Home Mangalorean News Kannada News ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣೆ

ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣೆ

Spread the love

ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣೆ

 

ಮಂಗಳೂರು: ಹಕ್ಕು ಪತ್ರ ವಿತರಣೆ ಸಂದರ್ಭದಲ್ಲಿ ಜನರ ಕಣ್ಣಿನಲ್ಲಿ ಇದ್ದ ತೃಪ್ತಿ ಕಂಡಿದ್ದೇನೆ. ಅವರ ಮನಸ್ಸಿನಲ್ಲಿ ಇದ್ದ ತೃಪ್ತಿ ನಮಗೆ ಸಮಾಧಾನ ತಂದಿದೆ. ನಾವು ಏನೇ ಅಭಿವೃದ್ಧಿ ಕೆಲಸ ಮಾಡಿದರು ಅದು ಬಡವರಿಗಾಗಿ, ಅವರ ಕಣ್ಣೀರು ಒರೆಸುವ ಕೆಲಸಕ್ಕಾಗಿ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ  ಶಾಸಕ ಜೆ.ಆರ್ ಲೋಬೊ ಹೇಳಿದರು.

ಅವರು ನಗರದ ಸೆಬೆಸ್ಟಿಯನ್ ಸಭಾಂಗಣದಲ್ಲಿ ನಡೆದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ  ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದರು. ಇಂದು 400 ಜನರಿಗೆ ಹಕ್ಕು ಪತ್ರ ವಿತರಿಸಲಾಗುವುದು. ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಈ  ಭಾಗದ ಗ್ರಾಮ ಕರುಣಿಕರ ಕರ್ತವ್ಯ ನಿಷ್ಠೆಯಿಂದ ಈ ಕಾರ್ಯವನ್ನು  ಸಾಧಿಸಿದ್ದೇವೆ, ಇಂದು ಹಕ್ಕು ಪತ್ರ ವಿತರಣೆಯಾಗುವ ಜನರಿಗೆ 45 ದಿನಗಳಲ್ಲಿ ಆರ್.ಟಿ.ಸಿ. ನೀಡಲಾಗುವುದು ಎಂದು ಶಾಸಕ ಜೆ.ಆರ್ ಲೋಬೊ ಹೇಳಿದರು.

ಕ್ಷೇತ್ರದ 4000 ಸಾವಿರ ಜನರು ಮನೆ ನಿವೇಶನಕ್ಕಾಗಿ  ಅರ್ಜಿ ಸಲ್ಲಿಸಿರುತ್ತಾರೆ. ಇವರಲ್ಲಿ ಈಗಾಗಲೇ 1000 ಸಾವಿರ ಜನರಿಗೆ ಶಕ್ತಿ ನಗರದಲ್ಲಿ ಫ್ಲಾಟ್ ಮಾದರಿ ನಿವೇಶನ  ನೀಡಲಾಗುವ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ 2000 ಜನರಿಗೆ ನಿವೇಶನ ನೀಡುವ ಗುರಿ ಹೊಂದಿದ್ದೇವೆ.

ಕಾರ್ಯಕ್ರಮದಲ್ಲಿ ಸಾಕೇತಿಕವಾಗಿ ಹಕ್ಕು ಪತ್ರ ವಿತರಿಸಲಾಯಿತು.


Spread the love

Exit mobile version