Home Mangalorean News Kannada News ಮಂಗಳೂರು : ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ 

ಮಂಗಳೂರು : ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ 

Spread the love

ಮಂಗಳೂರು : ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ 

ಮಂಗಳೂರು : ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಆಚರಿಸಲಾಯಿತು.

ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಇವರು ನೆರವೇರಿಸಿ ಮಾತನಾಡಿ ಸಮಾಜದಲ್ಲಿ ಎಷ್ಟು ದಿನ ಬದುಕಿದ್ದೇವೆ ಎನ್ನುವುದರ ಬದಲಿಗೆ ಈ ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ ಎಂದರು ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿಯುವ ಗೃಹರಕ್ಷಕರ ಸೇವೆ ದೇವರ ಸೇವೆ ಎಂದು ಮಾತನಾಡಿದರು. ಯಾವುದೇ ಭದ್ರತೆ ಹಾಗೂ ಸವಲತ್ತು ಇಲ್ಲದೆ ನಿಷ್ಕಾಮ ಸೇವೆ ಮಾಡುವ ಗೃಹರಕ್ಷಕರ ಸೇವೆ ಅನನ್ಯ ಮತ್ತು ಗೃಹರಕ್ಷಕರಿಗೆ ದುಶ್ಚಟಗಳಿಂದ ದೂರವಿರಿ ಮತ್ತು ದುಶ್ಚಟಗಳನ್ನು ತಡೆಯುವ ಕಾರ್ಯಮಾಡಿ ಎಂದು ಕಿವಿಮಾತು ಹೇಳಿದರು. ಗೃಹರಕ್ಷಕರಿಗೆ ತುಳು ಅಕಾಡೆಮಿಯಿಂದ ಆಗುವ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಚಾರ ವಿಭಾಗ ಸಹಾಯಕ ಪೊಲೀಸ್ ಆಯಕ್ತ ಮಂಗಳೂರು ಮಂಜುನಾಥ ಶೆಟ್ಟಿ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿ ಗೃಹರಕ್ಷಕರು ಯಾವುದೇ ಅಪೇಕ್ಷೆಯಿಲ್ಲದೆ ದಿನದ 24 ಗಂಟೆಯು ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಗೃಹರಕ್ಷಕರ ಕೆಲಸ ಶ್ರೇಷ್ಠ ಕೆಲಸ ಎಂದು ಶ್ಲಾಘಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿ.ಜಗದೀಶ್, ಇವರು ಮಾತನಾಡಿ ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಾರೆ. ಕೆಲಸಗಳಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಮತಾನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಮಾತನಾಡಿ ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಪದಕ, ರಾಷ್ಟ್ರಪತಿಗಳ ಶ್ಲಾಘನೀಯ ಪದಕ, ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಪುರಷ್ಕøತರಾದಂತಹ ಉಪಸಮಾದೇಷ್ಠರು ರಮೇಶ್ ಮತ್ತು ಉಡುಪಿ ಹಾಗೂ ಘಟಕಾಧಿಕಾರಿಗಳಾದ ಗೋಪಾಲ್ ಘಟಕಾಧಿಕಾರಿ ಕಡಬ, ವಸಂತ ಕುಮಾರ್ ಬೆಳ್ಳಾರೆ, ಪಾಂಡಿರಾಜ್ ಮೂಡಬಿದ್ರೆ ಘಟಕ ಇವರಿಗೆ ಸನ್ಮಾನ ನಡೆಸಲಾಯಿತು ಹಾಗೂ ಘಟಕಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜಿಲ್ಲಾ ಕಛೇರಿಯ ಸಿಬ್ಬಂದಿಗಳು ಹಾಗೂ ಘಟಕಾಧಿಕಾರಿಗಳು ಮತ್ತು ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.


Spread the love

Exit mobile version