ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾವಂತ ಹಾಗೂ ಅವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯು ನವೆಂಬರ್ 19 ಮತ್ತು 20 ರಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಉದ್ಯೋಗ ಮೇಳವನ್ನು ಆಯೋಜಿಸಿದೆ. ಈ ಉದ್ಯೋಗ ಮೇಳವು ವಿವಿಧ ಕಂಪೆನಿಗಳಿಗೆ ಅವರಿಗೆ ಸೂಕ್ತವಾದ ಉದ್ಯೋಗಿಗಳನ್ನು ಆರಿಸುವ ಹಾಗೂ ಉದ್ಯೋಗಾಕಾಂಕ್ಷಿ ಯುವಕರಿಗೆ ಸೂಕ್ತ ಉದ್ಯೋಗ ಪಡೆಯುವ ಒಂದು ವೇದಿಕೆಯಾಗಲಿದ್ದು, ಇದರಲ್ಲಿ ಸುಮಾರು 300 ಕಂಪೆನಿಗಳು ಸಕ್ರೀಯವಾಗಿ ಪಾಲ್ಗೊಂಡು ಸಂದರ್ಶನಗಳನ್ನು ನಡೆಸಿ ನೇಮಕಾತಿ ಆದೇಶಗಳನ್ನು ನೀಡುವ ಪ್ರಕ್ರಿಯೆಯನ್ನು ನಡೆಸಲಿದೆ. ಈಗಾಗಲೇ ಮಂಗಳೂರು ಉದ್ಯೋಗಮೇಳ ನೊಂದಾಯಿಸಿಕೊಳ್ಳಲು ಕಂಪೆನಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳ ನೊಂದಣಿಗೆ ನೆರವಾಗಲು ವೆಬ್ ಸೈಟ್ ಅನ್ನು ತೆರೆದು ಅದು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರತ್ಯೇಕ ಕಛೇರಿಯನ್ನು ತೆರೆಯಲಾಗಿದೆ.
ಉದ್ಯೋಗ ಮೇಳದ ವೈಶಿಷ್ಟ್ಯಗಳು:
1) ಉದ್ಯೋಗಕಾಂಕ್ಷಿಗಳಿಗೆ ಸೂಕ್ತ ಉದ್ಯೋಗವನ್ನು ಆರಿಸಲು ನೆರವಾಗಲು ಇmಠಿಟoಥಿಚಿbiಟiಣಥಿ ಇಟಿhಚಿಟಿಛಿemeಟಿಣ ಅeಟಿಣಡಿe ತೆರೆಯಲಾಗುವುದು.
2) ಪಾಲ್ಗೊಳ್ಳಲು ಯಾವುದೇ ಶುಲ್ಕವಿರುವುದಿಲ್ಲ.
3) ಬರುವ ಎಲ್ಲಾ ಕಂಪೆನಿಯ ಅಧಿಕಾರಿಯಗಳಿಗೆ ವಾಹನ ಮತ್ತು ತಂಗುವ ವ್ಯವಸ್ಥೆ ಕಲ್ಪಿಸಲಾಗುವುದು.
4) ತಾಲೂಕು ಕೇಂದ್ರಗಳಲ್ಲಿ ಉದ್ಯೋಗಕಾಂಕ್ಷಿಗಳನ್ನು ಸಂದರ್ಶನಕ್ಕೆ ತಯಾರಿಗೊಳಿಸಲು ಕಾರ್ಯಗಾರಗಳನ್ನು ನಡೆಲಾಗುವುದು.
ಈ ಸದ್ರಿ ಉದ್ಯೋಗ ಮೇಳವನ್ನು ಬೃಹತ್ ಮಟ್ಟದಲ್ಲಿ ಆಯೋಜಿಸುವ ಉದ್ದೇಶವನ್ನು ಹೊಂದಿದ್ದು ಇದರಿಂದ ಹಲವಾರು ನಿರುದ್ಯೋಗ ಯುವಕ- ಯುವತಿಯರಿಗೆ ಪ್ರಯೋಜನವಾಗಲಿದೆ. ಆದ್ದರಿಂದ ಉದ್ಯೋಕಾಂಕ್ಷೆಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ನಿರುದ್ಯೋಗಿ ಯುವಕ-ಯುವತಿಯರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ.
