Home Mangalorean News Kannada News ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ  ಸಾಧನೆ

ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ  ಸಾಧನೆ

Spread the love

ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ  ಸಾಧನೆ

ಮಂಗಳೂರು: ವಿ ಆರ್ ಸೈಕ್ಲಿಂಗ್ ಮಂಗಳೂರು ತಂಡದ ಧನರಾಜ್ ಕರ್ಕೇರ 1750 ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಭಾಗವಹಿಸಿ, ಅದನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕನ್ನಡಿಗ ಹಾಗೂ ಮಂಗಳೂರಿನ ಮೊದಲ ಸೈಕ್ಲಿಸ್ಟ್ಸ್ ಅನ್ನಿಸಿಕೊಂಡರು.

ಅಲ್ಟ್ರಾ ಸ್ಪೈಸ್ ಎನ್ನುವುದು ಇನ್ಸ್ಪಿಯರ್ ಇಂಡಿಯಾ ನಡೆಸುವ ಭಾರತದ ಅತ್ಯಂತ ಕಠಿಣ ಮತ್ತು ಬಹು ದೂರದ, ಸಹಿಷ್ಣುತೆಯ ಸೈಕಲ್ ರೇಸ್ ಆಗಿದೆ. ಇದರ 3 ನೆಯ ಆವೃತ್ತಿಯಲ್ಲಿ, ಭಾರತದಾದ್ಯಂತದಿಂದ ಬಂದ 11 ಸೈಸ್ಲಿಸ್ಟ್ಸ್ ಗಳು ಭಾಗವಹಿಸಿದ್ದರು. ವಿಶೇಷವೆಂದರೆ, 1750 ಕಿಲೋಮೀಟರ್ ವರ್ಗದಲ್ಲಿ, ಓರ್ವ ಮಹಿಳೆ ರೈಡರ್ ‘ಇಳ ಪಾಟೀಲ್’ಕೂಡ ಭಾಗವಹಿಸಿದ್ದರು.

ಗೋವಾದ ಕಡಲತೀರದಿಂದ ಪ್ರಾರಂಭವಾಗುವ ಈ ಸೈಕ್ಲಿಂಗ್ ಸ್ಪರ್ಧೆ, ಕರಾವಳಿಯ ರಸ್ತೆಗಳಲ್ಲಿ ಹಾದುಹೋಗಿ ಹೊನ್ನಾವರದಲ್ಲಿ ಒಳನಾಡಿಗೆ ತಿರುಗುತ್ತದೆ. ಪಶ್ಚಿಮ ಘಟ್ಟದ ಸಿರಿಮೆ, ಜೋಗದ ಜಲಪಾತದ ಮೂಲಕ ಹಾದುಹೋಗಿ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ವಿರಾಜಪೇಟೆ, ವಾಯ್ನಾಡ್, ಗುಡಲೂರು ಮೂಲಕ ಊಟಿ ತಲುಪುತ್ತದೆ. ಅದೇ ಮಾರ್ಗದಲ್ಲಿ ಹಿಂತಿರುಗಿ, ಗೋವಾದಲ್ಲಿ ಪೂರ್ಣಗೊಳ್ಳುತ್ತದೆ.

4 ರಾಜ್ಯಗಳ ಮೂಲಕ ಹಾದುಹೋಗುವ ಈ ಮಾರ್ಗದಲ್ಲಿ, ಹಲವಾರು ಏರುಇಳಿಕೆಯ ಪ್ರದೇಶಗಳನ್ನು ಕ್ರಮಿಸುತ್ತ ಸವಾರರು, ಸುಮಾರು 22,500 ಮೀಟರುಗಳಷ್ಟು ಎತ್ತರ, 38 ° C ನಿಂದ 8 ° C ವರೆಗಿನ ಉಷ್ಣತೆಯ ಏರುಪೇರುಗಳು, ಊಟ, ನಿದ್ರೆಯ ಕೊರತೆಗಳನ್ನು ನಿಭಾಯಿಸಿ ಮುಂದುವರಿಯಬೇಕಾಗುತ್ತದೆ.

