ಮಂಗಳೂರು: ಅನೈತಿಕ ಗೂಂಡಾಗಿರಿ – ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಲೋಬೊ

Spread the love

ಮಂಗಳೂರು: ನಗರದಲ್ಲಿ ಅನೈತಿಕ ಗೂಂಡಾಗಿರಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕ ಶಾಕಿರ್ ಅವರನ್ನು ಶಾಸಕ ಜೆ ಆರ್ ಲೋಬೊ ಮಂಗಳವಾರ ಭೇಟಿ ಮಾಡಿ ನ್ಯಾಯ ದೊರಕಿಸುವ ಭರವಸೆ ನೀಡಿದರು.

3-lobo-victimshakir-20150825-002 5-lobo-victimshakir-20150825-004

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು ಮಂಗಳೂರಿಗೆ ಇರುವ ಒಳ್ಳೆಯ ಹೆಸರು ಇಂತಹ ಕೆಲವೊಂದು ಅನೈತಿಕ ಗೂಂಡಾಗಿರಿಯಂತಹ ಘಟನೆಗಳಿಂದ ಕೆಡಲು ಕಾರಣವಾಗುವುದರೊಂದಿಗೆ ಸೌಹಾರ್ದ ವಾತಾವರಣಕ್ಕೆ ಧಕ್ಕೆ ತರುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಈ ಘಟನೆ ತನಗೆ ಅಮಾನವೀಯವಾಗಿದ್ದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿರುವ ಪೋಲಿಸರ ಕ್ರಮ ಶ್ಲಾಘನೀಯ ಎಂದರು. ಇದೇ ವೇಳೆ ಬಂಧಿತ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಲಾಗಿದ್ದು ಪೋಲಿಸ್ ಇಲಾಖೆ ಈ ಘಟನೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದೆ ಎಂದರು. ಘಟನೆಯ ಬಳಿಕ ಯಾವುದೇ ಉದ್ವೇಗಕ್ಕೆ ಒಳಗಾಗದೆ ಸಹನೆ ಕಾಪಾಡಿದ ಮುಸ್ಲಿಂ ಸಮುದಾಯಕ್ಕೂ ಶಾಸಕರು ಅಭಿನಂಧನೆ ಸಲ್ಲಿಸಿದರು.
ಈ ವೇಳೆ ಹೈದರ್ ಪರ್ತಿಪಾಡಿ, ಸಹೇಲ್ ಕಂದಕ್, ಎಸಿ ವಿನಯರಾಜ್, ಅರುಣ್ ಕುವೆಲ್ಲೋ ಇನ್ನಿತರರು ಉಪಸ್ಥಿತರಿದ್ದರು.
ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಸಿರು ಸಂತೋಷ್ ಪೂಜಾರಿ, ಅಭಿರಾಂ ಯಾನೆ ಅಭಿ, ಕಿರಣ್, ಪ್ರವೀಣ್ ಶೆಟ್ಟಿ, ಭುಜಂಗ ಶೆಟ್ಟಿ, ಚಂದ್ರಕಾಂತ ರಾವ್, ಘನಶ್ಯಾಂ, ಧನುಷ್, ಮುತ್ತುರಾಜ್, ಕಿಸಾನ್, ನವೀನ್, ವಿವೇಕ್ ಮತ್ತು ಕಿರಣ್ ಕುಮಾರ್ ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.


Spread the love