1) ಈ ಸದ್ರಿ ಉದ್ಯೋಗ ಮೇಳವನ್ನು 2015 ನವೆಂಬರ್ 19 ಮತ್ತು 20 ರಂದು ನಡೆಸಲಾಗುವುದು.
2) ಈ ಸದ್ರಿ ಉದ್ಯೋಗ ಮೇಳವನ್ನು ಕೆನರ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು ಇಲ್ಲಿ ಅಯೋಜಿಸಲಾಗಿದೆ.
3) ಈ ಉದ್ಯೋಗ ಮೇಳಕ್ಕೆ “ಮಂಗಳೂರು ಉದ್ಯೋಗ ಮೇಳ” ಎಂದು ಹೆಸರನ್ನು ಇಡಲಾಗಿದೆ.
4) ಪ್ರತ್ಯೇಕವಾದ ಲಾಂಛನವನ್ನು ಈಗಾಗಲೇ ದಿನಾಂಕ 05/10/2015 ರಂದು ಬಿಡುಗಡೆ ಮಾಡಲಾಗಿದೆ.
5) ಉದ್ಯೋಗ ಮೇಳ ಆಯೋಜಿಸುವ ಕುರಿತು ದಿನಾಂಕ 03/08/2015, 10/09/2015, 25/09/2015, 03/10/2015, 05/10/2015 ಹಾಗೂ 14/10/2015 ರಂದು ಸಭೆಗಳನ್ನು ನಡೆಸಲಾಗಿದೆ.
6) ಪ್ರತ್ಯೇಕವಾದ ವೆಬ್ ಸೈಟ್ (Web Site; www.mangaluruudyogamela.com)
7) ಪ್ರತ್ಯೇಕವಾದ ಇ- ಮೇಲ್ ಐಡಿ (Email Id; mangaluruudyogamela@gmail.com)
8) ದಿನಾಂಕ 14/10/2015 ರಂದು ಬೆಂಗಳೂರು ವಿವಿಧ ಕಂಪೆನಿಗಳ ಮುಖ್ಯಸ್ಥರೊಡನೆ ಸಭೆ ನಡೆಸಲಾಗಿದೆ.
9) ವಿವಿಧ ಸರಕಾರಿ ಹಾಗೂ ಖಾಸಗಿ ಕಂಪೆನಿಗಳನ್ನು ಈ ಉದ್ಯೋಗ ಮೇಳಕ್ಕೆ ಆಹ್ವಾನಿಸಲಾಗಿದೆ.
10) ವಿವಿಧ ಕಂಪೆನಿಗಳ ಊಖ, ಊeಚಿಜs ಗಳೊಂದಿಗೆ ದಿನಾಂಕ 26/10/2015 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು.
11) ಈ ಉದ್ಯೋಗಮೇಳ ಆಯೋಜಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
1) ಸಲಹಾ ಸಮಿತಿ
2) ಕೋರ್ ಸಮಿತಿ
3) ಉದ್ಯೋಗಗಳ ನೊಂದಣಾ ಸಮಿತಿ
4) ಪ್ರಚಾರ ಸಮಿತಿ
5) ಕಾನೂನು ಮತ್ತು ಸುವ್ಯವಸ್ಥೆ ಸಮಿತಿ
6) ವಸತಿ ಸಮಿತಿ
7) ತಾಂತ್ರಿಕ ಸಮಿತಿ
8) ಆಹಾರ ಸಮಿತಿ
9) ಸಾರಿಗೆ ಸಮಿತಿ
10) ಶಿಷ್ಠಾಚಾರ ಸಮಿತಿ.
12) ನೊಂದಣಿ ಪ್ರಕ್ರಿಯೆಯನ್ನು ಉದ್ಯೋಗ ಮೇಳದ ಮುಂಚಿತವಾಗಿ ಪ್ರಾರಂಭಿಸಲಾಗುವುದು.
ಈ ಉದ್ಯೋಗ ಮೇಳ ಯಶಸ್ವಿಯಾಗಲು ವ್ಯಾಪಕ ಪ್ರಚಾರ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ನಿಮ್ಮ ಸಹಕಾರವನ್ನು ಕೋರಿದೆ.