗ ಇತರ ಕಡೆಗಳಲ್ಲಿ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕಿನ ನೈಜ ಮೂಲ ವನ್ನು ಹುಡುಕಲು ಇನ್ನೂ ಸಮಯ ಕೇಳುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರವು ಪ್ರಯತ್ನಿಸುತ್ತಿದೆ. ಬಂಟ್ವಾಳ ದ ಮೂಲ ದ ಕೊರೊನಾ ಸೋಂಕಿಗೂ ಬಿಜೆಪಿಗೂ ನಂಟಿದೆ. ನಂಜನಗೂಡಿನ ಕೊರೊನಾ ಸೋಂಕಿಗೆ ಕೂಡ ಬಿಜೆಪಿಯ ಕೃಪೆ ಇದೆ. ಇದು ಕೊರೊನಾ ಕೇಸರಿ ಅಂದರೆ ತಪ್ಪಾಗಲಾರದು. ಈಗ ನಿಜ ಸ್ಠಿತಿಯನ್ನು ಮರೆಮಾಚಿಸಲು ಇತರರ ಮೇಲೆ ಗೂಬೆಕೂರಿಸುವ ಸಂಚೊಂದು ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಆಪಾದಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕೆಪಿಸಿಸಿ ವಕ್ತಾರರಾದ ಪಿ ವಿ ಮೋಹನ್ ಕೊರೊನಾ ಸೋಂಕು ಹರಡುವಿಕೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ ಮಾತ್ರ ಜನರು ನಂಬುತ್ತಾರೆ. ನಂಜನಗೂಡಿನ ಕೊರೊನಾ ಸೋಂಕು ಪ್ರಕರಣದ ತನಿಖೆ ಮಾಡಲು ಉನ್ನತಮಟ್ಟದ ಅಧಿಕಾರಿಯನ್ನು ಸರ್ಕಾರವು ನೇಮಸಿದೆ. ಅದೇ ಮಾನದಂಡವನ್ನು ಇಲ್ಲಿ ತೀವ್ರ ಸ್ವರೂಪದ ಸಾರ್ವಜನಿಕ ಅನುಮಾನಗಳನ್ನು ಹುಟ್ಟುಹಾಕಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಕರಣಕ್ಕೂ ಉಪಯೋಗಿಸುವ ರಾಜಕೀಯ ನಿರ್ಧಾರವನ್ನು ಸರ್ಕಾರವು ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷ ವು ಆಗ್ರಹ ಪಡಿಸುತ್ತದೆ.
ಇದು ಪತ್ತೆದಾರಿ ಕೆಲಸ. ಬೇರುಮಟ್ಟದಿಂದ ತನಿಖೆ ಆಗಬೇಕು. ಆರೋಗ್ಯ ಅಧಿಕಾರಿಗಳಿಂದ ತನಿಖೆ ನಡೆಸಲು ಬರುದಿಲ್ಲ. ಅವರು ಈಗಾಗಲೇ ಮದ್ಯಂತರ ವರದಿಯನ್ನು ನೀಡಿದ್ದಾರೆ. ಅದನ್ನು ಬಹಿರಂಗ ಪಡಿಸಿದರೆ, ತನಿಖೆಯ ಜಾಡು ತಿಳಿಯುತ್ತದೆ. ಎಷ್ಟು ಪ್ರಮಾಣದ ರಾಜಕೀಯ ಹಸ್ತಕ್ಷೇಪ ಆಗಿದೆಯೆಂದು ವರದಿ ನೋಡಿದರೆ ಜನರಿಗೆ ತಿಳಿಯುತ್ತದೆ. ಅವರು ಬಂಟ್ವಾಳ ದ ಮೂಲ ದ ಬಗ್ಗೆ ಎಷ್ಟು ಪ್ರಮಾಣದಲ್ಲಿ ತನಿಖೆ ಮಾಡಿದ್ದಾರೆ? ವಿದೇಶದಿಂದ ಬಂದ ಯುವಕನನ್ನು ಎಷ್ಟು ಸಲ ಪ್ರಶ್ನಿಸಲು ಸಾದ್ಯವಾಗಿದೆ? ಭಟ್ಕಲ್ ಗೆ ಹಬ್ಬಿರುವ ಕೊರೊನಾ ಸೋಂಕಿಗೂ ಬಂಟ್ವಾಳ ದಿಂದ ಬಂದಿರುವ ಸೋಂಕಿಗೂ ನಂಟಿದೆಯಾ?. ಇದೆಲ್ಲಾ ಬಹಿರಂಗ ಪಡಿಸಬೇಕು. ಸರಿಯಾದ ಅಧಿಕಾರಿಗಳಿಂದ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸದಿದ್ದರೆ ರಾಜ್ಯದ ಜನತೆಯು ವರದಿಯನ್ನು ಸ್ವೀಕರಿಸುದಿಲ್ಲ ಎಂದು ಕಾಂಗ್ರೆಸ್ ಪಕ್ಷ ವು ಸ್ಪಷ್ಟವಾಗಿ ಹೇಳಿದೆ.
