ಮಂಗಳೂರು:  ಅಧಿಕ ಇಳುವರಿಗೆ ಮಣ್ಣು ಆರೋಗ್ಯ ಪರೀಕ್ಷೆ – ಶ್ರೀ ವಿದ್ಯಾ

Spread the love

ಮಂಗಳೂರು: ರೈತರು ತಮ್ಮ ಹೊಲಗದ್ದೆಗಳ ಮಣ್ಣನ್ನು ಆಗಿಂದಾಗೆ ವೈಜ್ಞಾನಿಕವಾಗಿ  ಪರೀಕ್ಷೆ ಮಾಡಿಸಿ ಕೃಷಿ ವಿಜ್ಞಾನಿಗಳ ಸಲಹೆಯಂತೆ ಮಣ್ಣಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪಿ.ಐ ಶ್ರೀ ವಿದ್ಯಾ ಅವರು ತಿಳಿಸಿದ್ದಾರೆ.

ಅವರು ಇಂದು ದ.ಕ ಜಿಲ್ಲಾ ಪಂಚಾಯತ್ , ತೋಟಗಾರಿಕೆ, ಕೃಷಿಇಲಾಖೆ ಮತ್ತು ಕೃಷಿ ವಿಜ್ಞಾನಕೇಂದ್ರ ಕಂಕನಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಕಂಕನಾಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಮಣ್ಣು ಆರೋಗ್ಯ ಅಭಿಯಾನದಡಿ – ಮಣ್ಣು ಆರೋಗ್ಯದ ಮಹತ್ವ ಕುರಿತು ರೈತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮತನಾಡಿದರು. ಮುಂದುವರಿದು ಮಾತನಾಡಿದ ಅವರು ಕೃಷಿ ಲಾಭದಾಯಕವಾಗಲು ರೈತರಿಗೆ ಅಗತ್ಯವಾದ ಎಲ್ಲಾ ನೆರವನ್ನು ಜಿಲ್ಲಾ ಪಂಚಾಯತ್ ವತಿಯಿಂದ ನೀಡುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಹಾಜರಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ: ಕೆಂಪೇಗೌಡ ಅವರು ಮಾತನಾಡಿ ಜಿಲ್ಲೆಯ ಕೃಷಿ ಯೋಗ್ಯ ಭೂಮಿಯನ್ನು 48000 ಗ್ರಿಡ್‍ಳನ್ನಾಗಿ ವಿಭಾಗಿಸಿ 2 ವರ್ಷಗಳಲ್ಲಿ 48000  ಮಣ್ಣು ಮಾದರಿಗಳನ್ನು ಪರೀಕ್ಷಿಸುವ ಗುರಿ ಇದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ 2014-15ನೇ ಸಾಲಿನಲ್ಲಿ ಭತ್ತದ ಬೆಳೆಯಲ್ಲಿ ಅಧಿಕ ಇಳುವರಿ ಪಡೆದ ರೈತರನ್ನು ಸನ್ಮಾನಿಸಲಾಯಿತು. ತೋಟಗಾರಿಕ ಇಲಾಖಾ ಉಪನಿರ್ದೇಶಕ ಡಾ: ಯೋಗೀಶ್ ಕೃಷಿ ಸಹಾಯಕ ನಿರ್ದೇಶಕ ನಾಗರಾಜ್ ಮತ್ತು ಹೆಗ್ಗಡೆ ಮುಂತಾದವರು ಸಭೆಯಲ್ಲಿ ಭಾಗವಯಿಸಿದರು.


Spread the love