7.10 ಗಂಟೆಗೆ ಶುಭಾರಂಭ ಮಾಡಿದ ಧನರಾಜ್, ತನ್ನ ವಿಶಿಷ್ಟ ಶ್ಯಲಿಯಲ್ಲಿ ಸವಾರಿ ಮಾಡಿ ಒಂದೊಂದೇ ನಿಯಂತ್ರಣ ಸ್ಥಾನಗಳನ್ನು ಕ್ರಮಿಸಿದರು. ಸಾಯಂಕಾಲ ಸುಮಾರು7 ಗಂಟೆಗೆ, ಅವರು 270 ಕಿ.ಮೀ. ಕ್ರಮಿಸಿ ಜೋಗವನ್ನು ದಾಟಿ ಸಾಗರದ ಕಡೆಗೆ ದಾರಿ ಹಿಡಿದಿದ್ದರು. ಆದರೆ ಡಿಹೈಡ್ರೆಷನ್ (ನಿರ್ಜಲೀಕರಣ) ನಿಂದ ಬಳಲಿದ ಅವರನ್ನು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪುನಶ್ಚೇತನಗೊಳಿಸಬೇಕಾಯಿತು. ಚೆನ್ನಾಗಿ ಚೇತರಿಸಿಕೊಂಡು, ಧನರಾಜ್ ಮರುದಿನ ಮುಂಜಾನೆ ಪ್ರಯಾಣವನ್ನು ಮುಂದುವರೆಸಿದರು ಆದರೆ ಈ ಅವಧಿಯಲ್ಲಿ 12 ನಿರ್ಣಾಯಕ ಗಂಟೆಗಳನ್ನು ಕಳೆದುಕೊಂಡರು !! ಮೆಲ್ಲ ಮೆಲ್ಲನೆ ಸುಧಾರಿಸಿಕೊಂಡು, ಧನರಾಜ್ ಚಿಕ್ಕಮಗಳೂರು ದಾಟಿ ರಾತ್ರಿಯಲ್ಲಿ ಮಡಿಕೇರಿ, ವಿರಾಜಪೇಟೆ ಮೂಲಕ ಬೆಳಗಿನ ಜಾವದಲ್ಲಿ ಇರ್ರಿಟ್ಟಿ ತಲುಪಿದರು. ಬೆಳಗಿನ ಉಪಹಾರದ ನಂತರ ವಾಯ್ನಡ್, ಕಲ್ಪೇಟ್ಟ, ಸುಲ್ತಾನ್ ಬತ್ತೇರಿ ಮೂಲಕ ಸಾಯಂಕಾಲ ಗುಡಲೂರು ತಲುಪಿದರು. ತ್ವರಿತ ಭೋಜನದ ನಂತರ, ಮದುಮಲೈ ಅರಣ್ಯದಿಂದ ಸಾಗುವ ಗುಂಡ್ಲುಪೇಟೆ ರಸ್ತೆಯ ಮೂಲಕ ಉದಖಮಂಡಲ ದ ಕಡೆ ಆರೋಹಿಸಿ ನಿಗದಿತ 72 ಗಂಟೆಗಳ ಸಮಯದ ಮುಂಚೆ ಯು-ಟರ್ನ್ ಪಾಯಿಂಟ್ ತಲುಪಿದರು. ದಣಿದ ದೇಹಕ್ಕೆ ಮತ್ತೊಮ್ಮೆ ವಿಶ್ರಾಂತಿ ನೀಡಿ, ಮರುದಿನ ದಿನ ಬೆಳಗ್ಗೆ ಅವರೋಹಣ ಮಾಡಿ ದಿನದ ಅಂತ್ಯದ ವೇಳೆಗೆ ಅವರು ಮಡಿಕೇರಿ ತಲುಪಿದರು. ಮುಂದಿನ 40 ಗಂಟೆಗಳಲ್ಲಿ 600 ಕಿ.ಮೀ. ಕ್ರಮಿಸಿ ಸಾಯಂಕಾಲ ಸುಮಾರು 7 ಗಂಟೆಗೆ ಗೋವ ತಲುಪುವಷ್ಟರಲ್ಲಿ 1750 ಕಿಮೀ ಸವಾರಿ ಪೂರ್ಣಗೊಳಿಸಿದರು

ಭರವಸೆಯನ್ನೇ ಕಳೆದುಕೊಂಡು, ಅನಾರೋಗ್ಯದಿಂದ ಬಳಲಿ, ವಿಷಮ ಪರಿಸ್ಥಿತಿಗಳನ್ನು ನಿಭಾಯಿಸುತ್ತಾ, ಹೋರಾಡಿ ವಿಜಯಿಯಾದ ಧನರಾಜ್ ಮತ್ತು ಅವರ ಸಿಬ್ಬಂದಿವರ್ಗ, ಭಾರತದಲ ಅಲ್ಟ್ರಾ ಸೈಕ್ಲಿಂಗ್ ಇತಿಹಾಸದಲ್ಲಿ ವಿಶಿಷ್ಟವಾದ ಕಥೆಯನ್ನೇ ಬರೆದರು !! ಸುಧೀರ್ ಅಲ್ಬುಕರ್ಕ್ ನೇತೃತ್ವದಲ್ಲಿದ್ದ ಬೆಂಬಲ ತಂಡ, ಧನರಾಜನ್ನು ಮುಕ್ತಾಯದ ಅಂಚಿನವರೆಗೆ ತೆಗೆದುಕೊಂಡೊಯ್ದ, ವಿಜಯಿಯಾದುದಕ್ಕೆ ‘ಅತ್ಯುತ್ತಮ ಸಿಬ್ಬಂದಿ’ ಎಂಬ ಪ್ರಶಸ್ತಿಗೆ ಪಾತ್ರವಾಯಿತು.


Spread the love

Exit mobile version