ಮಂಗಳೂರಿನ ’ನೊಸ್ತಾಲ್ಜಿಯಾ’ ನೃತ್ಯ ಪಂಗಡ ಡಾನ್ಸ್ ಪ್ಲಸ್ನ ಕೊನೆಯ 12ರ ಹಂತಕ್ಕೆ
ಮಂಗಳೂರಿನ ’ನೊಸ್ತಾಲ್ಜಿಯಾ’ ನೃತ್ಯ ಪಂಗಡಕ್ಕೆ ಸೇರಿದ ಗ್ಯಾವಿನ್ ರೊಡ್ರಿಗಸ್, ನಿಕ್ಕಿ ಪಿಂಟೋ ಮತ್ತು ಲಿಯೊನೆಲ್ ಸಿಕ್ವೇರಾರವರು ಡಾನ್ಸ್ ಪ್ಲಸ್3 ರಿಯಾಲಿಟಿ ಶೋ-ನ ಕೊನೆಯ ಹನ್ನೆರಡರ ಹಂತಕ್ಕೆ ತಲುಪಿದ್ದಾರೆ. ಈ ಟೆಲಿವಿಶನ್ ಶೋ ಪ್ರತಿ ಶನಿವಾರ ಹಾಗೂ ಆದಿತ್ಯವಾರದಂದು ಸ್ಟಾರ್ ಪ್ಲಸ್ ಟೆಲಿವಿಶನ್ ಚ್ಯಾನೆಲ್ನಲ್ಲಿ ರಾತ್ರಿ ಎಂಟು ಹಾಗೂ ಹತ್ತು ಗಂಟೆಗೆ ಭಿತ್ತರಿಸಲ್ಪಡುತ್ತಿದೆ.
ಈಗಾಗಲೇ ಜುಲೈ 15 ಮತ್ತು 16 ರಂದು ಭಿತ್ತರಿಸಲ್ಪಟ್ಟ ಎರಡನೇ ಸುತ್ತಿನಲ್ಲಿ, 34 ಸ್ಪರ್ಧಿಗಳಿದ್ದು, ನೊಸ್ತಾಲ್ಜಿಯಾ ಪಂಗಡ ಕೊನೆಯ ಹನೆರಡರ ಹಂತಕ್ಕೆ ತಲುಪಿ ಮಂಗಳೂರಿಗರಿಗೆ ಹೆಮ್ಮೆ ತಂದಿದೆ. ’ಧಾಯ್ ಶ್ಯಾಮ್ ರೋಕ್ ಲೆ’ ಹಾಡಿಗೆ ಮಾಡಿದ ನೃತ್ಯವನ್ನು ಕೊಂಡಾಡಿದ ಪುನೀತ್ರವರು ಇವರು ನಿಜವಾಗಿ ’ಒಂದು ಹಂತ ಮೇಲಿದ್ದಾರೆ’ ಎಂದು ಹೇಳಿದ್ದು ವಿಶೇಷ.
ಎಲ್ಲಾ ಹನ್ನೆರಡು ಪಂಗಡಗಳು ಮುಂದಿನ ಆರು ವಾರಗಳಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಲಿದ್ದು, ಆರು ಪಂಗಡಗಳು ಕೊನೆಯ ಆರರ ಹಂತಕ್ಕೆ ತಲುಪಲಿವೆ. ಆಲ್ಲಿಂದ ಮುಂದಕ್ಕೆ ಜನರ ಮತಗಳು ವಿಜೇತರನ್ನು ಆರಿಸಲಿವೆ.
ಎಲ್ಲಾ ಹನ್ನೆರಡು ಸ್ಪರ್ಧಿಗಳಿಗೆ ಜಾಗತಿಕ್ ಹಿಪ್-ಹೊಪ್ ಚಾಂಪಿಯನ್ ಫಿಕ್-ಶುನ್, ಲ್ಯಾಟಿನ್ ನೃತ್ಯಗಾರರಾದ ಪಾವ್ಲ್-ಬ್ರಿಟಾನಿ ಹಾಗೂ ಕಥಕ್ ನೃತ್ಯಗಾರರಾದ ಪಂಡಿತ್ ಬಿರ್ಜು ಮಹಾರಾಜರ ಜೊತೆಗೆ ನೃತ್ಯಮಾಡುವ ಅವಕಾಶ ದೊರಕಲಿದೆ. ಮಾತ್ರವಲ್ಲದೆ ಫಿಲ್ಮ್ ನಟ ಶಾಹ್ರೂಕ್ ಖಾನ್ ತಮ್ಮ ’ಜಬ್ ಹ್ಯಾರಿ ಮೆಟ್ ಸೇಜಲ್’ ಹೊಸ ಸಿನೇಮಾದ ಪ್ರಚಾರಕ್ಕಾಗಿ ಡಾನ್ಸ್ ಪ್ಲಸ್ ಶೋ-ಗೆ ಬರಲಿದ್ದು ಎಲ್ಲಾ ಸ್ಪರ್ಧಿಗಳಿಗೆ ಅವರ ಜೊತೆಗೆ ನೃತ್ಯ ಮಾಡುವ ಸುವರ್ಣಕಾಶ ದೊರಕಲಿದೆ.
ನೊಸ್ತಾಲ್ಜಿಯಾ ಪಂಗಡವು ದಕ್ಷಿಣ ಭಾರತದಿಂದ್ ಡಾನ್ಸ್ ಪ್ಲಸ್-ಗೆ ಕೊನೆಯ ಹನ್ನೆರಡರ ಹಂತಕ್ಕೆ ಆಯ್ಕೆಯಾದ ಎರಡು ಪಂಗಡಗಳಲ್ಲಿ ಒಂದು. ಇನ್ನೊಂದು ಪಂಗಡ ಹೈದರಾಬಾದ್ನ ಶ್ರೀರಾಮ ನಾಟಕ ನಿಕೇತನ.