Home Mangalorean News Kannada News ಮಂಗಳೂರು ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ

ಮಂಗಳೂರು ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ

Spread the love

ಮಂಗಳೂರು  ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ

ಮಂಗಳೂರು: ನಗರದ ಕೂಳೂರು ಜಂಕ್ಷನ್ ಬಳಿಯ ದೇವಿ ಪ್ರಾದ್ ಹೋಟೇಲೊಂದರಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 13 ವರ್ಷ ಪ್ರಾಯದ ಬಾಲಕನನ್ನು, , ಚೈಲ್ಡ್‍ಲೈನ್ ಮಂಗಳೂರು-1098, ಮತ್ತು ಕಾರ್ಮಿಕ ಇಲಾಖೆ, ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿ ರಕ್ಷಿಸಲಾಗಿದೆ.

ಈ ಬಾಲಕನು ಉತ್ತರ ಕರ್ನಾಟಕ ಮೂಲದ ಕೊಪ್ಪಳ ಜಿಲ್ಲೆಯವನಾಗಿದ್ದು, ಈತನ ಹೆತ್ತವರು ಕೂಲಿ ಕಾರ್ಮಿಕರಾಗಿದ್ದು, ಕುಟುಂಬದಲ್ಲಿ ಬಡತನ ಇರುವ ಕಾರಣ ಹೋಟೇಲ್ ಕೆಲಸಕ್ಕೆ ಸೇರಿರುವುದಾಗಿ, ಊರಿನಲ್ಲಿ 3 ತರಗತಿ ತನಕ ಶಾಲೆಗೆ ಹೋಗಿದ್ದು, ಶಿಕ್ಷಣ ಮುಂದುವರಿಸಬೇಕೆಂಬ ಆಸಕ್ತಿಯಿದ್ದರೂ, ಹೆತ್ತವರು ಕೆಲಸ ಹುಡುಕಿಕೊಂಡು ಮಂಗಳೂರಿಗೆ ವಲಸೆ ಬಂದಿರುವ ಕಾರಣ ಶಾಲೆಯನ್ನು ಅರ್ಧದಲ್ಲಿಯೇ ತ್ಯಜಿಸಿ, ಹೋಟೇಲ್‍ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದೆನೆಂದು ಬಾಲಕನು ಹೇಳಿರುತ್ತಾನೆ.
ಸೂಕ್ತ ವ್ಯವಸ್ಥೆಯಿಲ್ಲದೇ ಬಾಲಕ ಶಿಕ್ಷಣ ವಂಚಿತರಾಗಿದ್ದು, ಶಾಲೆಯಿಂದ ಹೊರಗಿರುವ ಮಗುವಾಗಿರುತ್ತಾನೆ. ಈ ಬಾಲಕನಿಗೆ ಸೂಕ್ತ ಪುನರ್ವಸತಿ, ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ಈ ಬಾಲಕನ ರಕ್ಷಣಾ ತಂಡದಲ್ಲಿ ಕಾರ್ಮಿಕ ಇಲಾಖಾಧಿಕಾರಿಗಳಾದ ಶೇಖರ್ ಗೌಡ, ಗಣಪತಿ ಹೆಗಡೆ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಶ್ರೀನಿವಾಸ್, ಮಂಗಳೂರು ಚೈಲ್ಡ್‍ಲೈನ್-1098ನ ಕೇಂದ್ರ ಸಂಯೋಜಕರಾದ ಶ್ರೀ.ಸಂಪತ್ ಕಟ್ಟಿ ಇವರ ಮಾರ್ಗದರ್ಶನದಂತೆ ಚೈಲ್ಡ್‍ಲೈನ್-1098 ಸಿಬಂಧಿಗಳಾದ ಅಸುಂತ ಡಿ’ಸೋಜ, ಪವಿತ್ರ ಜ್ಯೋತಿಗುಡ್ಡೆ ಇವರುಗಳು ಭಾಗವಹಿಸಿದ್ದರು. ಬಾಲಕನನ್ನು ಮುಂದಿನ ದಿನಗಳಲ್ಲಿ “ಶಾಲೆ ಕಡೆ ನನ್ನ ನಡೆ” ಎಂಬ ಆಂದೋಲನದ ಅಡಿಯಲ್ಲಿ ಮರಳಿ ಶಾಲೆಗೆ ಸೇರಿಸಲಾಗುವು.


Spread the love

Exit mobile version