ಸಂಸದರು ನೇರ ಹೊಣೆ:
ಬೇರೆ ರಾಜ್ಯ ಗಳಲ್ಲಿ ಸಿಲುಕಿ ಹಾಕಿ ಕೊಂಡ ಕರಾವಳಿ ಭಾಗದ ರಾಜ್ಯದ ಕಾರ್ಮಿಕರ ನ್ನು ಅದರಲ್ಲಿಯೂ ವಿಶೇಷವಾಗಿ ಹೋಟೆಲ್ ನಲ್ಲಿ ಕೆಲಸವನ್ನು ಮಾಡುತ್ತಿರುವ ಬಡಕಾರ್ಮಿಕರನ್ನು ಊರಿಗೆ ವಾಪಾಸು ಕರೆ ತರುವ ವಿಚಾರದಲ್ಲಿ ಸರ್ಕಾರವು ಆಸಕ್ತಿಯನ್ನು ತೋರಿಸುತ್ತಾ ಇಲ್ಲ. ಗಂಭೀರವಾದ ಪ್ರಯತ್ನ ವನ್ನು ಮಾಡುತ್ತಾ ಇಲ್ಲ. ಈ ವ್ಯವಸ್ಥೆ ಗೆ ಇಲ್ಲಿಯ ಎರಡು ಸಂಸದರು ನೇರ ಕಾರಣ ಎಂದು ಕಾಂಗ್ರೆಸ್ ಪಕ್ಷ ವು ಆರೋಪ ಮಾಡುತ್ತದೆ.
ಒರ್ವ ಸಂಸದರು ಬಿಜೆಪಿ ಪಕ್ಷದ ರಾಜ್ಯಘಟಕದ ಅಧ್ಯಕ್ಷ ರು, ಮತ್ತೋರ್ವ ರು ಮಾನ್ಯ ಮುಖ್ಯ ಮಂತ್ರಿ ಗಳ ತೀರಾ ಆಪ್ತರು. ಈ ಭಾಗದ ವಲಸೆ ಕಾರ್ಮಿಕರ ವಿಷಯ ದಲ್ಲಿ ಅವರಿಬ್ಬರು ಸರಿಯಾದ ರೀತಿಯಲ್ಲಿ ಮುರ್ತುವಜಿಕೆಯನ್ನು ವಹಿಸಲಿಲ್ಲ. ಕಾರ್ಮಿಕರಲ್ಲಿ ಬಿಲ್ಲವರು, ಮೋಗವೀರರು ಸಹಿತ ಅನೇಕ ಬಡ ಹಿಂದುಳಿದ ವರ್ಗದವರು ಇದ್ದಾರೆ. ಮಹಾರಾಷ್ಟ್ರ ಸರಕಾರವು ಕರಾವಳಿ ಭಾಗದ ಕಾರ್ಮಿಕರ ನ್ನು ಅವರವ ಊರಿಗೆ ಕಳುಹಿಸಲು ಉತ್ಸುಕತೆಯನ್ನು ತೋರಿಸಿದರೂ, ಕರ್ನಾಟಕ ಸರ್ಕಾರವು ಇನ್ನೂ ಎನ್ ಒ ಸಿ ಯನ್ನು ನೀಡಿಲ್ಲ. ಈಗಾಗಲೇ ಒರಿಸ್ಸಾ, ರಾಜಸ್ತಾನ, ತೆಲಂಗಾಣ , ಉತ್ತರ ಪ್ರದೇಶ ರಾಜ್ಯಗಳು ತಮ್ಮ ರಾಜ್ಯದ ಕಾರ್ಮಿಕರ ನ್ನು ವಾಪಾಸು ಊರಿಗೆ ಕರೆತರುವ ವ್ಯವಸ್ಥೆಯನ್ನು ಮಾಡಿದರೆ, ಕರ್ನಾಟಕ ಸರ್ಕಾರ ವು ಇನ್ನು ಮೀನ ಮೇಷ ಮಾಡುತ್ತಿರುವುದು ಖಂಡನೀಯ.
ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷ ವು ಊರಿಗೆ ಮರಳುವ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲು ಸಿದ್ದ ಎಂದು ಹೇಳಿದೆ.ಮುಂಬೈಯಿಂದ ವಲಸೆ ಕಾರ್ಮಿಕರಿಗೆ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಶ್ರಮಿಕ್ ರೈಲು ಸಂಚಾರ ವ್ಯವಸ್ಥೆ ನ್ನು ಮಾಡಿದೆ. ಆದರೆ ಕರಾವಳಿ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಬರಲು ಶ್ರಮಿಕ್ ರೈಲಿನ ಸಂಚಾರ ವ್ಯವಸ್ಥೆ ಮಾಡಿಲ್ಲ. ರಾಜ್ಯ ಸರ್ಕಾರವು ಬಸ್ಸ್ ಸಂಚಾರಕ್ಕೆ ಇನ್ನು ಹಸಿರು ನಿಶಾನೆ ನೀಡಿಲ್ಲ. ಸಂಸದರು ಊರಲ್ಲಿ ಕೂತು ರಾಜಕಾರಣ ಬಿಟ್ಟು, ಮಹಾರಾಷ್ಟ್ರ ದ ಕರಾವಳಿ ಪ್ರದೇಶದ ವಲಸೆ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿ, ಅವರನ್ನು ಕರೆ ತರುವ ವ್ಯವಸ್ಥೆ ಯನ್ನು ಕೂಡಲೇ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಮನವಿಯನ್ನು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.